ಏಪ್ರಿಲ್ 24 ರಿಂದ KRS ಪಕ್ಷದ ಜನ ಚೈತನ್ಯ ಯಾತ್ರೆ: ಜಿಲ್ಲಾಧ್ಯಕ್ಷ ವೆಂಕಟೇಶ್

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ರಾಜ್ಯದಲ್ಲಿ ಬ್ರಷ್ಟಾಚಾರ ಮುಕ್ತ ರಾಜಕಾರಣದ ಬಗ್ಗೆ ಜನ ಜಾಗೃತಿ ಮೂಡಿಸಲು ಏಪ್ರಿಲ್ 24 ರಿಂದ ಮೊದಲ ಹಂತದಲ್ಲಿ 28 ದಿನಗಳ ಕಾಲ ಜನ ಚೈತನ್ಯ ಯಾತ್ರೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ ಹಮ್ಮಿಕೊಂಡಿದೆ ಎಂದು ರಾಯಚೂರು ಜಿಲ್ಲಾ ಘಟಕ ಮಸ್ಕಿ ಯ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. 

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ವೆಂಕಟೇಶ ಮ್ಯಾಕಲದೊಡ್ಡಿ ರಾಜ್ಯದಲ್ಲಿ ಬ್ರಷ್ಟಚಾರ ಮಿತಿ ಮೀರಿದೆ. ಇದರಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಪೈಪೋಟಿಯ ರೀತಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುತ್ತಿದ್ದು ಇದನ್ನು ತಪ್ಪಿಸಿ ನೆಮ್ಮದಿಯ ಜೀವನ ನಡೆಸುವಂತಹ ವಾತಾವರಣ ನಿರ್ಮಿಸಲು ಪರ್ಯಾಯ ರಾಜಕಾರಣ ಅಗತ್ಯವಾಗಿದೆ.ಇದರ ಮಹತ್ವ ಜನರಿಗೆ ತಿಳಿಸುವುದೇ ಜನ ಚೈತನ್ಯ ಯಾತ್ರೆಯ ಪ್ರಮುಖ ಉದ್ದೇಶ ಎಂದು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಪಿ. ಎಸ್ ಗುರುವಿನ ಮಠ ಮಾತನಾಡಿ ರಾಜ್ಯಾದ್ಯಂತ ಮೊದಲ ಹಂತದ ಯಾತ್ರೆಯು ಏಪ್ರಿಲ್ 24 ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಿಂದ ಪ್ರಾರಂಭವಾಗಲಿದೆ.ಏಪ್ರಿಲ್ 25 ರಂದು ಗೌರಿಬಿದನೂರು 

ತಾಲೂಕಿನ ವಿಧುರಾಶತ್ವದಲ್ಲೀ ಹುತಾತ್ಮರ ಸಭೆ ನಡೆಯಲಿದೆ, ಬಳಿಕ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಯಾತ್ರೆ ಸಾಗಲಿದೆ .ಅಂದಿನ ಕಾರ್ಯಕ್ರಮಕ್ಕೆ ಮತ್ತು ಯಾತ್ರೆಗೆ ಶುಭ ಕೋರಲು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷರಾದ ಮಹಿಮಾ ಪಟೇಲರು ಹಾಗೂ WPI ಪಕ್ಷದ ರಾಜ್ಯಾಧ್ಯಕ್ಷರಾದ ತಾಹಿರ್ ಹುಸೇನ್ ಸೇರಿದಂತೆ ಹಲವು ಸಮಾನ ಮನಸ್ಕ ಪಕ್ಷಗಳ ಮುಖಂಡರು ಆಗಮಿಸುತ್ತಿದ್ದಾರೆ ಎಂದರು.

ಯುವ ಘಟಕದ ಜಿಲ್ಲಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಮಾತನಾಡಿ KRS ಪಕ್ಷವು ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಬ್ರಷ್ಟಚಾರ ,ಅಧಿಕಾರಿಗಳ,

ದುರಾಡಳಿತ ವಿರುದ್ಧ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿದೆ.ಈ ನಿಟ್ಟಿನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆಗೆ ಒತ್ತು ನೀಡಿದ್ದು ಮುಂದಿನ 2023 ರ ವಿಧಾನ ಸಭಾ ಚುನಾವಣೆಗೆ ಮೊದಲ ಹಂತದಲ್ಲಿ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.KRS ಪಕ್ಷಕ್ಕೆ ಸೇರ್ಪಡೆ ಆಗಲು 7676791041 ಸಂಪರ್ಕಿಸಬಹುದು.

ಇದೇ ಸಂದರ್ಭದಲ್ಲಿ KRS ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್ ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೋವಿಂದಪ್ಪ ದೇವದುರ್ಗ ತಾಲೂಕ ಅಧ್ಯಕ್ಷ ಪ್ರಕಾಶ ಪಾಟೀಲ್ ಹಾಗೂ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*