ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮದಲ್ಲಿ ನಡೆದ ಪಕ್ಷಾತೀತ ಚುನಾವಣೆಯಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರಿಗೆ ನಡಹಳ್ಳಿ ಕುಟುಂಬದಿಂದ ವಿಶೇಷ ಸನ್ಮಾನ ಸಮಾರಂಭವನ್ನು ಮಾ.2 ರಂದು ದಾಸೋಹ ನಿಲಯದಲ್ಲಿ ಹಮ್ಮಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಸೋಮವಾರ ದಾಹೋಸ ನಿಲಯದ ಅಧಿಕೃತ ಶಾಸಕರ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮತಕ್ಷೇತ್ರಗಳ ಅಭಿವೃದ್ಧಿಗೆ ಕೇವಲ ಶಾಸಕರಿಂದ ಮಾತ್ರ ಸಾದ್ಯವಲ್ಲ. ಶಾಸಕರಿಗೆ ಗ್ರಾಮೀಣದ ಚುನಾಯಿತ ಸದಸ್ಯರೂ ಬೆಂಬಲಿಸುವುದು ಅಗತ್ಯವಾಗುತ್ತದೆ. ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಯಾರೂ ಪಕ್ಷಬೇಧ ಮಾಡಬಾರದು. ಸರ್ವರೂ ಅಭಿವೃದ್ಧಿಯತ್ತ ಮುಖ ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿಯೇ ಈ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸರ್ವ ಸದಸ್ಯರಿಗೂ ನಡಹಳ್ಳಿ ಕುಟುಂಬದಿಂದ ಪ್ರೀತಿಯ ಸ್ವಾಗತ:
ಕಳೆದ 15 ವರ್ಷದಿಂದ ರಾಜಕೀತದಲ್ಲಿದ್ದೇನೆ. ಆದರೆ ಪಕ್ಷಾತೀತವಾಗಿ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾನು ಯಾವುದೇ ಅಭ್ಯರ್ಥಿಯ ಪರವಾಗಿ ಪ್ರಚಾರ ಕೈಗೊಂಡಿಲ್ಲ. ಇದರ ಬಗ್ಗೆ ಸಾಕಷ್ಟು ನನ್ನ ಬೆಂಬಲಿಗರಿಗೆ ಬೇಸರವಾಗಿರಬಹುದು ಆದರೆ ಗ್ರಾಮ ಪಂಚಾಯತಿ ಚುಣಾವಣೆಯಲ್ಲಿ ರಾಜಕೀಯ ಪಕ್ಷಗಳ ಚಟಿವಟಿಕೆ ನಡೆಸಬಾರದು ಎನ್ನುವ ಮಾತಿಗಾಗಿ ನಾನು ಗ್ರಾಪಂ ಚುನಾವಣೆಯಿಂದ ದೂರ ಉಳಿದಿದ್ದೆ. ಈಗಾ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಾಗಿ ಆಯ್ಕೆಯಾಗಿರುವ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಕ್ಷೇತ್ರದ ಅಭಿವೃದ್ಧಿಗಾಗಿ ಮುನ್ನೆಡೆಸುವ ಕಾರ್ಯವಾಗಬೇಕಿದೆ. ಇದಕ್ಕಾಗಿ ನನ್ನ ಧರ್ಮ ಪತ್ನಿ ಮಹಾದೇವಿ ಪಾಟೀಲ ಅವರು ಸರ್ವ ಸದಸ್ಯರಿಗೆ ಸನ್ಮಾನಿಸಿ ನಮ್ಮ ದಾಸೋಹ ನಿಲಯದಲ್ಲಿ ಔತಣಕೊಟವನ್ನು ಏರ್ಪಡಿಸುವ ಮಾರ್ಗದರ್ಶನ ನೀಡಿದ್ದಾರೆ. ಇದು ಮತಕ್ಷೇತ್ರದ ಸರ್ವಾಭಿವೃದ್ಧಿಗಾಗಿ ಮಾತ್ರ ಸೀಮಿತವಾದ ಸಮಾರಂಭವಾಗಲಿದೆ ಎಂದು ಶಾಸಕ ನಡಹಳ್ಳಿ ಹೇಳಿದರು.
ಒಟ್ಟು 980 ಚುನಾಯಿತ ಸದಸ್ಯರಿಗೆ ವಿಶೇಷ ಸನ್ಮಾನ:
ಮುದ್ದೇಬಿಹಾಳ ಮತಕ್ಷೇತ್ರದ 33 ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರದ 34 ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತ ಸದಸ್ಯರಾಗಿ ಆಯ್ಕೆಗೊಂಡಿರುವ ಒಟ್ಟು 980 ಸದಸ್ಯರಿಗೆ ಸನ್ಮಾನಿಸಲಾಗುವುದು. ಅಂದಾಜು 78 ಲಕ್ಷ ವೆಚ್ಚದಲ್ಲಿ ಪಂಚಾಯತಿಯ ಮಹಿಳಾ ಸದಸ್ಯರಿಗೆ ರೇಷ್ಮೆ ಸಿರೆ ಹಾಗೂ ಪುರುಷ ಸದಸ್ಯರಿಗೆ ಪ್ಯಾಟ್‌ಶರ್ಟ ನೀಡಿ ಸನ್ಮಾನಿಸಲಾಗುತ್ತದೆ. ಸಮಾರಂಭಕ್ಕೆ ಸರ್ವ ಸದಸ್ಯರೂ ಆಗಮಿಸಬೇಕು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಇದ್ದರು.
Be the first to comment