ಮೂಲಭೂತ ಸೌಕರ್ಯಗಳಿಗೂ ಅನುದಾನದ ಕೊರತೆ……

ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸುಭಾಷ್ ನಗರದ ಶ್ರೀವಾಣಿ ಕಾಲೇಜಿನ ಹಿಂಭಾಗದಲ್ಲಿರುವ ಸರಿಸುಮಾರು 150 ಮನೆಗಳನ್ನು ಹೊಂದಿರುವ ಲೇಔಟ್ನಲ್ಲಿ ಸರಿಯಾದ ರಸ್ತೆಗಳ ಆಗಲಿ ಚರಂಡಿ ವ್ಯವಸ್ಥೆ ಆಗಲಿ ಬೀದಿದೀಪಗಳ ವ್ಯವಸ್ಥೆಗಳಾಗಲೀ ಯಾವುದು ಇಲ್ಲದಿರುವುದು

CHETAN KENDULI

ವಿಪರ್ಯಾಸವೇ ಸರಿ ಎ ಪಿ ಎಂ ಸಿ ಮಾರುಕಟ್ಟೆಯ ಕೈಯಾಳತೆ ದೂರದಲ್ಲಿರುವ ಈ ಸ್ಥಳದ ಪರಿಸ್ಥಿತಿ ಹೇಳಲು ಅಸಾಧ್ಯವೇ ಸರಿ ದ್ವಿಚಕ್ರ ವಾಹನ ಸವರರು ರಸ್ತೆಗಿಳಿದರೆ ಕೆಸರಾಭಿಷೇಕ ತಪ್ಪಿದಲ್ಲ ಕಾರಣ ರಸ್ತೆಯಲ್ಲಿನ ಕೆಸರು ಹೊತ್ತ ಗುಂಡಿಗಳು.

ಬೆಳಗಿನ ಸಮಯದಲ್ಲಿ ತಾಜ್ಯ ವಿಲೇವಾರಿ ಘಟಕದವರು ಸಹ ಬರುತ್ತಿಲ್ಲ ನಗರಸಭೆಯಲ್ಲಿ ತಿಳಿಸಿದರೆ ಇದು ನಮ್ಮ ಅಧೀನಕ್ಕೆ ಬರುವುದಿಲ್ಲ ಎನ್ನುತ್ತಾರೆ

ಕೊಡಿಗೇಹಳ್ಳಿ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ತಮ್ಮ ಅಳಲನ್ನು ಹೇಳಿಕೊಂಡರು ಈ ವಿಚಾರವಾಗಿ ಇಲ್ಲಿನ ಅಧಿಕಾರಿಗಳಾಗಲಿ ರಾಜಕೀಯ ಮುಖಂಡರಾಗಲಿ ಕ್ಯಾರೇ ಎನ್ನದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಇನ್ನಾದರೂ ಈ ಸ್ಥಳದ ಪರಿಶೀಲನೆ ನೆಡೆಸಿ ಸ್ಥಳೀಯರ ಕುಂದುಕೊರತೆಗಳನ್ನು ನಿಗಿಸುವಲಿ ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗಬೇಕಿದೆ…….

Be the first to comment

Leave a Reply

Your email address will not be published.


*