ಧಮನಿತರ ಪರವಾಗಿ ಪೊಲೀಸ್ ರಕ್ಷಣೆ ನೀಡುವಂತೆ ಒತ್ತಾಯ ಪ್ರಜಾ ವಿಮೋಚನಾ ಚಳವಳಿ (ಪಿವಿಸಿ ಸ್ವಾಭಿಮಾನ) ರಾಜ್ಯ ಸಮಿತಿ ಪ್ರತಿಭಟಣೆ

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ

 ಮಕ್ಕಳು ದೇವರ ಪ್ರಸಾದ ತಿಂದ ಕಾರಣಕ್ಕೆ ದಲಿತ ಕುಟುಂಬದ ಮೇಲೆ ನಡೆಸಿದ ವ್ಯವಸ್ಥಿತ ದಾಳಿಯನ್ನು ಇಡೀ ಸಂಘಟನೆ ಕಠೋರವಾಗಿ ಖಂಡಿಸುವಂತಹದ್ದು, ಪೊಲೀಸರು ದಮನಿತರ ಪರವಾಗಿ ರಕ್ಷಣೆ ನೀಡಬೇಕು ಎಂದು ಪ್ರಜಾ ವಿಮೋಚನಾ ಚಳವಳಿಯ ರಾಜ್ಯಾಧ್ಯಕ್ಷ ಮುನಿಆಂಜನಪ್ಪ ಒತ್ತಾಯಿಸಿದರು.

CHETAN KENDaULI

ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲುಸರ್ಕಲ್ ನಿಂದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ವಿಶ್ವನಾಥಪುರ ಪೊಲೀಸ್ ಠಾಣೆಯ ಆವರಣಕ್ಕೆ ಆಗಮಿಸಿ ಶೋಷಿತರ ಮೇಲೆ ಆಗುತ್ತಿರುವ ಶೋಷಣೆಯನ್ನು ಖಂಡಿಸಿ ಮಾತನಾಡಿದರು. ತಾಲೂಕಿನ ರಾಮನಾಥಪುರ ಗ್ರಾಮದ ಪರಿಶಿಷ್ಟ ಜಾತಿ, ಆದಿ ದ್ರಾವಿಡ ಪಂಗಡಕ್ಕೆ ಸೇರಿದ ಅರುಣಾ ಮತ್ತು ಕುಟುಂಬದವರ ಮೇಲೆ ಆದಂತಹ ದೌರ್ಜನ್ಯ ಮತ್ತು ಹಲ್ಲೆಗೆ ಸಂಬಂಧಿಸಿದಂತೆ, ಹಲ್ಲೆಕೋರರನ್ನು ಈ ಕೂಡಲೇ ಬಂಧಿಸಬೇಕು. ಕಾನೂನಿನಡಿಯಲ್ಲಿ ಶಿಕ್ಷೆಗೊಳಪಡಿಸಿ ಅವರನ್ನು ಗಡಿಪಾರು ಮಾಡಬೇಕು.

ಮತ್ತೇ ಇನ್ಯಾವುದೇ ಗ್ರಾಮದಲ್ಲಾಗಲೀ, ಎಲ್ಲಾದರೂ ಆಗಲೀ ಈ ತರಹದ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಪೊಲೀಸರು ದಲಿತರಿಗೆ ರಕ್ಷಣೆ ನೀಡುವಂತಾಗಬೇಕು. ಆರೋಪಿಗಳನ್ನು ಬಂದಿಸಲು ತಡಮಾಡಿದ್ದಾರೂ ಏಕೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಛಲವಾದಿ ಮಹಾಸಭಾಧ್ಯಕ್ಷ ಚೌಡಪ್ಪನಹಳ್ಳಿ ಎಂ.ಲೋಕೇಶ್ ಮಾತನಾಡಿ, ದಲಿತರು ಮೂಲನಿವಾಸಿಗಳು, ದಲಿತ ಮಹಿಳೆ ಅರುಣ ಆಶಾ ಕಾರ್ಯಕರ್ತೆಯಾಗಿದ್ದಾರೆ. ಅವರ ಮೇಲೆ ಅಮಾನುಷವಾಗಿ ನಡೆದುಕೊಂಡಿರುವ ಘಟನೆ ಈ ಹಿಂದೆಂದೂ ಕಂಡಿರಲಿಲ್ಲ. ಇದನ್ನು ಖಂಡಿಸುವಂತಹದ್ದು, ದಲಿತರನ್ನು ಶೋಷಣೆಗೆ ಒಳಪಡಿಸುವವರ ಪರವಾಗಿ ಪೊಲೀಸರು ಸಹಕರಿಸಬಾರದು. ಇಂತಹ ಘಟನೆ ಆದ ತಕ್ಷಣ ಆರೋಪಿಗಳನ್ನು ಬಂಧಿಸಬೇಕಿತ್ತು. ಆದರೆ, ಬಂಧಿಸಲು ತಡಮಾಡಿರುವುದು ಸರಿಯಾದ ಕ್ರಮವಲ್ಲ. ದಲಿತರ ಮಕ್ಕಳು ಈಗಲೂ ದೇವಾಲಯದಲ್ಲಿ ಪ್ರಸಾದಕ್ಕಾಗಿ ಕೈಚಾಚುವುದನ್ನು ಮೊದಲು ಬಿಡಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿ ಜನರಿಗೆ ಹಕ್ಕುಗಳನ್ನು ನೀಡಿದ್ದಾರೆ. ಹಕ್ಕುಗಳಿಗೆ ಚ್ಯುತಿಯಾಗದಂತೆ ಪ್ರತಿಯೊಬ್ಬರು ಸಂಘಟಿತರಾಗಬೇಕು ಎಂದು ಹೇಳಿದರು.

ವಿಜಯಪುರ ವೃತ್ತ ನಿರೀಕ್ಷಕ ಕೆ.ಶ್ರೀನಿವಾಸ್ ಮಾತನಾಡಿ, ರಾಮನಾಥಪುರ ಗ್ರಾಮದಲ್ಲಿ ಅರುಣ ಎಂಬ ದಲಿತ ಮಹಿಳೆ ಮತ್ತು ಕುಟುಂಬದವರ ಮೇಲೆ ಸವರ್ಣೀಯರಿಂದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ, ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ, ಎಫ್‌ಐಆರ್ ಸಹ ದಾಖಲಿಸಲಾಗಿತ್ತು. ಇವರಿಗೆ ಪೊಲೀಸ್ ರಕ್ಷಣೆ ಸಹ ನೀಡಿರುತ್ತೇವೆ. ದೌರ್ಜನ್ಯ ಮಾಡಿದವರನ್ನು ಈಗಾಗಲೇ ವಶಕ್ಕೆ ಪಡೆದು, ಅವರನ್ನು ನ್ಯಾಯಾಲಯ ಬಂಧನಕ್ಕೆ ನೀಡಲಾಗಿದೆ. ಮುಂದೆಯೂ ಸಹ ದೌರ್ಜನ್ಯಕ್ಕೆ ಒಳಗಾಗಿರುವವರಿಗೆ ೨೪ ಗಂಟೆಗಳ ಪರವಾಗಿ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಇರುತ್ತದೆ. ಸಂವಿಧಾನದಡಿಯಲ್ಲಿ, ಕಾನೂನಿನಡಿಯಲ್ಲಿ ರಕ್ಷಣೆ ಒದಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳವಳಿಯ ರಾಜ್ಯಾಧ್ಯಕ್ಷ ಮುನಿಆಂಜನಪ್ಪ ನೇತೃತ್ವದಲ್ಲಿ ದಲಿತರ ಮೇಲಿನ ಶೋಷಣೆಯನ್ನು ಖಂಡಿಸಿ, ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ದೌರ್ಜನ್ಯಕ್ಕೊಳಗಾಗಿದ್ದ ಮಹಿಳೆ ಅರುಣಾ ಮತ್ತು ಕುಟುಂಬದವರು, ಪ್ರಜಾ ವಿಮೋಚನಾ ಚಳವಳಿಯ ಪದಾಧಿಕಾರಿಗಳು, ದಲಿತ ಮುಖಂಡರು ಇದ್ದರು.

Be the first to comment

Leave a Reply

Your email address will not be published.


*