ರಾಷ್ಟ್ರೀಯತೆ ಸಾರುವ ಹಿಂದು ಹಬ್ಬಕ್ಕೆ ಅಡೆತಡೆ ಬೇಡಾ: ಸಾರ್ವಜನಿಕ ಗಣೇಶಶೋತ್ಸವ ಮಂಡಳಿ ಸರಕಾರಕ್ಕೆ ಮನವಿ….!!!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ರಾಷ್ಟ್ರೀಯತೆ ಸಾರುವ ಹಿಂದೂಗಳ ಹಬ್ಬವೂ ಆಗಿರುವ  ಗಣೇಶಶೋತ್ಸವ ಆಚರಣೆಗೆ ರಾಜ್ಯ ಸರಕಾರ ಯಾವುದೇ ಅಡೆತಡೆ ಮಾಡಬಾರದು ಎಂದು ಸಾರ್ವಜನಿಕ ಗಣೇಶಶೋತ್ಸವ ಮಂಡಳಿಯವರು ತಹಸೀಲ್ದಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ದೇಶದ ಸ್ವಾತಂತ್ರೋತ್ಸವದ ಪಡೆಯುವಲ್ಲಿ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಏಕಕಾಲಕ್ಕೆ ಆಚರಣೆಯನ್ನು ಮಾಡಿ ಬ್ರಿಟಿಷರಿಗೆ ದೇಶದ ಒಗ್ಗಟ್ಟು ಪ್ರದರ್ಶನ ನೀಡುವಲ್ಲಿ ಗಣೇಶ ಹಬ್ಬವೂ ಬಹುಮುಖ್ಯ ಪತ್ರ ವಹಿಸಿದ ಹಬ್ಬವಾಗಿದೆ ಎನ್ನುವುದು ಯಾರೂ ಮರೆಯುವಂತಿಲ್ಲ. ಇಂತಹ ಹಬ್ಬಕ್ಕೆ ಸರಕಾರ ಸಾರ್ವಜನಿಕವಾಗಿ ಆಚರಣೆಯನ್ನು ಮಾಡುವಲ್ಲಿ ನಿಭದನೆ ಮಾಡುವುದು ದೇಶದ ಹಿಂದುಗಳಿಗೆ ನೋವು ತಂದಂತಾಗಿದೆ. ಆದ್ದರಿಂದ ಕೂಡಲೇ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸರಕಾರದ ನಿಯಮ ಪಾಲನೆ:

ಕೊರೊನಾ ಸಂಕಷ್ಟ ಇಡೀ ಜಗತ್ತಿಗೆ ಎದುರಾಗಿದೆ. ಇದರ ಬಗ್ಗೆ ಸರಕಾರ ಯಾವುದೇ ನಿಯಮಗಳನ್ನು ಪಾಲಿಸಲು ಹೇಳಿದರೂ ಅದಕ್ಕೆ ಮಂಡಳಿಯವರು ಸದಾ ಸಿದ್ದರಿರುತ್ತಾರೆ. ಆದರೆ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅನುವು ಮಾಡಿಕೊಡಬೇಕು ಎಂದು ಮಂಡಳಿಯ ಸದಸ್ಯರು ತಿಳಿಸಿದರು.

ಈ ಸಂದರ್ಭದಲ್ಲಿ ಮುದ್ದೇಬಿಹಾಳ ಸಾರ್ವಜನಿಕ ಗಣೇಶಶೋತ್ಸವ ಮಂಡಳಿಯ ಸಂಚಾಲಕ ಹಣಮಂತ ನಲವಡೆ, ಬಸಯ್ಯ ನಂದಿಕೇಶ್ವರಮಠ, ಮಹಾಂತೇಶ ಬೂದಿಹಾಳಮಠ, ಪುನೀತ ಹಿಪ್ಪರಗಿ, ಆನಂದ ತುಪ್ಪದ, ರಾಜು ಪಾಟೀಲ, ಕಿರಣ ಪಾಟೀಲ, ರಾಜು ಬಳ್ಳೊಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಪಾಟೀಲ, ಪ್ರಥಮದರ್ಜೆ ಗುತ್ತಿಗೆದಾರ ಅಪ್ಪು ಮೈಲೇಶ್ವರ, ಬಸವರಾಜ ಗುಳಬಾಳ, ಪುರಸಭೆ ಸದಸ್ಯ ಬಸವರಾಜ ಮುರಳ ಸೇರಿದಂತೆ ಇತರರಿದ್ದರು.

 

Be the first to comment

Leave a Reply

Your email address will not be published.


*