ಸಿದ್ದಿ ಮಕ್ಕಳ ಕ್ರೀಡಾ ತರಬೇತಿ ಶಿಬಿರಕ್ಕೆ ಶಾಂತಾರಾಮ ಸಿದ್ದಿ ಭೇಟಿ

ವರದಿ: ಕುಮಾರ ನಾಯ್ಕ, ಭಟ್ಕಳ

ಜಿಲ್ಲಾ ಸುದ್ದಿಗಳು

CHETAN KENDULI

ಯಲ್ಲಾಪುರ :

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತರಕನ್ನಡ ವತಿಯಿಂದ ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ಕೇಂದ್ರ ವಿದ್ಯಾನಗರ ನಡೆಯುತ್ತಿರುವ ಸಿದ್ದಿ ಮಕ್ಕಳ ವಿಶೇಷ ಕ್ರೀಡಾ ತರಬೇತಿ ಶಿಬಿರಕ್ಕೆ ವಿಧಾನ ಪರಿಷತ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಮಕ್ಕಳ ಜೊತೆ ಜಾಗಿಂಗ್ ಮಾಡಿದರು.
ಕ್ರೀಡಾ ಕೇಂದ್ರದ ವ್ಯವಸ್ಥೆಗಳನ್ನು ಪರಿಶಿಲಿಸಿ, ಮಕ್ಕಳಿಗೆ ಏನಾದರೂ ತೊಂದರೆ ಇದೆಯೇ ಅಥವಾ ಅವಶ್ಯಕತೆಗಳ‌ ಬಗ್ಗೆ ವಿಚಾರಿಸಿದರು.
ಎಂಟು ದಿನಗಳ ಕಾಲ ನಡೆಯುವ ಈ ತರಬೇತಿಯ ಸದುಪಯೋಗ ಪಡೆದು ಮುಂದೆ ಉತ್ತಮ‌ ಕ್ರೀಡಾಪಟುಗಳಾಗಿ ಹೊರ ಹೊಮ್ಮವಂತೆ ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು.

Be the first to comment

Leave a Reply

Your email address will not be published.


*