ಶುಕ್ರವಾರದಿಂದ ಕೊರೊನಾ ಎರಡನೇ ಲಸಿಕೆ ನಿಡುವ ಅಭಿಯಾನ ಕೆಬಿಎಂಪಿಎಸ್ ಶಾಲೆಯಲ್ಲಿ ಪ್ರಾರಂಭ….! 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಎರಡನೇ ಲಸಿಕೆ ನೀಡಲಾಗುವುದು : ಶಾಸಕ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ತಾಲೂಕಿನಲ್ಲಿ ಸುಮಾರು ೮ ಸಾವಿರಕ್ಕೂ ಹೆಚ್ಚಿನ ಜನರು ಕೊವಿಡ್ ಎರಡನೇ ಲಸಿಕೆಯನ್ನು ನೀಡಲು ಪಟ್ಟಣದ ಹೃದಯ ಭಾಗದಲ್ಲಿರುವ ಕೆ.ಬಿ.ಎಂ.ಪಿ.ಎಸ್. ಶಾಲೆಯಲ್ಲಿ ವ್ಯವಸ್ಥೆ ಮಾಡಿದ್ದು ಶುಕ್ರವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೂ ನೀಡಲಾಗುತ್ತಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಕೊರೊನಾ ಚಿಕಿತ್ಸೆ ಪಡೆದು ಹೋಂ ಕ್ವಾರೆಂಟೈನ್‌ನಲ್ಲಿದ್ದ ಶಾಸಕರು ತಾಲೂಕಿನಲ್ಲಿರುವ ೪೫ ವರ್ಷದ ಮೇಲ್ಪಟ್ಟ ಜನರಿಗೆ ನೀಡಬೇಕಾದ ಎರಡನೇ ಲಸಿಕೆಯನ್ನು ನೀಡಲು ಅಧಿಕಾರಿಗಳೊಂದಿಗೆ ಗುರುವಾರ ಕೆಬಿಎಂಪಿಎಸ್ ಶಾಲೆಗೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.



ಈಗಾಗಲೇ ಮೊದಲನೇ ಲಸಿಕೆ ಪಡೆದುಕೊಂಡಿರುವ ಜನರಿಗೆ ಮಾತ್ರ ಕೆಬಿಎಂಪಿಎಸ್ ಶಾಲೆಯಲ್ಲಿ ಎರಡನೇ ಲಸಿಕೆ ಪ್ರಾರಂಭಿಸಲಾಗುತ್ತದೆ. ಇದರ ನಂತರ ೪೫ ವರ್ಷ ಮೇಲ್ಪಟ್ಟ ನಾಗರಿಕರಿಗೆ ಮೊದಲನೇ ಲಸಿಕೆ ಪ್ರಾರಂಭಿಸಿ ನಂತರ ೧೮ ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಯೋಜನೆ ಹಾಕಿಕೊಂಡಿದೆ ಎಂದು ಅವರು ಹೇಳಿದರು.


ಕ್ಷೇತ್ರದ ಜನರು ಭಯಪಡುವ ಅಗತ್ಯವಿಲ್ಲ:
ಈಗಾಗಲೇ ಯಾವುದೇ ತಾಲೂಕಿನಲ್ಲೂ ತಾಲೂಕಾ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ನೀಡುವ ಸೌಲಭ್ಯವಿಲ್ಲ. ಆದರೆ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ನಡೆದಿದ್ದು ಈಗಾಗಲೇ ಸಾಕಷ್ಟು ಜನರು ಚಿಕಿತ್ಸೆಗೆ ಸ್ಪಂದಿಸಿ ಆರೋಗ್ಯದಿಂದ ಹೊರಬಂದಿದ್ದಾರೆ. ಮತಕ್ಷೇತ್ರದ ಜನರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಶಾಸಕ ನಡಹಳ್ಳಿ ಹೇಳಿದ್ದಾರೆ.
ನಾಳೆಯಿಂದ ಕೇವಲ ೪೫ ಷರ್ವ ಮೇಲ್ಪಟ್ಟವರಿಗೆ ಮಾತ್ರ:
ಮುದ್ದೇಬಿಹಾಳ ತಾಲೂಕಿನಲ್ಲಿ ಸುಮಾರು ೮ ಸಾವಿರಕ್ಕೂ ಹೆಚ್ಚು ೪೫ ಷರ್ವ ಮೇಲ್ಪಟ್ಟ ಜನರಿಗೆ ಎರಡನೇ ಲಸಿಕೆ ನೀಡಬೇಕಾಗಿದ್ದು ಅವರಿಗೆ ಮಾತ್ರ ಶುಕ್ರವಾರ ಲಸಿಕೆ ಪ್ರಾರಂಭಿಸಲಾಗುತ್ತದೆ. ಲಸಿಕೆ ನೀಡುವ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ನಿಯಮ ಪಾಲನೆ ಮಾಡಬೇಕು. ಅಲ್ಲದೇ ಲಸಿಕಾ ಅಭಿಯಾನಕ್ಕೆ ಪೊಲೀಸರು ಅಗತ್ಯ ಬಂದುಬಸ್ತ ಒದಗಿಸಿ ಆರೋಗ್ಯ ಸಿಬ್ಬಂದಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.
ಪುರಸಭೆಯಿಂದ ಶಾಲೆಯು ಸಂಪೂರ್ಣ ಸಾನಿಟೈಜರ್:
ಶುಕ್ರವಾರ ಪ್ರಾರಂಭಗೊಳ್ಳಲಿರುವ ಲಸಿಕಾ ಅಭಿಯಾನಕ್ಕಾಗಿ ಕೆಬಿಎಂಪಿಎಸ್ ಶಾಲೆಯನ್ನು ಪುರಸಭೆ ಅಧಿಕಾರಿ ಭಾರತಿ ಮಾಡಗಿ ಅವರು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸಾನಿಟೈಜರ್ ಮಾಡಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಸತೀಶ ಬಾಗವಾನ, ಪುರಸಭೆ ಆರ್‌ಓ ಭಾರತಿ ಮಾಡಗಿ, ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್.ಕರಡ್ಡಿ, ಸಿಪಿಐ ಆನಂದ ವಾಗ್ಮೋಡೆ, ಬಸಯ್ಯ ನಂದಿಕೇಶ್ವರಮಠ ಇದ್ದರು.

Be the first to comment

Leave a Reply

Your email address will not be published.


*