ಕೃಷ್ಣ ಜನ್ಮಾಷ್ಟಮಿಯ ದಿನದಂದು ರಕ್ಷಾಬಂಧನದ ಸಂಭ್ರಮ

ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಜಾಪಿತಾ ಬ್ರಹ್ಮಕುಮಾರೀಸ್ ಈಶ್ವರಿ ವಿಶ್ವವಿದ್ಯಾನಿಲಯವು ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಹಾಗೂ ಸಡಗರದಿಂದ ಕೋವಿಡ್ ನಿಯಮಗಳ ಪಾಲನೆ ಜೊತೆಗೆ ಆಚರಿಸಲಾಯಿತು ರಕ್ಷಾಬಂಧನದ ದಿನ ಕಟ್ಟುವ ರಕ್ಷೆ ಕೇವಲ ರಕ್ಷೆ ಯಲ್ಲದೆ ಭಗವಂತನೊಂದಿಗೆ ಸಂಬಂಧ ಬೆಸೆಯುವ ಸಾಧನವಾಗಿದೆ ಎಂದು ಈ ಸಂದರ್ಭದಲ್ಲಿ

CHETAN KENDULI

ಮಾತನಾಡಿದ ಹಿರಿಯ ರಾಜಯೋಗ ಶಿಕ್ಷಕಿಯಾದ ಬಿಕೆ ಸಾವಿತ್ರಿ ಅಕ್ಕ ರವರು ತಿಳಿಸಿದರು.ಕೃಷ್ಣ ಜನ್ಮಾಷ್ಠಮಿಯ ಕುರಿತು ವಿವರವಾಗಿ ಚಿಕ್ಕಬಳ್ಳಾಪುರದಿಂದ ಆಗಮಿಸಿದ ಹಿರಿಯ ರಾಜಯೋಗ ಶಿಕ್ಷಕಿಯಾದ ಬಿ ಕೆ ಲಲಿತಾ ಅಕ್ಕನವರು ತಿಳಿಸಿದರು.

ಈ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ಈಶ್ವರಿ ವಿಶ್ವವಿದ್ಯಾಲಯ ದ ಸಂಚಾಲಕಿಯದ ಬಿ ಕೆ ಶೋಭಾ ಅಕ್ಕನವರು ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಭಾಗಿಯಾಗಿದ್ದು ಪವಿತ್ರವಾದ ರಕ್ಷೆಯನ್ನು ಕಟ್ಟಿಸಿಕೊಂಡು ಸಿಹಿ ಹಂಚುವುದರ ಮೂಲಕ ಕೃಷ್ಣಜನ್ಮಾಷ್ಟಮಿಯನ್ನು ಆಚರಿಸಿದರು…

Be the first to comment

Leave a Reply

Your email address will not be published.


*