ಬಗ್ಗೋಣ ರಸ್ತೆಗೆ ಹೈರಾಣಾದ ಗ್ರಾಮಸ್ಥರು…! ಕಣ್ಣಿದ್ದೂ ಕುರುಡಾದ ಅಧಿಕಾರಿಗಳು…!!!

ವರದಿ: ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕುಮಟಾ:

CHETAN KENDULI

ಬಗ್ಗೋಣ ಮುಖ್ಯ ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಇಲ್ಲಿನ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳದೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕುಮಟಾ ತಾಲೂಕಿನ ಬಗ್ಗೋಣ ವಾರ್ಡಿನ ಮುಖ್ಯ ರಸ್ತೆಯು ಸುಮಾರು 500 ಮೀಟರ್ ವರೆಗೆ ಎಲ್ಲಿ ನೋಡಿದರಲ್ಲಿ ದೊಡ್ಡ ದೊಡ್ಡ ಹೊಂಡಗಳಿಂದ ತುಂಬಿದೆ. ಜನಸಾಮಾನ್ಯರ ಓಡಾಟಕ್ಕೂ, ವಾಹನ ಸಂಚಾರಕ್ಕೂ ದುಸ್ತರವಾಗಿದೆ.ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು ವಾಹನಗಳ ಚಕ್ರಗಳು ಹೊಂಡದಲ್ಲಿ ಬಿದ್ದು ಕಸರು ಮೆತ್ತಿದ ನೀರುಪಾದಚಾರಿಗಳ ಮೈ ಮೇಲೆ ಎರಗುತ್ತಿದೆ. ಈ ರಸ್ತೆಯಲ್ಲಿ ಸಂಚರ ಪ್ರಯಾಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಅಧಿಕಾರಿಗಳು ಮಾತ್ರ ದುರಸ್ತಿ ಕಾರ್ಯ ಕೈಗೊಳ್ಳದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ತಾಲೂಕಿನ ಊರಕೇರಿ,ತಲಗೋಡ್, ಹೆಬ್ಬಾನಕೇರಿ, ಅರೆಅಂಗಡಿ, ಕಡತೋಕ, ಗುಡ್ಡನಕಟ್ಟಾ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ತೆರಳಲು ಸಂಕಷ್ಟ ಪಡಬೇಕಾದ ಸ್ಥಿತಿ ಇದೆ. ಈ ಕುರಿತು ಹಲವಾರು ಬಾರಿ ಜನಪ್ರತಿಗಳನ್ನು, ಅಧಿಕಾರಿಗಳನ್ನು ಕಾಡೀ ಬೇಡಿದ್ದು ಇದೆ ಆದರೆ ರಸ್ತೆ ಮಾತ್ರ ರಪೇರಿ ಭಾಗ್ಯ ಕಂಡಿಲ್ಲ. ಪದೇ ಪದೇ ಈ ಮುಖ್ಯ ರಸ್ತೆಗೆ ಹಣ ಮಂಜೂರಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆಯೇ ಹೊರತು ರಸ್ತೆ ಅಭಿವೃದ್ಧಿಗೆ ಮಾತ್ರ ಮುಂದಾಗುತ್ತಿಲ್ಲಾ ಎಂದು ಗಣೇಶ ನಾರಾಯಣ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

Be the first to comment

Leave a Reply

Your email address will not be published.


*