ಪ್ರತಿಯೊಂದು ಶಾಲೆಯಲ್ಲೂ ಕಡ್ಡಾಯವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಪ್ರಾರಂಭಿಸಿ…!!! ಸದೃಢತೆಗೆ ಸ್ಕೌಟ್ಸ್ ಗೈಡ್ಸ್ ಅವಶ್ಯ: ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಮಗುವಿನ ಮಾನಸಿಕ, ದೈಹಿಕ, ಸಾಮಾಜಿಕ ಸದೃಢತೆಗೆ ಸ್ಕೌಟ್ಸ್ ಗೈಡ್ಸ್ ಅವಶ್ಯವಾಗಿದೆ. ಪ್ರತಿಯೊಂದು ಶಾಲೆ, ಕಾಲೇಜಲ್ಲಿ ಸರ್ಕಾರದ ಆದೇಶದಂತೆ ಸ್ಕೌಟ್ಸ್ ಗೈಡ್ಸ್ ಘಟಕ ಪ್ರಾರಂಭಿಸಲು ಶಿಕ್ಷಣಾಧಿಕಾರಿಗಳು ಕ್ರಮ ಜರುಗಿಸಬೇಕು. ಘಟಕ ಪ್ರಾರಂಭಿಸದ ಶಾಲೆಗಳಿಗೆ ನೋಟಿಸ್ ಕೊಡಬೇಕು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.


ಮುದ್ದೇಬಿಹಾಳದ ವಿದ್ಯಾನಗರದಲ್ಲಿರುವ ಸ್ಕೌಟ್ಸ್ ಗೈಡ್ಸ್ ತರಬೇತಿ ಕೇಂದ್ರದ ಆವರಣದಲ್ಲಿ ಮಂಗಳವಾರ ನಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಕೊರೊನಾ ವಾರಿಯರ್‌ಗಳಾಗಿ ಸೇವೆ ಸಲ್ಲಿಸಿದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಉಚಿತ ಮಾಸ್ಕ್, ಸ್ಯಾನಿಟೈಜರ್ ವಿತರಿಸಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಅವರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ ಅವರಿಗೆ ಅಭಿನಂದಿಸುವ, ಸ್ಥಳೀಯ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ತರಬೇತಿ ಕೇಂದ್ರ ಲೋಕಾರ್ಪಣೆ ಸಂಯುಕ್ತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗೆ ಪಂಚಾಯಿತಿ ಮಟ್ಟದಲ್ಲಿ ನಿಯಮಾನುಸಾರ ಲಭ್ಯವಿರುವ ಅನುದಾನ ಕೊಡಿಸುತ್ತೇನೆ. ದಾನಿಗಳನ್ನು ಗುರ್ತಿಸಿ ಸಂಸ್ಥೆ ಬಲವರ್ಧನೆಗೆ ಕ್ರಮ ಕೈಕೊಳ್ಳುತ್ತೇನೆ. ಆ.15, ಜ.26 ರಾಷ್ಟಿçÃಯ ಹಬ್ಬಗಳಂದು ಈ ವಿದ್ಯಾರ್ಥಿಗಳ ಪರೇಡ್ ನಡೆಸಬೇಕು. ತಾಳಿಕೋಟೆಯಲ್ಲೂ ಘಟಕಗಳು ರಚನೆಯಾಗಬೇಕು. ತರಬೇತಿ ಕೇಂದ್ರದಲ್ಲಿ ಪ್ರತಿನಿತ್ಯ ಚಟುವಟಿಕೆ ನಡೆಯಬೇಕು. ಸಂಸ್ಥೆಗೆ ಸ್ವಂತ ನಿವೇಶನಕ್ಕೆ ಪುರಸಭೆಯವರು ಠರಾವು ಮಾಡಿದರೆ ಡಿಸಿಗೆ ಹೇಳಿ ಮಂಜೂರು ಮಾಡಿಸುತ್ತೇನೆ. ಬೇಡಿಕೆ ಶೀಘ್ರ ಈಡೇರಿಸುತ್ತೇನೆ ಎಂದರು.
ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಆಯುಕ್ತ ಸಿದ್ದಣ್ಣ ಸಕ್ರಿ, ಗದಗ ಜಿಲ್ಲಾ ಡೈಟ್‌ನ ಡಿಡಿಪಿಐ ಎಸ್.ಡಿ.ಗಾಂಜಿಯವರು, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಮಾತನಾಡಿದರು. ದಿವ್ಯಸಾನಿಧ್ಯವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು ಆಶಿರ್ವಚನ ನೀಡಿದರು.


ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ, ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಬಸವರಾಜ ಮುರಾಳ, ಬಿಇಓ ವಿ.ವೈ.ಜೇವರಗಿ, ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್.ಕರಡ್ಡಿ, ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಹ ಕಾರ್ಯದರ್ಶಿ ಶರಣು ಸಬರದ, ಅಪ್ಪುಗೌಡ ಮೈಲೇಶ್ವರ, ಮಾನಸಿಂಗ ರಾಠೋಡ, ಗದಗ ಡೈಟ್‌ನ ಉಪಪ್ರಾಚಾರ್ಯ ಕೆ.ವಿ.ಪಾಟೀಲ, ಉಪನ್ಯಾಸಕ ಹೊನ್ನಪ್ಪ ರಡ್ಡೇರ ಸೇರಿ ಹಲವರು ವೇದಿಕೆಯಲ್ಲಿದ್ದರು.
ಎ.ಎಸ್.ಬಾಗವಾನ ಪ್ರಾರ್ಥಿಸಿದರು. ಜಿ.ಎಚ್.ಚವ್ಹಾಣ ಸ್ವಾಗತಿಸಿದರು. ಡಿ.ಬಿ.ವಡವಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎನ್.ಹೂಗಾರ ನಿರೂಪಿಸಿದರು. ಐ.ಎ.ಸಜ್ಜನ ವಂದಿಸಿದರು.

 

Be the first to comment

Leave a Reply

Your email address will not be published.


*