ಶಾಸಕ ನಡಹಳ್ಳಿ ಕುಟುಂಬದಿಂದ ಮುದ್ದೇಬಿಹಾಳದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 24×7 ದಾಸೋಹ ವ್ಯವಸ್ಥೆ…!!! ರೊಗಿಗಳೊಂದಿಗೆ ವೈದ್ಯರಿಗೆ ಹಾಗೂ ಅಂಬ್ಯೂಲೆನ್ಸ್ ಸಿಬ್ಬಂದಿಗಳಿಗೂ ಪ್ರೋಟಿನಯಕ್ತ ಆಹಾರದ ವ್ಯವಸ್ಥೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

ಕೊರೊನಾ ಎರಡನೇ ಅಲೆಯಿಂದ ಸಂಕಷ್ಟಕ್ಕೀಡಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ, ಸೇವಾನಿರತ ವೈದ್ಯಕೀಯ ಹಾಗೂ ಅಂಬ್ಯೂಲೆನ್ಸ್ ಸಿಬ್ಬಂದಿಗಳಿಗೆ ಪೌಷ್ಠಿಕ ಉಪಾಹಾರ, ಪಾನೀಯ ಹಾಗೂ ಊಟ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜ ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಕುಟುಂಬದಿಂದ ತಾಲೂಕಾ ಆಸ್ಪತ್ರೆಯಲ್ಲಿ ಮೇ.15 ರಿಂದ  24×7 ದಾಸೋಹ ವ್ಯವಸ್ಥೆಯು ಪ್ರಾರಂಭಗೊಳ್ಳಲಿದೆ. 

CHETAN KENDULI

ಸಂಕಷ್ಟದಲ್ಲಿರುವ ಮತಕ್ಷೇತ್ರದ ಜನರಿಗೆ ಸಹಾಯಹಸ್ತವನ್ನು ಚಾಚಿ ಮುಂದಿನ ಚುನಾಣೆಗೆ ಮತಕ್ಕಾಗಿ ವಿವಿಧ ರೀತಿಯ ನಾಟಕವನ್ನಾಡುವುದು ಎಲ್ಲ ಕ್ಷೇತ್ರಗಳಲ್ಲಿಯೂ ಸಾಮಾನ್ಯವಾಗಿ ಕಂಡು ಬರುವ ದೃಶ್ಯವಾಗಿದೆ. ಆದರೆ ಮುದ್ದೇಬಿಹಾಳ ಮತಕ್ಷೇತ್ರದ ಜನರು ಕೊರೊನಾ ಸಂಕಷ್ಟದಲ್ಲಿರುವುದನ್ನು ಕಂಡಿರುವ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಕುಟುಂಬಸ್ಥರು ರೋಗಿಗಳಿಗೆ ಮಾತ್ರವಲ್ಲದೇ ರೋಗಿಗಳ ಆರೋಗ್ಯವನ್ನು ಕ್ಷಣಕ್ಷಣಕ್ಕೂ ವಿಕ್ಷಣೆ ಮಾಡುವ ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ರೋಗಿಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಬರುವ ಅಂಬ್ಯೂಲೆನ್ಸ್ ಸಿಬ್ಬಂದಿಗಳಿಗೂ ಪೌಷ್ಠಿಕ ಉಪಾಹಾರ, ಪಾನೀಯ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿದ್ದು ನಿಶ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ.  

ಅನ್ನ ದಾಸೋಹ ಸರ್ವ ಶ್ರೇಷ್ಠ:

ಮನುಷ್ಯನು ವಿವಿಧ ರೀತಿಯಲ್ಲಿ ದಾನ ದರ್ಮಗಳನ್ನು ಮಾಡುತ್ತಾನೆ. ಕೆಲವರು ಹಣ ದೇಣಿಗೆ ನೀಡಿದರೆ ಇನ್ನೂ ಕೆಲವರು ಅಗತ್ಯ ವಸ್ತುಗಳ ದೇಣಿಗೆ ನೀಡುತ್ತಾರೆ. ಆದರೆ ಶ್ರೀ ಸಿದ್ದಗಂಗಾ ಮಠದಲ್ಲಿ ತಮ್ಮ ವಿದ್ಯಾಬ್ಯಾಸ ಮುಗಿಸಿ ಮಠದಿಂದ ಹೊರಬರುತ್ತಿದ್ದ ಎ.ಎಸ್.ಪಾಟೀಲ ನಡಹಳ್ಳಿ ಅವರು ಮಠದಲ್ಲಿ ಆಗುತ್ತಿದ್ದ ಅನ್ನದಾಹೋಸವನ್ನು ನೋಡಿ ಇದೇ ದಾನ ಸರ್ವಶ್ರೇಷ್ಠದಾನ ಎನ್ನುವುದು ಅರಿತು ಮುಂದಿನ ದಿನಗಳಲ್ಲಿ ನಾನೂ ಕೂಡಾ ಅನ್ನದಾನಿಯಾಗಬೇಕು ಎಂದು ಸಂಕಲ್ಪ ಮಾಡಿ ಹೊರಬಂದ ತಮ್ಮ ಜೀವನದಲ್ಲಿ ಯಶಸ್ಸನ್ನು ಕಂಡು ಮೊದಲು ಮಾಡಿದ್ದು ಪುಸ್ತಕದಾನ ಮಾಡಿ ನಂತರ ಮುದ್ದೇಬಿಹಾಳ ಪಟ್ಟಣದಲ್ಲಿ ನೂತನ ಮನೆ ನಿರ್ಮಿಸಿ ದಾಹೋಸ ನಿಲಯವೆಂದು ನಾಮಕರಣ ಮಾಡಿದರು. ಸದ್ಯಕ್ಕೆ ಕೊರೊನಾ ಸಂಕಷ್ಟದಲ್ಲಿ ತಮ್ಮ ದಾಹೋಶ ನಿಲಯಕ್ಕೆ ತಕ್ಕಹಾಗೆ ನಡಹಳ್ಳಿ ಕುಟುಂಬವನ್ನು ಶ್ಲಾಘನೀಯ ಕಾರ್ಯ ಮಾಡುತ್ತಿದೆ.

ಮುದ್ದೇಬಿಹಾಳ ಪುರಸಭೆ ಮಾಜಿ ಸದಸ್ಯ ಬಸಯ್ಯ ನಂದಿಕೇಶ್ವರಮಠ ಸಹಕಾರದಲ್ಲಿ ಪುರಸಭೆ ಸದಸ್ಯೆ ಸಂಗಮ್ಮ ದೇವರಹಳ್ಳಿ ಜಿಲ್ಲಾ ಆಸ್ಪತ್ರೆಯಲ್ಲಿನ ಆಹಾರ ವಿತರಣೆಯ ಮೇಲುಸ್ತುವಾರಿ ವಹಿಸಿದ್ದು ಬೆಳಿಗ್ಗೆ ಉಪಹಾರ, ಮದ್ಯಾಹ್ನ ಮತ್ತು ರಾತ್ರಿ ಊಟ, ಬೆಳಿಗ್ಗೆ ಪ್ರೋಟಿನ್ ಯುಕ್ತ ಕಾಳು ಹಣ್ಣು ಮೊಟ್ಟೆ, ಬೇಡಿಕೆಗನುಗುಣವಾಗಿ ಪ್ರೋಟಿನಯುಕ್ತ ರಾಗಿ ಹಾಗೂ ಹುರುಳಿ ಗಂಜಿ ವ್ಯವಸ್ಥೆಯನ್ನು ಕೊರೊನಾ ರೋಗಿಗಳಿಗೆ ಹಾಗೂ ವೈದ್ಯರಿಗೆ ಮತ್ತು ಅಂಬ್ಯೂಲೆನ್ಸ್ ಸಿಬ್ಬಂದಿಗಳಿಗೆ ಒದಗಿಸಲಿದ್ದಾರೆ.

Be the first to comment

Leave a Reply

Your email address will not be published.


*