ಜಿಲ್ಲಾ ಸುದ್ದಿಗಳು
ಕುಮಟಾ
ತಾಲೂಕಿನ ಮಿರ್ಜಾನ ಸಮೀಪ ಸರ್ವಿಸ್ ರಸ್ತೆಯಲ್ಲೇ ಮಿರ್ಜಾನ್ ಸಂತೆ ನಡೆಯುತ್ತಿದ್ದು, ಸ್ವಲ್ಪ ಯಾಮಾರಿದರೂ ಅಫಘಾತವಾಗುವ ಸಾದ್ಯತೆಗಳು ಹೆಚ್ಚಾಗಿದ್ದು, ಸಂತೆಯನ್ನು ಪಂಚಾಯತ ಆವರಣದಲ್ಲೇ ಮಾಡುವಂತೆ ಮಿರ್ಜಾನ್ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್ ಪ್ರಾರಂಭದ ಮೊದಲು ಮಿರ್ಜಾನ್ ಪಂಚಾಯತ ಆವರಣದಲ್ಲೇ ಮಾರ್ಕೇಟ್ ನಡೆಯುತ್ತಿದ್ದು, ಕೋವಿಡ್ ಸಮಯದಲ್ಲಿ ಸ್ವಲ್ಪವೇ ಜನರು ಬಂದು ತರಕಾರಿ ಇನ್ನಿತರ ವಸ್ತುಗಳನ್ನು ಸರ್ವಿಸ್ ರಸ್ತೆಯಲ್ಲಿ ಮಾರಾಟಕ್ಕೆ ಇಟ್ಟಿಕೊಂಡಿದ್ದರು.ಇದು ಕ್ರಮೇಣ ಹೋದಂತೆ ಎಲ್ಲರು ಅದೇ ಸ್ಥಳಗಳಲ್ಲಿ ವಸ್ತುಗಳನ್ನು ಮಾರಾಟ ಮಾಡಲು ಆರಂಬಿಸಿದ್ದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.ತ್ಯಾಜ್ಯ ತಿನ್ನಲು ಬಂದ ದನ ಕರುಗಳು ಸಹ ರಸ್ತೆಯಲ್ಲೇ ಓಡಾಡುವದರಿಂದ ಅಪಘಾತಗಳು ಸಂಭವಿಸುವ ಲಕ್ಷಣ ಹೆಚ್ಚಾಗಿದೆ.
ಸರ್ವಿಸ್ ರಸ್ತೆಯಲ್ಲಿ ಮಾರ್ಕೇಟ್ ನಡೆಯುವದರಿಂದ ಏಕಮುಖ ಸಂಚಾರವಿರುವ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಅಲ್ಲಲ್ಲಿ ರಸ್ತೆಗಳಲ್ಲಿ ವಾಹನ ನಿಲ್ಲಿಸಿಡುವುದು ಅಫಘಾತಗಳಿಗೆ ಆವ್ಹಾನ ನೀಡುವಂತಿದೆ. ಇಲ್ಲಿವರೆಗೆ ಹಲವು ಚಿಕ್ಕ ಪುಟ್ಟ ಅಫಘಾತಗಳು ನಡೆದಿದ್ದು, ದೊಡ್ಡ ಘಟನೆ ಸಂಭವಿಸುವ ಮೊದಲು ಮಿರ್ಜಾನ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ತಶಿಲ್ದಾರ ಎಚ್ಚೆತ್ತು ತಕ್ಷಣವೇ ಮಿರ್ಜಾನ ಪಂಚಾಯತ ಆವರಣದಲ್ಲೇ ಸಂತೆ ಮಾಡಲು ಅವಕಾಶ ಮಾಡಿಕೊಡಬೇಕು ಮತ್ತು ಸರ್ವಿಸ್ ರಸ್ತೆಯಲ್ಲಿ ಯಾವುದೇ ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಬಾರದೆಂದು ಸ್ಥಳಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Be the first to comment