ಕೊರೊನಾ ಕಷ್ಟ ಕಾಲದಲ್ಲಿ ಸತೀಶ ಸೈಲ್ ಕಾರ್ಯ ಶ್ಲಾಘನೀಯ; ನಾಗರಾಜ ನಾರ್ವೇಕರ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯಿಂದ, ಕೋವಿಡ್-19 ರ ಕಷ್ಟಕಾಲದ ಸಂದರ್ಭದಲ್ಲಿ ಅಪ್ರತಿಮ ಸೇವೆಗೈದ ಕಾರವಾರದ ಮಾಜಿ ಶಾಸಕ ಸತೀಶ ಸೈಲ್‍ರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗರಾಜ ನಾರ್ವೇಕರ, ಇಂತಹ ಕಷ್ಟ ಕಾಲದಲ್ಲಿ ಉಚಿತ ಆಂಬುಲೆನ್ಸ್, ಆಕ್ಸಿಜನ್ ಅಲ್ಲದೆ ಈಗ ಯಾರೂ ಮಾಡದೆ ಇರುವ ಸುಮಾರು ಇಪ್ಪತ್ತೊಂದು ಸಾವಿರ ಉಚಿತ ವ್ಯಾಕ್ಸಿನೇಷನ್ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಯಾವುದೇ ಪ್ರತಿಫಲ ಅಪೇಕ್ಷಿಸದೆ ಕೆಲಸ ಮಾಡುತ್ತಿರುವ ಸತೀಶ್ ಸೈಲ್ ಇವರು ಪುನಃ ಶಾಸಕರಾಗಿ ಆಯ್ಕೆ ಆಗಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಸತೀಶ್ ಸೈಲ್ ಮಾತನಾಡಿ, ದೇವರು ತನಗೆ ಕೊಟ್ಟಿದ್ದನ್ನೇ ಕ್ಷೇತ್ರದ ಜನರಿಗೆ ಕೊಡುತ್ತಿದ್ದೇನೆ. ಈಗಾಗಲೇ ಕ್ಷೇತ್ರದ ಜನರಿಗೆ ಉಚಿತ ಮಾಸ್ಕ್, ಆಂಬುಲೆನ್ಸ್, ಆಕ್ಸಿಜನ್ ಹಾಗೂ ಈಗ ಉಚಿತ ವ್ಯಾಕ್ಸಿನೇಷನ್ ಕೊಡುವ ಸೌಭಾಗ್ಯ ನನ್ನದಾಗಿದೆ. ಮತ್ತೂ ಒಳ್ಳೆಯ ಕೆಲಸ ಮಾಡುವ ಯೋಜನೆ ಇದೆ ಎಂದರು.ಈ ಸಂದರ್ಭದಲ್ಲಿ ಅಂಕೋಲಾ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ, ರಾಜೇಶ್ ಎಂ.ನಾಯ್ಕ್, ಕಾರವಾರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವನಾಥ ಕಲ್ಗುಟ್ಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಸತೀಶ್ ವಿ. ನಾಯಕ್ ಬೊಮ್ಮುಗುಡಿ, ಸಿರಸಿಯ ಕಿರಣ್ ನಾಯ್ಕ್ ಭಾಶಿ, ಎಸ್.ಜಿ ಭಟ್ ಉಳ್ಳಾಲ ಹಾಗೂ ಇತರ ಕಾರ್ಯಕರ್ತರು ಹಾಜರಿದ್ದರು.

Be the first to comment

Leave a Reply

Your email address will not be published.


*