ಮುದ್ದೇಬಿಹಾಳಕ್ಕೆ ಬೇಟಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ….! ತಾಲೂಕಿಗಾದ ಅನ್ಯಾಯವನ್ನು ಶೀಘ್ರದಲ್ಲಿಯೇ ಸರಿಪಡಿಸುವ ಭರವಸೆ….!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಮುದ್ದೇಬಿಹಾಳ ತಾಲೂಕು ಮಾತ್ರವಲ್ಲದೇ ಇಡೀ ವಿಜಯಪುರ ಜಿಲ್ಲೆಯ ಜನತೆಯ ರಕ್ಷಣೆ ನನ್ನ ಮೇಲಿದೆ. ಆದ್ದರಿಂದ ಕೊರೊನಾ ಎರಡನೇ ಅಲೆಯಲ್ಲಿನ ದುಸ್ಥಿತಿಯಿಂದ ಹೊರಗಡೆ ಬರುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಅಲ್ಲಿನ ಸಮಸ್ಯೆಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದೇನೆ. ಅದರಂತೆ ಮುದ್ದೇಬಿಹಾಳ ತಾಲೂಕಿನಲ್ಲಿ ಎದುರಾಗಿರುವ ಆಕ್ಸಿಜನ್ ಪ್ಲಾಂಟ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆ ಹರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಶುಕ್ರವಾರ ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿ ತಾಲೂಕಾ ಅಧಿಕಾರಿಗಳ ಕೊರೊನಾ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಪ್ರತಿಯೊಂದು ಜಿಲ್ಲೆಯಲ್ಲಿ 390 ಎಲ್.ಎಂ.ಪಿ. ಆಕ್ಸಿಜನ್ ಪ್ಲಾಂಟ್ ಸ್ಥಾಪನೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿಗೆ ಮಂಜೂರಾತಿಯಾಗಿ ಬೇರೆಡೆಗೆ ಸ್ಥಳಾಂತರವಾದ ಬಗ್ಗೆ ಈಗಾಗಲೇ ರಾಜ್ಯ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು ಯಾವ ಕಾರಣಕ್ಕೆ ಸ್ಥಳಾಂತರವಾಯಿತು ಎನ್ನುವುದರ ಬಗ್ಗೆ ಮಾಹಿತಿ ಬಂದಿಲ್ಲಾ. ಆದರೆ ಆಕ್ಸಿಜನ್ ಪ್ಲಾಂಟ್ ಸುತ್ತಮುತ್ತಲಿನ ಹಲವು ತಾಲೂಕು ಮತ್ತು ಜಿಲ್ಲೆಗಳ ಗಡಿರೇಖೆಯಲ್ಲಿರುವ ಮುದ್ದೇಬಿಹಾಳ ತಾಲೂಕಿನಲ್ಲಿ ಸ್ಥಾಪನೆಯಾದರೆ ಹೆಚ್ಚಿನ ಅನುಕೂಲವಾಗುತ್ತದೆ. ಆದ್ದರಿಂದ ಸ್ಥಳಾಂತರಗೊಂಡಿರುವ ಆಕ್ಸಿಜನ್ ಪ್ಲಾಂಟನ್ನು ಅತೀ ಶೀಘ್ರವಾಗಿಯೇ ಮುದ್ದೇಬಿಹಾಳ ತಾಲೂಕಿಗೆ ಮರು ಸ್ಥಾಪನೆಯಾಗುವಂತೆ ಸರಕಾರಕ್ಕೆ ಒತ್ತಾಯ ಮಾಡಿ ಮರು ಮಂಜೂರಾತಿ ಮಾಡಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.



ಇನ್ನೂ ಕೊರೊನಾ ಲಸಿಕೆ ಕಾಳು ಸಂತೆಯಲ್ಲಿ ಮಾರಾಟವಾಗುತ್ತಿರುವ ಮಾಹಿತಿ ಬಂದಿದ್ದು ಅಂತಹ ವ್ಯಕ್ತಿಗಳನ್ನು ಬಂಧಿಸಿ ಅವರ ಮೇಲೆ ದೂರನ್ನು ದಾಖಲಿಸಲಾಗಿದೆ. ಅಲ್ಲದೇ ಇಂತಹ ಪ್ರಕರಣ ಮುಂದಿನ ದಿನಗಳಲ್ಲಿ ಆಗದಂತೆ ಎಚ್ಚರಿಕೆಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೂ ಸರಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಸಿಬ್ಬಂದಿಗಳಿಗೆ ಶೀಘ್ರದಲ್ಲಿಯೇ ವೇತನ ಮಂಜೂರು ಮಾಡುವ ಬಗ್ಗೆ ಸರಕಾರದ ಮಟ್ಟದಲ್ಲಿ ಗಮನ ಸೇಳೆಯುತ್ತೇನೆ ಎಂದು ಅವರು ಹೇಳಿದರು.

ಪೌಷ್ಠಿಕಾಂಶದ ದಿನಸಿ ಹಂಚದಿದ್ದರೇ ವಜಾಗೊಳಿಸಲಾಗುವುದು:

ಮುದ್ದೇಬಿಹಾಳ ತಾಲೂಕಿನ ಗ್ರಾಮೀಣ ಮಟ್ಟದಲ್ಲಿ ಅಂಗನವಾಡಿ ಕೇಂದ್ರಗಳಿಂದ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಹಂಚುವ ಸಾಮಗ್ರಿಗಳನ್ನು ಸರಿಯಾಗಿ ಹಂಚಿಕೆ ಮಾಡುತ್ತಿಲ್ಲ. ಸರಕಾರದಿಂದ ಬರುವಂತಹ ಮೊತ್ತೆ ಕಾಳುಗಳನ್ನು ಕಾಳುಲ ಸಂತೆಯ ಅಂಗಡಿಗಳಿಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿಗಾರರ ಆರೋಪಕ್ಕೆ ಉತ್ತರಿಸಿದ ಸಚಿವೆ ಸ್ಥಳದಲ್ಲಿಯೇ ಇದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಗುಗ್ಗರಿ ಅವರನ್ನು ತರಾಟೆಗೆ ತೆಗೆದುಕೊಂಡು ಇಲಾಖೆಯಿಂದ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ವಿತರಿಸಬೇಕಾದ ಪೌಂಷ್ಟಿಕಾಂಶ ಸಾಮಗ್ರಿಗಳನ್ನು ಸರಿಯಾಗಿ ವಿತರಿಸಬೇಕು ಇಲ್ಲವಾದಲ್ಲಿ  ಸೇವೆಯಿಂದಲೇ ವಜಾಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಖಾರವಾಗಿ ಹೇಳಿದರು.

ಸಚಿವರು ಮನವಿ:

ಕೊವಿಡ್ ಇಡೀ ಮನುಕುಲಕ್ಕೆ ಶಾಪವಾಗಿ ಪರಿಣಮಿಸುತ್ತಿರುವ ದಿನಗಳಲ್ಲಿ ಜನ ಸಾಮಾನ್ಯರು ಬಹಳ ಎಚ್ಚರದಿಂದರಬೇಕು. ಮಾಸ್ಕ ಇಲ್ಲದೇ ಮನೆ ಹೊಗಗೆ ಬರಬಾರದು ಹಾಗೂ ಸಾನಿಟೈಜರ್ ಕಡ್ಡಾಯವಾಗಿ ಬಳಕೆ ಮಾಡಬೇಕು. ಅಲ್ಲದೇ ಆರೋಗ್ಯದಲ್ಲಿ ಕೊರೊನಾ ಸೋಂಕಿನ ಮುನ್ಸೂಚನೆ ಕಂಡು ಬಂದಲ್ಲಿ ನೇರವಾಗಿ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆಗೆ ಒಳಪಡಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಸಾರ್ವಜನಿಕರಿಗೆ ಮನವಿ ಮಾಡಿದರು.

Be the first to comment

Leave a Reply

Your email address will not be published.


*