ದಲಿತರು ಹಿಂದುಳಿದವರ್ಗದವರು ಅದಿಕಾರದ ಚುಕ್ಕಾಣಿ ಹಿಡಿಯುವತಾಗಲಿ – ಬಿ ಎಸ್ ಪಿ ಹಿರಿಯ ಮುಖಂಡ ಪುರುಷೋತಮ್

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಮಧುರೆ ಹೋಬಳಿಯ ದೊಡ್ಡಕುಕ್ಕಹಳ್ಳಿ ಗ್ರಾಮದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಹೋಬಳಿ ಮತ್ತು ಗ್ರಾಮಮಟ್ಟದ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆ ರಾಜ್ಯ ನಾಯಕರು ಬಹುಜನ ಸಮಾಜ ಪಾರ್ಟಿಯ ಹಿರಿಯ ಮುಖಂಡರು ಆದ ಪುರುಷೋತ್ತಮ ರವರ ನೇತೃತ್ವದಲ್ಲಿ ನೆರವೇರಿತು

CHETAN KENDULI

 ಕಾರ್ಯಕ್ರಮದಲ್ಲಿ ದೊಡ್ಡ ಕುಕ್ಕಹಳ್ಳಿ ಗ್ರಾಮದ ನರಸಿಂಹ ಮೂರ್ತಿಯವರನ್ನು ಮಧುರೆ ಹೋಬಳಿ ಅಧ್ಯಕ್ಷರನ್ನಾಗಿ ರಮೇಶ್ಏನ್ ಭೀಮ ರವರನ್ನು ಮಧುರೆ ಹೋಬಳಿಯ ಉಸ್ತುವಾರಿಯನ್ನಾಗಿ ಆಯ್ಕೆ ಮಾಡಲಾಯಿತುಈ ಸಂದರ್ಭದಲ್ಲಿ ಬಿ ಎಸ್ ಪಿ ಹಿರಿಯಮುಖಂಡ ಪುರುಷೋತಮ್ ಮಾತನಾಡಿ ಇನ್ನುಮುಂದೆ ಬಹುಜನ ಸಮಾಜ ಪಾರ್ಟಿ ಹೊಸ ಆಯಾಮ ಪಡೆದುಕೊಳ್ಳಲಿದೆ ಹಳ್ಳಿ ಹಳ್ಳಿಗೂ ಪಾರ್ಟಿ ಸಿದ್ದಂತ ವನ್ನು ತಲುಪಿಸುವ ಕಾರ್ಯ ಸಾಗುತ್ತಿದೆ ದಲಿತರು ಹಿಂದುಳಿದ ವರ್ಗದವರು ಅದಿಕಾರದ ಚುಕ್ಕಾಣಿ ಹಿಡಿಯುವತಾಗಲಿ ಎಂದು ಅಭಿಪ್ರಾಯ ಪಟ್ಟರು 

 ದೊಡ್ಡ ಕುಕ್ಕಹಳ್ಳಿ ಗ್ರಾಮದ ಗ್ರಾಮಮಟ್ಟದ ಕಮಿಟಿಯನ್ನು ಸಹ ರಚನೆ ಮಾಡಲಾಗಿದ್ದು ದೊಡ್ಡ ಕುಕ್ಕಹಳ್ಳಿ ಗ್ರಾಮದ ಅಧ್ಯಕ್ಷರಾಗಿ ಕಿರಣ್ ಉಪಾಧ್ಯಕ್ಷರನ್ನಾಗಿ ಹರೀಶ್ ಪ್ರಧಾನ ಕಾರ್ಯದರ್ಶಿಯಾಗಿ ಸೋಮಶೇಖರ್ ಸಂಘಟನಾ ಕಾರ್ಯದರ್ಶಿಯಾಗಿ ಮುನಿರಾಜು ರವರನ್ನು ತಾಲ್ಲೂಕು ಮತ್ತು ನಗರ ಅಧ್ಯಕ್ಷರ ಸಮ್ಮುಖದಲ್ಲಿ ನೇಮಕ ಮಾಡಲಾಯಿತು. ರವಿಕಿರಣ್ ಮತ್ತು ಕುಮಾರ್ ಅವರನ್ನು ಪಕ್ಷಕ್ಕೆ ನೂತನವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು

 ಬಹುಜನ ಸಮಾಜ ಪಕ್ಷದ ಶಾಲು ಮತ್ತು ಧ್ವಜವನ್ನು ನೀಡುವುದರ ಮುಖಾಂತರ ಸರ್ವರನ್ನು ಪಾರ್ಟಿಗೆ ಸ್ವಾಗತಿಸಿ ಅಧಿಕಾರ ಹಸ್ತಾಂತರಿಸಲಾಯಿತು ಕಾರ್ಯಕ್ರಮದಲ್ಲಿ ತಾಲ್ಲೂಕು ಉಸ್ತುವಾರಿಗಳಾದ ಕೆ ವಿ ಮುನಿಯಪ್ಪ ತಾಲ್ಲೂಕು ಅಧ್ಯಕ್ಷರಾದ ಹರೀಶ್ ಜಗನ್ನಾಥ್ ತಾಲೂಕು ಉಪಾಧ್ಯಕ್ಷರಾದ ಪೂಜಪ್ಪ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನರೇಂದ್ರ ಮೂರ್ತಿಯವರು ನಗರ ಅಧ್ಯಕ್ಷರಾದ ಶುಹೇಬ್ ಖಾನ್ ಹಾಗೂ ದೊಡ್ಡ ಕುಕ್ಕಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*