ರಾಜ್ಯ ಸುದ್ದಿಗಳು
ಬೀದರ:
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಡಿಸೆಂಬರ್ 16ರಂದು ಕಾರ್ಯಪೃವೃತ್ತರಾಗಿ ಸುಮಾರು 15 ವರ್ಷದ ಇಬ್ಬರು ಬಾಲಕಿಯರನ್ನು ಭಿಕ್ಷೆ ಬೇಡುತ್ತಿರುವುದರಿಂದ ರಕ್ಷಿಸಿ ಸರಕಾರಿ ಬಾಲಕಿಯರ ಬಾಲಮಂದಿರ ಮೈಲೂರ ಬೀದರ ಸಂಸ್ಥೆಯಲ್ಲಿ ಆಶ್ರಯ ಕೊಡಿಸಿದ್ದಾರೆ.
ಬಳಿಕ ಈ ಬಾಲಕಿಯರಿಗೆ ಆಪ್ತ ಸಮಾಲೋಚನೆ ನಡೆಸಿದಾಗ ಸದರಿ ಬಾಲಕಿಯರ ತಂದೆ ತೀರಿಕೊಂಡಿದ್ದಾರೆ. ನಮಗೆ ಶಾಲೆಗೆ ದಾಖಲು ಮಾಡಿರುವುದಿಲ್ಲ. ಹಾಗಾಗಿ ಭಿಕ್ಷೆ ಬೇಡುತ್ತಿದ್ದೇವೆಂದು ಮಕ್ಕಳು ತಿಳಿಸಿರುತ್ತಾರೆ. ಬಳಿಕ ಇಬ್ಬರು ಮಕ್ಕಳನ್ನು ಹಾಗೂ ಅವರ ತಾಯಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರುಪಡಿಸಿ, ಇನ್ಮುಂದೆ ಮಕ್ಕಳನ್ನು ಭಿಕ್ಷೆ ಬೇಡುವುದಕ್ಕೆ ಹಚ್ಚುವುದಿಲ್ಲ. ಈ ಇಬ್ಬರು ಮಕ್ಕಳಿಗೆ ಶಾಲೆಗೆ ಕಳುಹಿಸುತ್ತೇನೆಂದು ತಾಯಿಯಿಂದ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಳ್ಳಲಾಗಿದೆ.
ಏನಾಗಿತ್ತು: ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಡಿಸೆಂಬರ್ 16ರಂದು ತಮ್ಮ ಕಚೇರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಬೀದರ ಪಟ್ಟಣದ ಕಾಲೋನಿಯೊಂದರ ನಿವಾಸಿಗಳಾದ ಸುಮಾರು 15 ವರ್ಷದ ಇಬ್ಬರು ಬಾಲಕಿಯರು ಭಿಕ್ಷೆ ಬೇಡುತ್ತಿರುವುದನ್ನು ನೋಡಿದ್ದಾರೆ. ಆಗ ತಕ್ಷಣವೇ ಜಿಲ್ಲಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗೌರಿಶಂಕರ ಪರತಾಪೂರೆ ಅವರಿಗೆ ಸ್ಥಳಕ್ಕೆ ಕರೆಯಿಸಿ, ಇಬ್ಬರು ಬಾಲಕಿಯರನ್ನು ರಕ್ಷಿಸಲು ನಿರ್ದೇಶನ ನೀಡಿದ್ದಾರೆ.
ಖಡಿಪಿಐಗೆ ನಿರ್ದೇಶನ: ಈ ಇಬ್ಬರು ಬಾಲಕಿಯರಿಗೆ ಅವರ ವಯಸ್ಸಿಗನುಗುಣವಾಗಿ ಶಿಕ್ಷಣ ಅಥವಾ ಜೀವನ ಕೌಶಲ್ಯ ತರಬೇತಿ ನೀಡುವಂತೆ ಸೂಕ್ತ ಕ್ರಮಕೈಗೊಳ್ಳಲು ಇದೆ ವೇಳೆ ಜಿಲ್ಲಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರ ಉಪ ನಿರ್ದೇಶಕರಿಗು ಕೂಡ ನಿರ್ದೇಶನ ನೀಡಿದ್ದಾರೆ.
Be the first to comment