ಆಸ್ತಿ ವ್ಯಾಜ್ಯ ನಾಲ್ಕು ಜನ ಸಹೋದರರ ಮಾರಕಾಸ್ತ್ರಗಳಿಂದ ಕೊಲೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಮಧುರಖಂಡಿ ಗ್ರಾಮದಲ್ಲಿ ಆಸ್ತಿ ವ್ಯಾಜ್ಯದ ಸಲುವಾಗಿ ಮುದರಡ್ಡಿ ಮತ್ತು ಪುಠಾಣಿ ಮನೆತನದ ನಡುವೆ ಜಗಳವಾಗಿ ಪುಠಾಣಿ ಮನೆತನದವರು ಮುದರಡ್ಡಿ ಮನೆತನದ ನಾಲ್ಕು ಜನ ಸಹೋದರರನ್ನು ಮಾರಕಾಸ್ತ್ರಗಳಿಂದ ಕೋಲೆ‌ ಮಾಡಿದ್ದಾರೆ.

ಹಣಮಂತ ಮುದರಡ್ಡಿ (45), ಬಸವರಾಜ ಮುದರಡ್ಡಿ(37), ಈಶ್ವರ ಮುದರಡ್ಡಿ (35), ಮಲ್ಲು ಮುದರಡ್ಡಿ (33) ನಾಲ್ಕು ಜನ ಸಹೋದರರು ಕೋಲೆಯಾಗಿದ್ದಾರೆ.ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಸಣ್ಣೆರಿ ರಸ್ತೆಯ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲವಾರು ವರ್ಷಗಳಿಂದ ಈ‌ ಎರಡು‌ಮನೆತನದ ನಡುವೆ ಆಸ್ತಿ ಸಲುವಾಗಿ ಜಗಳಗಳು ಇದ್ದಿತ್ತು, ಪುಠಾಣಿ ಮನೆತನದವರು ಹೊರಗಿನವರನ್ನು ಕರೆಸಿ ಕೋಲೆ ಮಾಡಿಸಿರುವದಾಗಿ ಮೇಲ್ನೋಟಕ್ಕೆ ಕಂಡು‌ಬಂದಿದೆ. ಈ ಬಗ್ಗೆ ಜಮಖಂಡಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಮಾಡುತ್ತಿದ್ದಾರೆ.

Be the first to comment

Leave a Reply

Your email address will not be published.


*