ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
“ದೇಶಕ್ಕೆ ಅಚ್ಚೇದಿನ ಆಯೇಗಾ ಎಂದು ಕೇಂದ್ರದಲ್ಲಿ ಪ್ರಧಾನಿ ಮೋದಿ ಮತ್ತು ರಾಜ್ಯದಲ್ಲಿ ರೈತರ ಶಾಲು ಹಾಕಿಕೊಂಡು ಸಿಎಂ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪನವರೇ ದಿನನಿತ್ಯ ವಸ್ತುಗಳ ಬೆಲೆ ಏರಿಸಿ ಸಾಮಾನ್ಯರಿಗೂ ಒಂದು ಹೊತ್ತು ಊಟಕ್ಕೂ ಪರದಾಡುವಂತೆ ಮಾಡಿದ್ದೀರಿ. ಇದಾ ಮೋದಿಯವರ ಅಚ್ಚೇದಿನ್…ಇವರಾ ರಾಜ್ಯ ಜನತೆಯೆ ಸಿಎಂ..? ಇದು ಜೆಡಿಎಸ್ ಪಕ್ಷದ ಪ್ರಚಾರವಲ್ಲ ಅಲ್ಲದೇ ಪಕ್ಷಕ್ಕೆ ಅಧಿಕಾರ ನೀಡಿರಿ ಎಂದು ಹೇಳುತ್ತಿಲ್ಲ. ಮತದಾರ ತಮ್ಮ ಮತದಾನವನ್ನು ಮನಸಿಗೆ ಬಂದವರಿಗೆ ಹಾಕಲಿ. ಆದರೆ ಸಮಾಜದಲ್ಲಿ ಪ್ರಜಾಪ್ರಭುತ್ವ ಉಳಿಸಿರಿ ಎನ್ನುವುದೊಂದೆ ಮನವಿ.”
ಇದು ಜೆಡಿಎಸ್ ಪಕ್ಷದ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಅವರು ಸೋಮವಾರ ದೇಶದಲ್ಲಿ ಪೆಟ್ರೋಲ್, ಡಿಸೆಲ್, ವಿದ್ಯುತ್, ಅಡುಗೆ ಅನಿಲ ಹಾಗೂ ಇನ್ನಿತರ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಹೊರಹಾಕಿದ ಆಕ್ರೋಶ.
ದೇಶದ ಪ್ರಧಾನಿಯಾದ ಮೋದಿಯವರು ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಹಾಳುಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿ ಆಡಳಿತ ನೆಡೆಸಿರುವವರು ಸಂಪೂರ್ಣವಾಗಿ ಭ್ರಷ್ಠಾಚಾರದಲ್ಲಿ ತೊಡಿಗಿದ್ದಾರೆ. ಅಭೀವೃದ್ಧಿ ವಿಷಯದಲ್ಲಿ ದೇಶವೇ ಲೂಟಿ ಹೊಡೆಯುವ ಕೆಲಸ ಸರಕಾರಗಳು ಮಾಡುತ್ತಿವೆ ಎಂದು ಅವರು ಆರೋಪಿಸಿದರು.
ಜೆಡಿಎಸ್ ಜಿಲ್ಲಾ ಪ್ರ.ಕಾರ್ಯದರ್ಶಿ ಅರವಿಂದ ಕಾಶಿನಕುಂಟಿ ಮಾತನಾಡಿ, ದೇಶದಲ್ಲಿ ದಿನಗೂಳಿಕಾರರು ಬದುಕುವುದೇ ಒಂದು ದೊಡ್ಡ ಸವಾಲ್ ಆಗಿದೆ. ತೆಲೆಗೂದಲು ಆರಿಸುವವರು ತಮ್ಮ ದಿನದ 50 ರೂಪಾಯಿ ದುಡಿಮೆಗೆ 100 ಪೆಟ್ರೋಲ್ ಹಾಕಿಕೊಂಡು ದುಡಿಮೆ ಮಾಡುವಂತಾಗಿದೆ. ಬಿಜೆಪಿಯಿಂದ ಬಂದಂತಹ ಅಚ್ಚೇದಿನ್ ಇದೇನಾ ಎನ್ನುವುದು ತಿಳಿಯುತ್ತಿಲ್ಲ. ಕೂಡಲೇ ಬೆಲೆ ಏರಿಕೆಯನ್ನು ಕೈಬಿಟ್ಟು ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಪಕ್ಷದ ಪ್ರಮುಖ ಭಿಮನಗೌಡ ಕೊಡಗಾನೂರ ಮಾತನಾಡಿ, ಹಿಂದುತ್ವದ ಬಗ್ಗೆ ಮಾತನಾಡಿ ದೇಶದ ಯುವಕರನ್ನು ಸೇಳೆದು ದೇಶಕ್ಕೆ ಹೊರೆಯಾಗುವಂತೆ ಇಂದಿನ ಮೋದಿ ಮಾಡುತ್ತಿದ್ದಾರೆ. ಇವರ ಬಗ್ಗೆ ಸಾಕಷ್ಟು ಜನ ಯುವಕರು ಸಾಮಾಜಿಕ ಜಾಲತಾಣದಲ್ಲಿ ಮೋದಿ ಬಾರಿ ಎಂದು ಬರೆದುಕೊಂಡು ಇಂದಿನ ದಿನದಲ್ಲಿ ದುಸ್ಥಿತಿ ಎದುರಿಸುತ್ತಿದ್ದಾರೆ. ಇನ್ನೂ ಓರ್ವ ಯುವಕ ಪೆಟ್ರೋಲ್ ಬೆಲೆ 300 ಮಾಡಿದರೂ ನಾವು ಮೋದಿಗೆ ಬೆಂಬಲಿಸುತ್ತೇನೆ ಎಂದು ಹೇಳಿಕೊಂಡಿದ್ದು ನೋಡಿದ್ದೇನೆ. ಅಂತಹ ಯುವಕರಿಗೆ ನನ್ನದೊಂದು ಪುಟ್ಟ ಮನವಿ ಏನೆಂದರೆ ಹಿಂದೆ ಕಡಿಮೆ ಬೆಲೆಯಲ್ಲಿ ರೈತನ ಹೊಲದಲ್ಲಿ ಟ್ರ್ಯಾಕ್ಟರನಿಂದ ಹೊಡೆಯುತ್ತಿದ್ದ ನೇಗಿಲನ್ನು ಇಂದು ಅದೇ ಬೆಲೆಯಲ್ಲಿ ಹೊಡೆಯುವಂತೆ ಮಾಡಿ ಎನ್ನುವುದೊಂದೆ. ಇನ್ನೂ ಮೋದಿ ಪ್ರಧಾನಿಯಾದರೆ ದೇಶದಲ್ಲಿ ಚಿನ್ನದ ರಸ್ತೆಯಾಗುತ್ತವೆ ಎನ್ನುತ್ತಿದ್ದ ಸೂಲಿಬೆಲೆ ಕಳೆದ ಹಲವು ದಿನಗಳಿಂದ ಎಲ್ಲಿ ಕಾಣೆಯಾಗಿದ್ದಾರೊ ತಿಳಿಯುತ್ತಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ್ದಾರ ಕಛರಿಯವರೆಗೂ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ ಅವರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.
ಮುದ್ದೇಬಿಹಾಳ ಕ್ಷೇತ್ರದಲ್ಲಿ ಗುಂಡಾಗಿರಿ:
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ ಎಂದು ಪ್ರಚಾರ ನಡೆಸಿ ಕಾಮಗಾರಿಯ ಮಾಹಿತಿ ಪಡೆಯಲು ಹೋದರೆ ದೂರು ದಾಖಲಿಸುವ ಬೆದರಿಕೆ ಒಡ್ಡಲಾಗುತ್ತಿದೆ. ತಾಲೂಕಿನಲ್ಲಿ ಯಾವುದೇ ಕಾಮಗಾರಿ ನಡೆದರೂ ಅದಕ್ಕೆ ಪರ್ಸೆಂಟೇಜ್ ಇಡಲಾಗುತ್ತಿದೆ. ಇಂತಹ ದುಸ್ಥಿತಿ ಹಿಂದೆಂದೂ ಕ್ಷೇತ್ರಕ್ಕೆ ಬಂದ ಉದಾಹರಣೆಯಿಲ್ಲ. ಅಲ್ಲದೇ ರಸ್ತೆ ಕಾಮಗಾರಿಯಲ್ಲಿಯೂ ತಮ್ಮ ಅನುಕೂಲದಂತೆ ಅಗಲೀಕರಣ ಮಾಡಲಾಗುತ್ತಿದೆ ಎಂದು ಮಂಗಳಾದೇವಿ ಅವರು ದೂರಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಗುರುಪ್ರಸಾದ ದೇಶಮುಖ, ರಸೂಲ ದೇಸಾಯಿ, ಕಾರ್ಯದರ್ಶಿ ಈರಣ್ಣ ತಾರನಾಳ, ಶಂಕರ ಮುರಾಳ, ಎಸ್.ಎಸ್.ಬಿಕ್ಷಾವತಿಮಠ, ಭಿಮನಗೌಡ ಕೊಡಗಾನೂರ, ಅಬ್ದುಲ್‌ಮಜೀದ ಮಕಾಂದಾರ, ಮೈಬೂಬ ಹಡಲಗೇರಿ ಸೇರಿದಂತೆ ಇತರರಿದ್ದರು.
Be the first to comment