ಜಿಲ್ಲಾ ಸುದ್ದಿಗಳು
ಮಸ್ಕಿ
ತಾಲೂಕಿನ ಮೆದಿಕಿನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ಪಕ್ಕದ ಪ್ರದೇಶ ಕೊಳಚೆಗುಂಡಿಯಂತಾಗಿದ್ದು , ಆಸ್ಪತ್ರೆಯ ಅಕ್ಕ-ಪಕ್ಕದಲ್ಲಿಯೇ ಕಸದ ತಿಪ್ಪೆ ಗುಂಡಿ,ಔಷದಿಗಳನ್ನು ಸುಟ್ಟು ಹಾಕುತ್ತಾರೆ. ಈ ಕಾರಣವಾಗಿಯೇ ಅಲ್ಲಿ ರೋಗಗಸ್ಥ ವಾತಾವರಣ ನಿರ್ಮಾಣವಾಗಿದೆ. ಆದರೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ,
ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ . ಹೀಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಗಳನ್ನು ರೋಗಾಣುಗಳು ಸ್ವಾಗತಿಸುತ್ತಿವೆ. ಹಾಗೆಯೇ ಸಾರ್ವಜನಿಕರು ಹೆರಿಗೆಯ ನಂತರ ಅವರಿಗೆ ಬಳಸಲು ನೀರು ಸಹ ಇರುವುದಿಲ್ಲ, ರಾತ್ರಿಯಾದರೆ ಸಾಕು ಚೇಳು, ವಿಷ ಜಂತುಗಳ ಕಾಟ ಹೆಚ್ಚಾಗಿದ್ದರೂ ಇತ್ತಕಡೆ ಗಮನ ಹರಿಸಿ ಆಸ್ಪತ್ರೆಯ ಸುತ್ತಮುತ್ತಲು ಒಂದು ವಿದ್ಯುತ್ ದೀಪವು ಹಾಕಿರುವುದಿಲ್ಲ, ಈ ವಿಚಾರವಾಗಿ ಗ್ರಾಮ ಪಂಚಾಯಿತಿ ಆಡಳಿತದ ಗಮನಕ್ಕೆ ತಂದರು ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನನಾಯಕರು ಕೂಡಲೇ ಈ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯರಾದ ಬಸವರಾಜ್ ಹಿರೇಮಠ ಎಚ್ಚರಿಸಿದ್ದಾರೆ.
Be the first to comment