ಯಾವುದೇ ಕಾರಣಕ್ಕೂ “ಕಾಸರಕೋಡ್ ಕಡಲತೀರ ಆಮೆಗಳ ಅವಾಸಸ್ಥಾನವೆಂಬ ಘೋಷಣೆ ಬೇಡ”…

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

 

ಹೊನ್ನಾವರ

CHETAN KENDULI

ಕಾಸರಕೋಡು ಕಡಲತೀರವನ್ನು “ಆಮೆಗಳ ಅವಾಸಸ್ಥಾನ” ಎಂದು ಘೋಷಣೆ ಮಾಡಬಾರದು ಎಂದು ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕಾದ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಟೊಂಕಾದಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಕಂಪನಿ ನಿರ್ಮಿಸುತ್ತಿರುವ ವಾಣಿಜ್ಯ ಬಂದರನ್ನು ವಿರೋಧಿಸುವ ಭರದಲ್ಲಿ ಕಲವು ಹೋರಾಟಗಾರರು ಆಮೆಯನ್ನು ಬಳಸಿಕೊಳ್ಳುತ್ತಿದ್ದು , ಕೆಲವು ಆಮೆಗಳು ಅಪರೂಪಕ್ಕೆ ಬಂದು ಟೊಂಕ ಕಾಸರಕೋಡು ತೀರದಲ್ಲಿ ಮೊಟ್ಟೆ ಇಡುವ ವಿದ್ಯಮಾನವನ್ನೇ ದೊಡ್ಡದಾಗಿ ಬಿಂಬಿಸಿ ಟೊಂಕ ಕಾಸರಕೋಡು ಭೂ ಪ್ರದೇಶವನ್ನು ಆಮೆಗಳ ಅವಾಸಸ್ಥಾನವೆಂದು ಘೋಷಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಲು ಹವಣಿಸುತ್ತಿದ್ದಾರೆ.ಹಾಗೇನಾದರೂ ಘೋಷಣೆ ಆದಲ್ಲಿ ಇದು ಹೊನ್ನಾವರದ ಮೀನುಗಾರರ ಪಾಲಿಗೆ ಮರಣ ಶಾಸನವಾಗಲಿದೆ. 

ಕಾರಣ ಘೋಷಣೆಯಿಂದ ನಾವು ಸುಮಾರು 7 ತಿಂಗಳುಗಳವರೆಗೆ ಮೀನುಗಾರಿಕಾ ನಿಷೇಧಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲದೇ ಸುಮಾರು 5 ಕಿ.ಮೀಟರ್ ವ್ಯಾಪ್ತಿಗೆ ಒಳಪಟ್ಟ ತೀರ ಪ್ರದೇಶದಲ್ಲಿ ನಾವು ಮೀನುಗಾರಿಕೆ ಮಾಡುವಂತಿಲ್ಲ. ಸರ್ಕಾರ ಹಾಗೂ ನ್ಯಾಯಾಲಯದ ನಿರ್ದೇಶನದಂತೆ ನಮ್ಮ ಮೀನುಗಾರಿಕಾ ಬೋಟುಗಳಿಗೆ ಹಲವಾರು ರೀತಿಯ ಮಾರ್ಪಾಡು ಮಾಡಬೇಕಾದ ಅನಿವಾರ್ಯತೆಗೆ ನಾವು ಒಳಗಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*