ಜಿಲ್ಲಾ ಸುದ್ದಿಗಳು
ಹೊನ್ನಾವರ
ಜಿಲ್ಲೆಯಲ್ಲಿ ಬೆಳೆ ರಕ್ಷಣೆಯ ಬಂದೂಕು ಲೈಸೆನ್ಸ್ ನವೀಕರಣಕ್ಕಾಗಿ ಆಯಾ ಠಾಣಾ ಮಟ್ಟದಲ್ಲಿಯೇ ಪೊಲೀಸ್ ನಿರಾಕ್ಷೇಪಣಾ ವರದಿ ನೀಡಲು ಕ್ರಮ ಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ. ಪನ್ನೇಕರ್ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆ ರಕ್ಷಣೆಗೆ ಸಂಬಂಧಿಸಿದ ಬಂದೂಕು ಲೈಸೆನ್ಸ್ ಗಳ ನವೀಕರಣಕ್ಕಾಗಿ ಲೈಸೆನ್ಸ್ ದಾರರು ತಮ್ಮ ಲೈಸೆನ್ಸ್ ಅವಧಿಯು ಮುಗಿಯುವ ಮುಂಚಿತವಾಗಿ ಸಂಬಂಧಪಟ್ಟ ವ್ಯಾಪ್ತಿಯ ಪೋಲಿಸ್ ಠಾಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಠಾಣಾಧಿಕಾರಿಯವರು ಆಯುಧ ನಿಯಮಾವಳಿಯಂತೆ S-4 ನಮೂನೆಯಲ್ಲಿ ಭರ್ತಿ ಮಾಡಿ ಅರ್ಜಿದಾರರಿಗೆ ನೀಡುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ್ದು, ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ ಎಂದು ಹೊನ್ನಾವರ ಠಾಣೆಯ ಸಿಪಿಐ ಶ್ರೀಧರ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment