ರಾಜ್ಯ ಸುದ್ದಿಗಳು
ಉತ್ತರಕನ್ನಡ
ಉತ್ತರ ಕನ್ನಡ ಜಿಲ್ಲೆ ಮೂಲದ ಕೋಚ್ ಕಾಶಿನಾಥ್ ನಾಯ್ಕರವರ ಪುಣೆಯಲ್ಲಿರುವ ಆರ್ಮಿ ಕ್ಯಾಂಪನಲ್ಲಿರುವ ಮನೆಗೆ ಆಗಮಿಸಿದ ನೀರಜ್
ಚೋಪ್ರಾ ರವರು ತಮ್ಮ ಸಾಧನೆಯ ಸಂತಸ ಹಂಚಿಕೊoಡಿದ್ದಾರೆ.
ಕಾಶಿನಾಥರವರ ಪತ್ನಿ ಚೈತ್ರಾ ನಾಯ್ಕ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಕಾಶಿನಾಥ ಮಕ್ಕಳಾದ ದಕ್ಷ, ಲಕ್ಷ ಹಾಗೂ ಅವರ ಮನೆಯ ಸಾಕು ನಾಯಿ ರಾಕಿಯ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟರು.
ಭಾರತೀಯ ಸೇನೆಯಲ್ಲಿ ಸುಬೇದಾರ ಹುದ್ದೆಯಲ್ಲಿರುವ, ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್ಸ್ಟಿಟ್ಯೂಟ್ನಲ್ಲಿ ತರಬೇತುದಾರರಾಗಿರುವ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಕಾಶಿನಾಥ ನಾಯ್ಕ ಅವರು ಈ ಚಿನ್ನದ ಪದಕ ವೀರ ನೀರಜ್ ಚೋಪ್ರಾ ಅವರ ಹಿಂದಿನ ಶಕ್ತಿಯಾಗಿದ್ದರು.
Be the first to comment