ಜಿಲ್ಲಾ ಸುದ್ದಿಗಳು
ಭಟ್ಕಳ:
ಸಿದ್ಧಾರ್ಥ ಪದವಿ ಪೂರ್ವ ಕಾಲೇಜು, ಭಟ್ಕಳದಲ್ಲಿ ಪಿ.ಯು.ಸಿ ವಿದ್ಯಾರ್ಥಿಗಳಿಗೆ, ಪಿ.ಯು.ಸಿ ಯ ನಂತರದ ಶೈಕ್ಷಣಿಕ ಮಾರ್ಗದರ್ಶನಕ್ಕಾಗಿ “ಪ್ಲೇಸ್‍ಮೆಂಟ್ ಸೆಲ್”ನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಉದ್ಘಾಟಕರಾಗಿ ಆಗಮಿಸಿದ ಸಿಸ್ಟರ್ ಡಯಾನಾ ಎಸ್.ಆರ್.ಎ., ಸೆಂಟ್ ಇಗ್ನೇಸಿಯಸ್ ಹಾಸ್ಪಿಟಲ್, ಹೊನ್ನಾವರ ಇವರು ವಿವಿಧ ಪ್ಯಾರಾಮೆಡಿಕಲ್ ಕೋರ್ಸ್‍ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಸಿ.ಎ. ಜ್ಞಾನೇಶ್ ಮಾನಕಾಮೆ, ಚಾರ್ಟೇಡ್ ಅಕೌಂಟೆಂಟ್ ಭಟ್ಕಳ ಇವರು ಸಿ.ಎ. ಮತ್ತು ಸಿ.ಎಸ್. ಕೋರ್ಸ್‍ಗಳ ಪ್ರವೇಶಕ್ಕೆ ಬೇಕಾದ ಪೌಂಡೇಶನ್ ಕೋರ್ಸ್ ಬಗ್ಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಇದೇ ಶೈಕ್ಷಣಿಕ ವರ್ಷದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಸುಜ್ಞಾನ ಬೈಂದೂರು ಪ್ರಾಂಶುಪಾಲರು, ಸಿದ್ಧಾರ್ಥ ಪದವಿ ಕಾಲೇಜು, ಶಿರಾಲಿ ಇವರು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಪದವಿ ಶಿಕ್ಷಣದಲ್ಲಿ ಆಗುವ ಬದಲಾವಣೆಯನ್ನು ವಿವರಿಸಿ, ಸಾಮಾನ್ಯ ವಿಜ್ಞಾನದಲ್ಲಿ ಎಮ್.ಎಸ್ಸಿ., ಎಮ್.ಕಾಂ., ಬಿ.ಎಡ್.ಗೆ ಉನ್ನತಿಕರಿಸುವ ಮಾಹಿತಿ ನೀಡಿದರು. ರಸಾಯನ ಶಾಸ್ತ್ರದ ಹಿರಿಯ ಉಪನ್ಯಾಸಕರಾದ ಶ್ರೀ ಎಮ್.ಕೆ. ನಾಯ್ಕ ವೃತ್ತಿ ಮಾರ್ಗದರ್ಶನದ ಬಗ್ಗೆ ಮಾತನಾಡಿದರು. ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಯು. ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಶ್ರೀ ಶ್ರೀನಿವಾಸ ನಾಯ್ಕ, ಸಂಚಾಲಕರು, ಪ್ಲೇಸ್‍ಮೆಂಟ್ ಸೆಲ್, ಇವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳುವ ಶೈಕ್ಷಣಿಕ ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಮಾರ್ಗದರ್ಶಕರು ಪಾಲ್ಗೊಂಡಿದ್ದರು. ಬಿಳ್ಕೋಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದರು.
Be the first to comment