ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ರಾಜ್ಯದಲ್ಲಿ ಆರ್ಥಿಕವಾಗಿ ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಅತಿ ಹಿಂದುಳಿದ ಸಮಾಜ ಅದು ಸವಿತಾ ಸಮಾಜ ಈ ಸಮಾಜದ ನಾವುಗಳು ನಮ್ಮ ಕುಲವೃತ್ತಿ ಕ್ಷೌರಿಕ ಕಾಯಕವನ್ನು ನಂಬಿಕೊಂಡು ಬದುಕುತ್ತಿದ್ದು, ಈ ಸಮಾಜಕ್ಕೆ ಸರಕಾರದ ನಿರ್ದಿಷ್ಟ ಮೀಸಲಾತಿ ಸೌಲಭ್ಯಗಳು ಇಲ್ಲ, ಕೇವಲ ವೃತ್ತಿಯಿಂದ ಬರುವ ಅಲ್ಪಾದಾಯದಲ್ಲಿ ಪರಿವಾರ ನಿರ್ವಹಣೆ ಮಾಡುವ ಅನಿವಾರ್ಯತೆ ಇದೆ, ಮತ್ತು ಕ್ಷೌರಿಕ ವೃತ್ತಿಯನ್ನು ಮಾಡುವ ಜನರಿಗೆ ಮನೆ ಮತ್ತು ಅಂಗಡಿಗಳನ್ನು ಬಾಡಿಗೆ ನೀಡುವುದಿಲ್ಲ ಹೀಗಾಗಿ ಕರ್ನಾಟಕ ರಾಜ್ಯದ ಎಲ್ಲಡೆ ಎಲ್ಲಾ ತಾಲೂಕು ಹೋಬಳಿ ಜಿಲ್ಲಾಗಳಲ್ಲಿಯ ಸವಿತ ಸಮಾಜ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸುತ್ತಿದ್ದು ನಮ್ಮ ಸಮಾಜದ ಬಹುದಿನದ ಬೇಡಿಕೆಯಾದ ಸವಿತಾ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಮನವಿಯನ್ನು ಮಾಡುತ್ತಿದ್ದು ಅದರಂತೆ ಇಂದು ಮುದ್ದೇಬಿಹಾಳ ತಾಲೂಕು ಸವಿತಾ ಸಮಾಜದಿಂದ ತಹಶಿಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದೆ ಎಂದು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರವಿ ಹಡಪದ ( ತೇಲಂಗಿ) ಹೇಳಿದರು.
ಅವರು ಮಂಗಳವಾರ ತಹಶಿಲ್ದಾರ ಅವರಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿ, ಮಾನವ ಸಮಾಜದ ಸೌಂದರ್ಯ ಕ್ಕೆ ನಿರ್ಮಾತರಾದ ನಮ್ಮ ಸಮಾಜವನ್ನು 21 ನೇ ಶತಮಾನದಲ್ಲಿ ಸಹ ಅಸ್ಪೃಶ್ಯತೆಯಿಂದ ಕಾಣುವ ಪರಿಸ್ಥಿತಿ ಈಗಲೂ ಜೀವಂತವಾಗಿದೆ,ನಮ್ಮ ಸಮಾಜದ ಸರ್ವೂತಮುಖ ಬೆಳವಣಿಗೆ ಗೆ ಮತ್ತು ನಮ್ಮನ್ನು ಕೀಳಾಗಿ ಕಾಣುವ ಪರಿಸ್ಥಿತಿ ಸುಧಾರಣೆ ಗೆ ಸವಿತಾ ಸಮಾಜವನ್ನು ಸರಕಾರ ಮೀಸಲಾತಿ ಒದಗಿಸಬೇಕು ನಮ್ಮ ಸಮಾಜದ ಬಹುದಿನದ ಬೇಡಿಕೆಯಂತೆ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಮತ್ತು ಕ್ಷೌರಿಕ ವೃತ್ತಿಯನ್ನು ಮತ್ತು ವೃತ್ತಿಯನ್ನು ಮಾಡುವ ಜನಾಂಗಕ್ಕೆ ಜಾತಿ ನಿಂದೆನೆ ಮತ್ತು ನಿಷೇಧ ಪದಬಳಕೆ ಮಾಡುವವರ ಮೇಲೆ ಜಾಮೀನು ರಹಿತ ಕ್ರಿಮಿನಲ್ ಕೇಸ್ ಹಾಕಲು ಅನುಕೂಲವಾಗುವಂತೆ ‘ ಸವಿತಾ ಸಮಾಜ ಹಕ್ಕುಗಳ ರಕ್ಷಣಾ ಕಾಯ್ದೆ’ ರೂಪಿಸಬೇಕು,ವೃತ್ತಿಯನ್ನು_ ಜಾತಿಯನ್ನು ನಿಂದನೆ ಮಾಡಿದವರಿಗೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಸಿ ಮನವಿಯನ್ನು ಸಲ್ಲಿಸಿದ್ದು ,ರಾಜ್ಯದೆಲ್ಲಡೆ ಈ ಬೇಡಿಕೆ ಈಡೇರಿಸಲು ಮನವಿಯನ್ನು ಸಲ್ಲಿಸಲಾಗುತ್ತಿದೆ.
ರಾಜ್ಯ ಸರಕಾರ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನಮಗೆ ಇದೆ,ಒಂದು ವೇಳೆ ಭರವಸೆ ಈಡೆರದೆ ಹೋದರೆ ರಾಜ್ಯಾದ್ಯಂತ ಸಮಾಜ ಏಕಕಾಲಕ್ಕೆ ಹೋರಾಟ ಮಾಡಲಿದೆ ಎಂದು ರವಿ ಹಡಪದ ( ತೇಲಂಗಿ) ಹೇಳಿದರು
ಮನವಿಯನ್ನು ಗ್ರೇಡ್ 2 ತಹಶಿಲ್ದಾರ ಡಿಜೆ ಕಳ್ಳಿಮನಿ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೂಮ್ಮಾಯಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಗೌರವ ಅಧ್ಯಕ್ಷ ಮಲ್ಲಣ್ಣ ಹಡಪದ, ಉಪಾಧ್ಯಕ್ಷ ಈರಣ್ಣ ಈಡ್ಲೂರ ,ಪ್ರಧಾನ ಕಾರ್ಯದರ್ಶಿ ಮಹೇಶ ಹಡಪದ,ಸಂಘಟನಾ ಕಾರ್ಯದರ್ಶಿ ದೇವಿಂದ್ರ ಶಹಾಪೂರ ,ನಾಗರಾಜ ಹಡಪದ, ಶ್ರೀನಿವಾಸ ಶಹಾಪೂರ,ಶರಣು ಹಡಪದ, ಮುಂತಾದವರು ಉಪಸ್ಥಿತರಿದ್ದರು.
Be the first to comment