ಉದ್ಯಾನವನದಲ್ಲಿ ಹಂದಿಗಳ ದರ್ಬಾರ್

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಸ್ವಚ್ಛ ಭಾರತ ಅಭಿಯಾನ ಬಾಗಲಕೋಟೆಯ ವಿದ್ಯಾನಗರದಲ್ಲಿರುವ ಉದ್ಯಾನವನ ಹೆಸರಿಗೆ ಮಾತ್ರ ಸೀಮಿತವಾಗಿದೆ. ಬಾಗಲಕೋಟೆ ನಗರಸಭೆ ಸದಸ್ಯ, ಅಧಿಕಾರಿ, ಸಿಬ್ಬಂದಿ ವರ್ಗದ ನಿರ್ಲಕ್ಷ್ಯ ದಿಂದ 6ನೇ ಕ್ರಾಸ್ ನಲ್ಲಿರುವ ಉದ್ಯಾನವನದಲ್ಲಿ ಹಂದಿಗಳ ದರ್ಬಾರ್ ಹೆಚ್ಚಾಗಿದೆ.

ಕಾರಣ ಉದ್ಯಾನವನದಲ್ಲಿ ಕಸಕಡ್ಡಿ ಮತ್ತು ಹುಳುಉಪ್ಪಟ್ಟಿ ಹೆಚ್ಚಾಗಿದೆ‌.ಆದರೂ ಇದರಲ್ಲಿ ಮಕ್ಕಳು ಆಟವಾಡದ ಪರಿಸ್ಥಿತಿ ನಿರ್ಮಾಣ ವಾಗಿದೆ.
ನಗರಸಭೆ ಯವರು ಉದ್ಯಾನವನದ‌ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು‌ ಸ್ಥಳೀಯ ನಿವಾಸಿ ‌ಮುತ್ತು ಗಡಗಡೆ ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*