ಚೆಕ್ ಬೌನ್ಸ್ ಆದ ವಿಷಯ ಮನಸ್ಸಿಗೆ ಹಚ್ಚಿಕೊಂಡು ವಿಷ ಸೇವಿಸಿ ಆತ್ಮಹತ್ಯೆ…

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಹೊನ್ನಾವರ

ಕೊಟ್ಟಿರುವ ಚೆಕ್ ಬೌನ್ಸ್ ಆಗಿದ್ದು, ಮಹಿಳೆಯೊಬ್ಬಳು ಮನನೊಂದು ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ತಾಲೂಕಿನ ಟೊಂಕಾದಲ್ಲಿ ನಡೆದಿದೆ. ಈಕೆ ಖಾಸಗಿ ಕಂಪನಿಯಲ್ಲಿ ಐವತೈದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಕಂಪೆನಿಯವರು ಇವರಿಗೆ 18,50,000 ರೂಪಾಯಿ ಚೆಕ್ ನೀಡಿದ್ದು ಇದು ಚೆಕ್ ಬೌನ್ಸ್ ಆದ ವಿಷಯ ಮನಸ್ಸಿಗೆ ಹಚ್ಚಿಕೊಂಡು ಬೆಳಗಿನ ಜಾವ ವಿಷ ಸೇವಿಸಿ ಅಸ್ವಸ್ಥಳಾಗಿದ್ದಳು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

CHETAN KENDULI

ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ,ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೆ ಶರಣಾದ ಮಹಿಳೆ ರಾಧಾ ಚಂದ್ರ ತಾಂಡೇಲ್ ಎಂದು ತಿಳಿದುಬಂದಿದೆ.

Be the first to comment

Leave a Reply

Your email address will not be published.


*