ರಾಜ್ಯ ಸುದ್ದಿಗಳು
ಭಟ್ಕಳ:
ಮುಡೇಶ್ವರದ ಪ್ರಸಿದ್ದ ವೈದ್ಯರಾದ ಡಾ. ಐ. ಆರ್. ಭಟ್ಟ. ಇವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎನ್ನುವುದು ಬಹುಜನರ ಅಪೇಕ್ಷೆಯಾಗಿದ್ದು ಈಗಾಗಲೇ ಹಲವರು ಇವರ ಕುರಿತು ಸೇವಾ ಸಿಂಧು ಪೋರ್ಟಲ್‌ನಲ್ಲಿ ತಮ್ಮ ಮನದಿಂಗಿತವನ್ನು ದಾಖಲು ಮಾಡಿದ್ದಾರೆ. ಇವರ ಕುರಿತು ಒಲವು ಹೊಂದಿದವರು, ಯಕ್ಷಗಾನ ಪ್ರಿಯರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಇವರ ಕುರಿತು ದಾಖಲಿಸಿ ಎನ್ನುವುದು ಮುರ್ಡೇಶ್ವರ ಜನತೆ ಆಶಯವಾಗಿದೆ.
ವೈದ್ಯೋ ನಾರಾಯಣೋ ಹರಿ: ಎನ್ನುವುದು ನಮ್ಮಲ್ಲಿ ಪ್ರಚಲಿತದಲ್ಲಿರುವ ನಾಣ್ನುಡಿ. ಇದಕ್ಕೆ ಅಕ್ಷರಸಹ ಹೊಂದಿಕೊAಡಿರುವ ವ್ಯಕ್ತಿಯೆಂದರೆ ಮುರ್ಡೇಶ್ವರದ ಡಾ. ಐ. ಆರ್. ಭಟ್ಟ. ಸುಮಾರು ೮೦ರ ಹರೆಯದಲ್ಲಿಯೂ ಕೂಡಾ ತಮ್ಮ ಕ್ಲಿನಿಕ್‌ನಲ್ಲಿ ೪೦ರ ಹರೆಯದವರಂತೆ ಚಟುವಟಿಕೆಯಿಂದ, ಲವಲವಿಕೆಯಿಂದ ತಮ್ಮಲ್ಲಿ ಬರುವವರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಾ ಅವರಿಗೆ ಕೇವಲ ಕಾಯಿಲೆಗೆ ಮಾತ್ರವಲ್ಲ ಮನಸ್ಸಿಗೂ ಕೂಡಾ ಮದ್ದು ಕೊಡುವ ವೈದ್ಯರಾದ ಇವರಲ್ಲಿ ಎಂತಹ ಕಾಯಿಲೆಯವರು ಬಂದು ನಿಂತರೂ ಕೂಡಾ ಕೇವಲ ಪರೀಕ್ಷೆಯಿಂದಲೇ ಆತನಿಗೆ ಇರುವ ಕಾಯಿಲೆಯನ್ನು ಗುರುತು ಮಾಡಿ ಗುಣಪಡಿಸುವ ಗುಣ ಹೊಂದಿದ್ದ ಇವರು ಸುಮಾರು ೧೯೬೭ರಿಂದಲೂ ಮುರ್ಡೇಶ್ವರದಲ್ಲಿನ ತಮ್ಮ ರಾಜ್ ಕ್ಲಿನಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮುರ್ಡೇಶ್ವರದ ಪ್ರಸಿದ್ಧ ಜನಾನುರಾಗಿ ವೈದ್ಯರೂ, ಅತಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಯಕ್ಷಗಾನ, ಸಮಾಜ ಸೇವೆ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಮುರ್ಡೇಶ್ವರದಲ್ಲಿ ಮನೆ ಮಾತಾಗಿದ್ದಾರೆ. ಯಕ್ಷರಕ್ಷೆಯನ್ನು ಕಟ್ಟಿ ಬೆಳೆಸಿ ಅದರಡಿಯಲ್ಲಿ ಅನೇಕ ವರ್ಷಗಳ ಕಾಲ ಯಕ್ಷಗಾನವನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಲಯನ್ಸ್ ಕ್ಲಬ್ ಮುರ್ಡೇಶ್ವರದ ಸ್ಥಾಪಕ ಸದಸ್ಯರಾಗುವ ಮೂಲಕ ಅದರ ಅಧ್ಯಕ್ಷರಾಗಿ ಅನೇಕ ಸಾಮಾಜಿಕ ಕಾರ್ಯವನ್ನು ಮಾಡಿದ್ದಾರೆ.
ಜನಾನುರಾಗಿಗಳಾಗಿ ವೈದ್ಯಕೀಯ ಸೇವೆ ಸಮಾಜ ಸೇವೆ ಎಂದು ಮಾಡುತ್ತಿರುವ ಇವರ ನಡೆ, ನುಡಿ, ಆತ್ಮ ವಿಶ್ವಾಸ ಎಂತವರಿಗೂ ಮಾದರಿಯಾಗಿದೆ. ಮುರ್ಡೇಶ್ವರದ ಅಭಿವೃದ್ಧಿಗೆ ಸದಾ ಚಿಂತೆನಯನ್ನು ನಡೆಸುತ್ತಲೇ ಇರುವ ಇವರು ನರೇಕುಳಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಿದ್ದ ಇವರು ಲಯನ್ಸ್ ಸಂಸ್ಥೆಯ ಮೂಲಕ ಸಮಾಜ ಸೇವೆಯ ಇನ್ನೊಂದು ಮಜಲನ್ನು ತಲುಪಿದರು. ಆರೋಗ್ಯ ಭಾರತೀ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಇವರು ಅನೇಕ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸುವುದರ ಮೂಲಕ ಬಡವರಿಗೂ ವೈದ್ಯಕೀಯ ಸೌಲಭ್ಯ ದೊರಕಿಸಿಕೊಟ್ಟರೆ, ಜನತೆಗೆ ಮನೋರಂಜನೆಗಾಗಿ ಯಕ್ಷಗಾನ ಬಯಲಾಟ, ತಾಳಮದ್ದಳೆ ಏರ್ಪಸಿಸುವುದು, ಪ್ರತಿ ವರ್ಷ ಯಕ್ಷಗಾನ ಏರ್ಪಡಿಸಿ ಓರ್ವ ಯಕ್ಷಗಾನ ಕಲಾವಿದನಿಗೆ ಸನ್ಮಾನಿಸುವುದು ಇವರು ನಡೆಸಿಕೊಂಡು ಬಂದ ಕಾಯಕವಾಗಿದೆ. ಈಗಾಗಲೇ ಇವರಿಗೆ ತಾಲೂಕಾ ಮಟ್ಟದ ಸಮಾಜ ಸೇವಾ ಪ್ರಶಸ್ತಿ, ಜಿಲ್ಲಾ ಮಟ್ಟದ ಪ್ರಶಸ್ತಿ ಸೇರಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಇವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎನ್ನುವುದು ಬಹುಜನರ ಅಪೇಕ್ಷೆಯಾಗಿದ್ದು ಈಗಾಗಲೇ ಹಲವರು ಇವರ ಕುರಿತು ಸೇವಾ ಸಿಂಧು ಪೋರ್ಟಲ್‌ನಲ್ಲಿ ತಮ್ಮ ಮನದಿಂಗಿತವನ್ನು ದಾಖಲು ಮಾಡಿದ್ದಾರೆ. ಇವರ ಕುರಿತು ಒಲವು ಹೊಂದಿದವರು, ಯಕ್ಷಗಾನ ಪ್ರಿಯರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಇವರ ಕುರಿತು ದಾಖಲಿಸಿ ತಮ್ಮ ಮನದಿಂಗಿತವನ್ನು ದಾಖಲು ಮಾಡಬೇಕೆನ್ನುವುದು ಮುರ್ಡೇಶ್ವರ ಜನತೆ ಆಶಯವಾಗಿದೆ.
Be the first to comment