ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಈ ಹಿಂದೆ ಹಲವಾರು ಹೋರಾಟಗಳನ್ನು ಮಾಡಿಕೊಂಡು ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಡ ಹೇರಲಾಗಿತ್ತು. ಇದುವರೆಗೂ ವರದಿಯನ್ನು ಜಾರಿಗೊಳಿಸುವಲ್ಲಿ ಸರಕಾರ ವಿಫಲವಾಗಿದೆ. ಬಿಜೆಪಿ ಸರಕಾರದ ಮೇಲೆ ಬಹಳಷ್ಟು ನಂಬಿಕೆ ಇದೆ. ಈ ಆಯೋಗವನ್ನು ಜಾರಿಗೊಳಿಸುತ್ತಾರೆಂಬ ನಂಬಿಕೆ ಇದೆ ಎಂದು ಮಾದಿಗ ದಂಡೋರ ರಾಜ್ಯಾ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರ ಮತ್ತು ಮಾದಿಗ ಸಂಘಟನೆಯ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ರಾಜ್ಯ ಸಚಿವರಾಗಿ ನೂತನವಾಗಿ ಆಯ್ಕೆಯಾದ ಎ.ನಾರಾಯಣಸ್ವಾಮಿ ಅವರು ಕ್ಷೇತ್ರಕ್ಕೆ ಆ.16ರಂದು ಆಗಮಿಸುವ ವೇಳೆ ಸಮಾಜದ ಎಲ್ಲಾ ಮುಖಂಡರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರನ್ನು ಬರಮಾಡಿಕೊಂಡು ಸಾದಹಳ್ಳಿ ಟೋಲ್‌ಬಳಿ ಅದ್ದೂರಿ ಸ್ವಾಗತ ಕೋರಿ, ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಬೈಕ್ ರ್ಯಾಲಿ ಮೂಲಕ ಕೊರೊನಾ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ, ಟೋಲ್ ಬಳಿ ಅವರಿಗೆ ಸದಾಶಿವ ಆಯೋಗದ ವಿಚಾರವಾಗಿ ಮನವಿ ಮಾಡಲಾಗುವುದು. ತದ ನಂತರ ಕೆಲಕಾಲ ಬಂದಂತಹ ಎಲ್ಲಾ ಮುಖಂಡರನ್ನು ಅಭಿನಂದಿಸಿ, ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಗೆ ಅವರನ್ನು ಆತ್ಮೀಯವಾಗಿ ಕಳುಹಿಸಿಕೊಡಲಾಗುತ್ತದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಕಳೆದ ಬಾರಿ ಕೇಂದ್ರ ಸರಕಾರದ ಸಂಪುಟ ವಿಸ್ತರಣೆ ಆದ ನಂತರ ದಲಿತರಿಗೆ 12 ಜನರಿಗೆ 8ಜನರಿಗೆ ಎಸ್‌ಟಿಗಳಿಗೆ ಸಚಿವ ಸ್ಥಾನ ನೀಡಿದೆ. ಬಿಜೆಪಿಯ ಮೇಲೆ ಎಲ್ಲೋ ಒಂದು ಕಡೆ ದಲಿತ ವಿರೋದಿ ಎಂಬ ಅಪವಾದವಿತ್ತು. ಈಗಿನ ಬೆಳವಣಿಗೆಯನ್ನು ನೋಡುತ್ತಿದ್ದರೆ, ಬಿಜೆಪಿಯು ದಲಿತರ ಪರವಾಗಿದೆ ಎಂದು ನಮಗೆಲ್ಲರಿಗೂ ಕಂಡುಬರುತ್ತಿದೆ. ಎ.ನಾರಾಯಣಸ್ವಾಮಿ ಅವರು ಮೊದಲ ಬಾರಿಗೆ ಚಿತ್ರದುರ್ಗ ಎಂಪಿ ಆಗಿದ್ದಾರೆ. ಅವರನ್ನು ಗುರ್ತಿಸಿ ಕೇಂದ್ರದ ರಾಜ್ಯ ಸಚಿವ ಸ್ಥಾನ ನೀಡಿರುವುದು ಸಂತಸದ ವಿಷಯವಾಗಿದೆ. ಕೇಂದ್ರದ ಪ್ರಧಾನಿ ನರೇಂದ್ರಮೋದಿ ಅವರಿಗೆ ನಮ್ಮ ಸಮಾಜದ ಪರವಾಗಿ ಅಭಿನಂದಿಸುತ್ತೇವೆ ಎಂದರು.
ಈ ವೇಳೆಯಲ್ಲಿ ಕರ್ನಾಟಕ ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಜಿ.ಮಾರಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮುನಿರಾಜು, ತಾಲೂಕು ಅಧ್ಯಕ್ಷ ಕದಿರಪ್ಪ, ಡಿಎಸ್‌ಎಸ್‌ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಆದಿ ಜಾಂಭವಂತ ಟ್ರಸ್ಟ್ ಕಾರ್ಯದರ್ಶಿ ತಿರುಮಳೇಶ್, ತಾಲೂಕು ಮಾದಿಗ ದಂಡೋರ ಪ್ರಧಾನ ಕಾರ್ಯದರ್ಶಿ ಮುನಿರಾಜು, ದೇವನಹಳ್ಳಿ ಪುರಸಭಾ ಮಾಜಿ ಅಧ್ಯಕ್ಷ ಎಂ.ಎನ್.ನಾರಾಯಣಸ್ವಾಮಿ, ಸಮಾಜ ದಲಿತ ಮಹಾಸಭಾದ ಅಧ್ಯಕ್ಷ ವೀರಪ್ಪ, ಮುಖಂಡರಾದ ಆನಂದ್, ವೆಂಕಟಗಿರಿಕೋಟೆ ಮೂರ್ತಿ, ಗ್ರಾಪಂ ಸದಸ್ಯ ಮಾರಪ್ಪ, ಕಲಾತಂಡದ ಜಿಲ್ಲಾಧ್ಯಕ್ಷ ಎಂ.ಮುನಿರಾಜು, ಬಿಜೆಪಿಯ ಟೌನ್ ಘಟಕ ಅಧ್ಯಕ್ಷ ವಿಜಯಪುರ ರಾಘವ, ಪ್ರಭು, ಸತೀಶ್, ಮಹೇಶ್, ಮತ್ತಿತರರು ಇದ್ದರು.
Be the first to comment