ಜಿಲ್ಲಾ ಸುದ್ದಿಗಳು
ಮಸ್ಕಿ:
ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಸ್ಕಿ ವತಿಯಿಂದ ಆರಂಭಿಸಲಾದ SUNDAY for social work ಅಭಿಯಾನದಡಿಯಲ್ಲಿ ಇಂದು ವಿಶ್ವ ಪ್ರಸಿದ್ಧ ಎರಡನೇ ಶ್ರೀ ಶೈಲ ಮಲ್ಲಿಕಾರ್ಜುನ ದೇವಸ್ಥಾನದ ಮಧ್ಯ ಭಾಗದಲ್ಲಿ ಬರುವ ಬಸವೇಶ್ವರ ದೇವಸ್ಥಾನದ ಆವರಣವನ್ನು ಹಾಗೂ ಅದರ ಮುಂದಿರುವ ತಂಗುದಾಣವನ್ನು ಸ್ವಚ್ಛತೆಗೆ ಮಾಡಿ ಸುಣ್ಣ ಬಣ್ಣವನ್ನು ಹಚ್ಚಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡ ರಾಕೇಶ್ ಪಾಟೀಲ್ ಅವರು ಮಾತನಾಡಿ ಅಭಿನಂದನ್ ಸಂಸ್ಥೆಯು ಈ ಒಂದು ಸ್ಥಳದಲ್ಲಿ ತಮ್ಮ ಸಂಡೆ ಫಾರ್ ಸೋಶಿಯಲ್ ವರ್ಕ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂತಸದ ವಿಷಯ. ಈ ಶ್ರಾವಣ ಮಾಸದಲ್ಲಿ ಬರುವ ಭಕ್ತಾದಿಗಳು ಇಲ್ಲಿ ಕುಂತು ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಮಾಡಿರುವ ಅಭಿನಂದನ್ ಸಂಸ್ಥೆಯ ಈ ಕಾರ್ಯ ಶ್ಲಾಘನೀಯ ಇವರ ಕಾರ್ಯಗಳು ಹೀಗೆ ಮುಂದುವರಿದು ಈ ಅಭಿಯಾನ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದು ಎಲ್ಲರೂ ಈ ಅಭಿಯಾನದಲ್ಲಿ ಭಾಗಿಯಾಗಲಿ ಎಂದು ತಿಳಿಸಿದರು. ಇದೇ ಸಮಯದಲ್ಲಿ ಶ್ರೀಧರ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಕುಮಾರ, ಬಸವರಾಜ ಬನ್ನಿಗಿಡ, ಬಸವರಾಜ ರಂಗಾಪೂರ, ಅಮರೇಶ್ ನಾಯಕ್ ಹಾಗೂ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಮತ್ತು ಸಂಸ್ಥೆಯ ಸದಸ್ಯರಾದ ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ, ಕಿಶೋರ್ ಮತ್ತಿತರರು ಈ ಸೇವಾ ಕಾರ್ಯದಲ್ಲಿ ತೊಡಗಿದ್ದರು.
Be the first to comment