ರಾಜ್ಯ ಸುದ್ದಿಗಳು
ದೇವನಹಳ್ಳ
ತಾಲೂಕಿನ ಮನಗೊಂಡನಹಳ್ಳಿ ಕೆರೆ ಕೋಡಿ ಹರಿದಿದ್ದರಿಂದ ಮಹಿಳೆಯರಿಂದ ದೀಪಾರತಿ ಮತ್ತು ಸಂಪ್ರದಾಯದಂತೆ ಬಾಗಿನ ಅರ್ಪಿಸುವ ಕಾರ್ಯಕ್ಕೆ ಗ್ರಾಮಸ್ಥರು ಚಾಲನೆ ನೀಡಿದರು.ಗ್ರಾಪಂ ಸದಸ್ಯೆ ಮಮತಾ ಶಿವಾಜಿ ಮಾತನಾಡಿ, ಕೆರೆಯೂ ಕೋಡಿ ಹರಿದಿರುವುದು ಸಂತಸ ತಂದಿದೆ. ಕೊರೊನಾ ಇರುವುದರಿಂದ ಬಾಗಿನ ಅರ್ಪಿಸುವ ಕಾರ್ಯ ಮಾಡಲಾಗಿರಲಿಲ್ಲ. ಇದೀಗ ಸರಳವಾಗಿ ಮನೆಯಿಂದ ಒಬ್ಬರಂತೆ ಸದಸ್ಯರು ಸಂಪ್ರದಾಯದಂತೆ ಕೆರೆಗೆ ಬಾಗಿನ ಅರ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಗ್ರಾಮದ ಮುಖಂಡ ಸುಬ್ಬೇಗೌಡ ಮಾತನಾಡಿ, ಮನಗೊಂಡನಹಳ್ಳಿ ಕೆರೆಗೆ ಸುತ್ತಮುತ್ತಲಿನ ಬೆಟ್ಟದ ನೀರು ಹರಿದು ಬರುತ್ತದೆ. ಬೇಸಿಗೆಯಲ್ಲಿ ಬತ್ತಿಹೋಗಿದ್ದ ಕೆರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆಯಲ್ಲಿ ನೀರು ನಿಂತಿದ್ದು, ಕೆರೆ ಕೋಡಿ ಹರಿಯುತ್ತಿದೆ. ಗ್ರಾಮಸ್ಥರೆಲ್ಲರೂ ಸೇರಿ ಬಾಗಿನ ಅರ್ಪಿಸಲು ಮುಂದಾಗಲಾಗಿದೆ ಎಂದು ಹೇಳಿದರು. ಈ ವೇಳೆಯಲ್ಲಿ ಮನಗೊಂಡನಹಳ್ಳಿ ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ಇದ್ದರು.
Be the first to comment