ರಾಜೀವ್ ಗಾಂಧಿ ಜನ್ಮದಿನ: ಆ.20ಕ್ಕೆ ದೇಶಭಕ್ತಿ ಗೀತೆ ಸ್ಪರ್ಧೆ

ವರದಿ-ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು 

ಶಿರಸಿ

ದೇಶದ ಪ್ರಧಾನಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರ 77ನೇ ಹುಟ್ಟು ಹಬ್ಬದ ಅಂಗವಾಗಿ ಉತ್ತರಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಆ.20ರಂದು ಶುಕ್ರವಾರ ಬೆಳಿಗ್ಗೆ ಶಿರಸಿ ರೋಟರಿ ಸೆಂಟರ್ (ರೋಟರಿ ಆಸ್ಪತ್ರೆ ಪಕ್ಕ) ದೇಶಭಕ್ತಿ ಗೀತೆಗಳ ಗಾಯನಸ್ಪರ್ಧೆಹಮ್ಮಿಕೊಳ್ಳಲಾಗಿದೆ.ಆಸಕ್ತರು ಕೂಡಲೇ ನೋಂದಾಯಿಸಿಕೊಳ್ಳಬಹುದು ಎಂದು ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕುಮಾರ್ ಜೋಶಿ ಸೊಂದಾ ತಿಳಿಸಿದ್ದಾರೆ. ನಿರ್ಣಾಯಕರಾಗಿ ಖ್ಯಾತ ಸುಗಮ ಸಂಗೀತ ಗಾಯಕ ರವಿ ಮೂರೂರು , ಎಂ.ಎಂ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಂಗೀತ ಶಿಕ್ಷಕ ಗೋಪಾಲಕೃಷ್ಣ ಹೆಗಡೆ ತಾರಗೋಡು ಹಾಗೂ ಗಾಯಕಿ ವಸುಧಾ ಶಾಸ್ತ್ರಿ ಸೊಂದಾ ಪಾಲ್ಗೊಳ್ಳಲಿದ್ದಾರೆ.

CHETAN KENDULI

ನೊಂದಣಿ ಮಾಡಲು 9591974977/8277741391/9448690035 ಮೂಲಕ ಸಂಪರ್ಕಿಸಬಹುದಾಗಿದೆ ಸ್ಪರ್ಧಾಳುಗಳು ಮುಂಜಾನೆ 9: 30 ರೊಳಗೆ ಸ್ಥಳದಲ್ಲಿ ಹಾಜರಿರಬೇಕೆಂದು ತಿಳಿಸಲಾಗಿದೆ.ಸ್ಪರ್ಧೆಯಲ್ಲಿ 18 ರಿಂದ 30 ವರ್ಷದೊಳಗಿನವರಿಗೆ ಅವಕಾಶವಿದ್ದು ದೇಶಭಕ್ತಿಗೀತೆಗಳನ್ನು ಮಾತ್ರ ಹಾಡಬೇಕು. ಗೀತೆಯ ಅವದಿ 4 ರಿಂದ 5 ನಿಮಿಷ ಮಾತ್ರ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು ಎಂದು ತಿಳಿಸಲಾಗಿದೆ.ವಿಜೇತರಿಗೆ ನಗದು ಬಹುಮಾನ ಕೊಡಲಾಗುವುದು.ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಆಯೋಜಕರು ಸ್ಪರ್ಧೆ ಕೊವಿಡ್ ನಿಯಂತ್ರಣ ನಿಯಮಾನುಸಾರ ನಡೆಯುವುದರಿಂದ ಕೇವಲ ಸ್ಪರ್ಧಿಗಳಿಗೆ ಅಷ್ಟೇ ಅವಕಾಶ ಎಂದಿದ್ದಾರೆ.

Be the first to comment

Leave a Reply

Your email address will not be published.


*