ಜಿಲ್ಲೆಗೆ ಕೇಂದ್ರ ವಿಪತ್ತು ಅಧ್ಯಯನ ತಂಡ ಭೇಟಿ : ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಂದ ಮಾಹಿತಿ ಸಲ್ಲಿಕೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಬೆಳೆ ಹಾನಿಯ ಸರ್ವೇಕ್ಷಣ ನಡೆಸಲು ಕೇಂದ್ರದಿಂದ ವಿಪತ್ತು ಅಧ್ಯಯನ ತಂಡ ಭೇಟಿ ನೀಡಿರುವ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಮತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಳೆಯಿಂದಾಗಿ ಹಾನಿಯಾದ ಸಮಗ್ರ ಮಾಹಿತಿಯನ್ನು ಸಲ್ಲಿಕೆ ಮಾಡಿದರು.ಕೇಂದ್ರ ವಿಪತ್ತು ಅಧ್ಯಯನ ತಂಡದ ಮುಖ್ಯಸ್ಥ ಸುಶಿಲ್‌ಪಾಲ್(ಮುಖ್ಯ ನಿಯಂತ್ರಕರು, ಲೆಕ್ಕಪತ್ರ, ಭಾರತ ಸರ್ಕಾರ), ಸದಸ್ಯ ಸುಭಾಷ್ ಚಂದ್ರ (ನಿರ್ದೇಶಕರು, ಕೃಷಿ ಇಲಾಖೆ, ಭಾರತ ಸರ್ಕಾರ) ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಕಳೆದ ಅಕ್ಟೋಬರ್ ಮಾಹೆಯಿಂದ ಜಿಲ್ಲೆಯಲ್ಲಿ ಅತಿವೃಷ್ಠಿ(ಮಳೆ ಹಾನಿ)ಯಿಂದ ಸಂಭವಿಸಿರುವ ಹಾನಿ ಕುರಿತು ಪಿಪಿಟಿ ಮೂಲಕ ಅಂಕಿ ಅಂಶಗಳು ಹಾಗೂ ವಿಡಿಯೋ ತುಣುಕುಗಳ ಸಮೇತ ಸಮಗ್ರವಾಗಿ ತಂಡಕ್ಕೆ ಮಾಹಿತಿ ನೀಡಿದರು.

CHETAN KENDULI

ಮಳೆ ಹಾನಿಯಂದ ಸಂಭವಿಸಿದ್ದ ವಿಡಿಯೋ ತುಣುಕುಗಳನ್ನು ಹಾಗೂ ಛಾಯಾಚಿತ್ರಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಂಗ್ರಹಿಸಿತ್ತು. ಸಭೆಗೂ ಮುನ್ನ ಸಭಾಂಗಣದ ಹೊರಗಡೆ ನಿರ್ಮಿಸಿದ್ದ ಪೋಟೊ ಗ್ಯಾಲರಿ ಹಾಗೂ ಪ್ರಾತ್ಯಕ್ಷೀಕೆ ಮೂಲಕ ಮಳೆ ಹಾನಿ ಬಗ್ಗೆ ವಿವರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಂಡದ ಗಮನ ಸೆಳೆದರು. ದೇವನಹಳ್ಳಿ ತಾಲೂಕಿನ ಕಸವಿಲೇವಾರಿ ಘಟಕ ಮತ್ತು ರೈತರ ಜಮೀನುಗಳಿಗೆ ಕೇಂದ್ರ ವಿಪತ್ತು ತಂಡ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದುಕೊಂಡರು.ಕೇಂದ್ರ ವಿಪತ್ತು ಅಧ್ಯಯನ ತಂಡದ ಮುಖ್ಯಸ್ಥ ಸುಶಿಲ್‌ಪಾಲ್ ಮಾತನಾಡಿ, ಈಗಾಗಲೇ ಹಂತ ಹಂತವಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ವಿಪತ್ತು ಅಧ್ಯಯನ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆಯಾಗಬೇಕಿದೆ. ಈಗಾಗಲೇ ೮೫೭ಕೋಟಿ ೧೨.೫ಲಕ್ಷ ರೂ.ಗಳವರೆಗೆ ರೈತರಿಗೆ ಜಮೆ ಮಾಡಲಾಗಿದೆ. ಮತ್ತಷ್ಟು ಆಗಬೇಕಿದೆ. ಹಾವೇರಿ ಮತ್ತು ದಾರವಾಡ ಕಡೆಗಳಲ್ಲಿ ಹತ್ತಿ ಬೆಳೆ ನಷ್ಟವಾಗಿದೆ. ಚಿಕ್ಕಬಳ್ಳಾಪುರ ಮತ್ತು ತುಮಕೂರಿನಲ್ಲಿ ಶೇ.೮೦ರಷ್ಟು ರಾಗಿ ಮತ್ತು ಇತರೆ ತೋಟಗಾರಿಕಾ ಬೆಳೆ ಹಾಳಾಗಿದೆ. ಫೆಬ್ರವರಿ ಮಾರ್ಚ್‌ನಲ್ಲಿ ದನಗಳಿಗೆ ಮೇವಿನ ಸಮಸ್ಯೆ ಆಗುತ್ತಿದೆ. ರಾಗಿ, ಭತ್ತ, ಕಡಲೇಕಾಯಿ ಬೆಳೆ ನಷ್ಟವಾಗಿ ಹೋಗಿದೆ. ಜಿಲ್ಲಾಡಳಿತಕ್ಕೆ ದನಕರುಗಳಿಗೆ ಅನುಕೂಲವಾಗಲು ಮೇವು ಬೀಜ ವಿತರಿಸುವಂತೆ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಕೆಎಸ್‌ಡಿಎಂಎ ಆಯುಕ್ತ ಡಾ.ಮನೋಜ್‌ರಾಜನ್, ಅಪರ ಕೃಷಿ ನಿರ್ದೇಶಕ ಬಿ.ಬಸವರಾಜು, ಅಪರ ತೋಟಗಾರಿಕಾ ನಿರ್ದೇಶಕ ಬಿ.ಕೆ.ದುಂಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯ.ಇ.ರವಿಕುಮಾರ್, ಜಿಪಂ ಸಿಇಒ ಕೆ.ರೇವಣಪ್ಪ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿಕೃಷ್ಣ, ನಾಲ್ಕು ತಾಲೂಕಿನ ತಹಶೀಲ್ದಾರ್‌ಗಳಾದ ದೇವನಹಳ್ಳಿ ಅನಿಲ್‌ಕುಮಾರ್ ಅರೋಲಿಕರ್, ನೆಲಮಂಗಲ ಮಂಜುನಾಥ್, ದೊಡ್ಡಬಳ್ಳಾಪುರ ಶಿವರಾಜ್, ಹೊಸಕೋಟೆ ಗೀತಾ, ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕಿ ವಿನುತಾ, ತಾಲೂಕು ಸಹಾಯಕ ನಿರ್ದೇಶಕಿ ವೀಣಾ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Be the first to comment

Leave a Reply

Your email address will not be published.


*