ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಉದ್ದೇಶಕ್ಕೆ ಭೂಪರಿವರ್ತನೆ ಆದೇಶ ಹಿಂಪಡೆಯುವಂತೆ ಡಿಸಿಗೆ ಒತ್ತಾಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೋ.ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ) ಆಕ್ರೋಶ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು

ದೇವನಹಳ್ಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿವಿಧ ಕಡೆಗಳಲ್ಲಿ ಗಣಿಗಾರಿಕೆ ಯಗ್ಗಿಲ್ಲದೆ ನಡೆಯುತ್ತಿದ್ದು, ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಆದೇಶವನ್ನು ನೀಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ) ಜಿಲ್ಲಾಧ್ಯಕ್ಷ ಎಂ.ವೆಂಕಟೇಶ್ ಒತ್ತಾಯಿಸಿದ್ದಾರೆ. 

CHETAN KENDULI

ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿ ಗ್ರಾಮದ ಸರ್ವೆನಂ.೮೪ರಲ್ಲಿ ೧ ಎಕರೆ ೩೫ ಗುಂಟೆ ಜಮೀನು ಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ಉದ್ದೇಶಕ್ಕೆ ಭೂಪರಿವರ್ತನೆ ಆದೇಶ ನೀಡಿದ್ದು, ಇದೇ ಗ್ರಾಮದ ಸರ್ವೆನಂ.೯, ೧೦, ೬೬, ೬೭ರಲ್ಲಿ ಗಣಿ ಗುತ್ತಿಗೆ ನವೀಕರಣಕ್ಕಾಗಿ ತಮ್ಮ ಇಲಾಖೆಗೆ ಬಂದಿರುವ ಅರ್ಜಿಗಳನ್ನು ತಡೆಹಿಡಿಯಬೇಕು. ಗ್ರಾಮದ ಸರ್ವೆನಂ.೧೧ರಲ್ಲಿ ೧ಎಕರೆ ೨೭ ಗುಂಟೆ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿರುವುದನ್ನು ಸ್ಥಳ ಪರಿಶೀಲನೆ ನಡೆಸಬೇಕು. ಸರ್ವೆ ನಂ.೧೦ರಲ್ಲಿ ೧೦ಎಕರೆ ೦೩ಗುಂಟೆ ಪೈಕಿ ಈ ಹಿಂದೆ ೮ಎಕರೆಗೆ ಗಣಿಗಾರಿಕೆ ಲೈಸನ್ಸ್ ನೀಡಿದ್ದು, ವಿಸ್ತೀರ್ಣಕ್ಕೂ ಮೀರಿ ಸುಮಾರು ೧೫ ಎಕರೆವರೆಗೂ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸರಕಾರಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಸಾರ್ವಜನಿಕರ ಆಸ್ತಿ ನಾಶ ಪಡಿಸಿರುವುದು ಹಾಗೂ ಸರ್ವೆ ನಂ.೬೬ ಮತ್ತು ೬೭ರ ಜಮೀನುಗಳು ಗ್ರಾಮಠಾಣಕ್ಕೆ ಹೊಂದಿಕೊಂಡಂತೆ ಇರುವುದರಿಂದ ಅಕ್ರಮ ಗಣಿಗಾರಿಕೆ ಮಾಡುತ್ತಿರುವುದು ಸುತ್ತಮುತ್ತಲಿನ ಜನರ ಜೀವನಕ್ಕೆ ಅಪಾಯವನ್ನುಡ್ಡುವಂತಾಗಿದೆ. ಈ ಎಲ್ಲಾ ಸರ್ವೆ ನಂಬರ್‌ಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ಕ್ರಷರ್‌ಗಳಿಗೆ ನೀಡಿರುವ ಪರವಾನಗಿ ಮತ್ತು ಭೂಪರಿವರ್ತನೆಯನ್ನು ರದ್ದುಗೊಳಿಸಿ ಸಾರ್ವಜನಿಕರ ಆಸ್ತಿ ಮತ್ತು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಡಿ.೮ರಂದು ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮಕೈಗೊಂಡಿರುವುದಿಲ್ಲ ಶೀಘ್ರವಾಗಿ ಈ ಎಲ್ಲಾ ಸರ್ವೆನಂಬರ್‌ಗಳಲ್ಲಿ ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆ ಮತ್ತು ಕ್ರಷರ್‌ಗಳಿಗೆ ಮುಕ್ತಿ ಕಾಣಿಸುವಂತೆ ಜಿಲ್ಲಾಧಿಕಾರಿಗಳು ಖುದ್ದು ಸ್ಥಳಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

Be the first to comment

Leave a Reply

Your email address will not be published.


*