ರಾಜ್ಯ ಸುದ್ದಿಗಳು
ದೇವನಹಳ್ಳಿ
ಕಾಂಗ್ರೆಸ್ ಸರಕಾರದಲ್ಲಿ ಆಗಿರುವ ಜನಪರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಪಕ್ಷಸಂಘಟನೆಗೆ ಹೆಚ್ಚಿನ ಒತ್ತನ್ನು ಈ ಭಾಗದ ಮುಖಂಡರು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಪಂ ಸದಸ್ಯೆ ಸರಳ ಶಶಿಕುಮಾರ್ ನಿವಾಸದಲ್ಲಿ ಮುಖಂಡರೊಂದಿಗೆ ಚರ್ಚಿಸಿ ಅವರು ಮಾತನಾಡಿದರು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮೊದಲನೇ ಮತ್ತು ಎರಡನೇ ಅಲೆಯ ತೀವ್ರತೆ ಕಡಿಮೆ ಆಗಿದೆ. ಮೂರನೇ ಅಲೆಯ ನಿರೀಕ್ಷೆಯಲ್ಲಿದ್ದೇವೆ. ಈಗಾಗಲೇ ನಾವು ಮೈಮರೆತಿದ್ದೇವೆ.
ವರದಿಗಳಲ್ಲಿ ನೋಡುತ್ತಿದ್ದೇವೆ. ಮೂರನೇ ಅಲೆ ಅಮೇರಿಕಾ ಮತ್ತು ದೇಶದ ಕೇರಳ ರಾಜ್ಯದಲ್ಲಿ ತೀವ್ರತೆ ಹೆಚ್ಚಾಗುತ್ತಿದೆ ಎಂಬುವುದನ್ನು ನೋಡುತ್ತಿದ್ದೇವೆ. ಕೊರೊನಾ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡರೆ ಮೈ ಜುಂಮ್ ಎನ್ನುತ್ತದೆ. ಯಾವುದೇ ರಾಜಕೀಯ ಪಕ್ಷವಾಗಲೀ ಅಧಿಕಾರದಲ್ಲಿದ್ದಾಗ ಜನರ ಸಂಕಷ್ಟಗಳಿಗೆ ಮಿಡಿಯಬೇಕು. ಆದರೆ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಮನೆಯಿಂದಾಚೆ ಬರದೆ, ಜನರ ಗೋಳು ಕೇಳದೆ ಇರುವ ಸರಕಾರ ಇದೆ ಅದರೆ ಅದು ಬಿಜೆಪಿ ಭ್ರಷ್ಟ ಸರಕಾರವಾಗಿದೆ. ಇದನ್ನು ಪ್ರತಿ ಮುಖಂಡರು ಕಾರ್ಯಕರ್ತರು ಜನರಿಗೆ ಮನದಟ್ಟು ಮಾಡಬೇಕು ಎಂದು ಹೇಳಿದರು.
ಗ್ರಾಪಂ ಮುಖಂಡ ಶಶಿಕುಮಾರ್ ಮಾತನಾಡಿ, ಈ ಭಾಗದಲ್ಲಿ ಕೆರೆಗಳಿಗೆ ಎಚ್.ಎನ್.ವ್ಯಾಲಿ ನೀರು ಬರಬೇಕಾದರೆ, ಮುಖ್ಯವಾಗಿ ಕಾರಣಭೂತರಾದ ಮಾಜಿ ಕೃಷಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಸಲ್ಲುತ್ತದೆ. ಅವರ ಶ್ರಮ ಮತ್ತು ಈ ಭಾಗದ ಜನರೊಂದಿಗೆ ಇರುವ ಸಂಬಂಧದಿಂದಾಗಿ ಇಲ್ಲಿನ ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಸುತ್ತಮುತ್ತಲಿನ ನೂರಾರು ರೈತರಿಗೆ ಹಾಗೂ ಗ್ರಾಮಸ್ಥರಿಗೆ, ಬೋರ್‌ವೆಲ್ ಮತ್ತು ಭಾವಿಗಳಲ್ಲಿ ನೀರು ಬರುವಂತೆ ಆಗಿದೆ ಎಂದು ಹೇಳಿದರು.ಈ ವೇಳೆಯಲ್ಲಿ ಮಾಜಿ ಕೃಷಿ ಸಚಿವ ಕೃಷ್ಣಭೈರೇಗೌಡ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಕಾರಹಳ್ಳಿ ಮುಖಂಡ ಕೃಷ್ಣೇಗೌಡ, ಗ್ರಾಪಂ ಸದಸ್ಯ ಆರ್.ಜಯರಾಮು, ಸರಳಾ, ಕೆಂಪಣ್ಣ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಉಪಾಧ್ಯಕ್ಷ ವಿ.ಶಾಂತಕುಮಾರ್, ಮುಖಂಡರಾದ ಚನ್ನಹಳ್ಳಿ ರಾಜಣ್ಣ, ಅಮೀರ್‌ಜಾನ್, ತಾಜ್‌ಪೀರ್, ಅರ್ಜುನ್, ಬಚ್ಚೇಗೌಡ, ಕಾರಹಳ್ಳಿ ಮುಖಂಡರು, ಕಾರ್ಯಕರ್ತರು ಇದ್ದರು.
Be the first to comment