ಮಾಡಿವಾಳ ಸಮಾಜವವನ್ನ ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯ

ವರದಿ ಗೌತಮ್ ಕುಮಾರ್ ಚವಾನ್

ಜಿಲ್ಲಾ ಸುದ್ದಿಗಳು 

 

ಲಿಂಗಸಗೂರು

CHETAN KENDULI

ಮಡಿವಾಳ ಸಮಾಜವನ್ನು ಪ,ಜಾ ಗೆ ಸೇರಿಸಲು ಒತ್ತಾಯಿಸಿ ತಾಲೂಕ ಮಡಿವಾಳ ಮಾಚಿದೇವ ಸಮಾಜದಿಂದ ಲಿಂಗಸಗೂರು ಸಹಾಯಕ ಆಯುಕ್ತರ ಮುಖಾಂತರ ಸಮಾಜ ಕಲ್ಯಾಣ ಸಚಿವರಿಗೆ ಬರೆದ ಮನವಿ ಪತ್ರ ಸಲ್ಲಿಸಲಾಯಿತು.ಮಡಿವಾಳ ಸಮಾಜದ ಸಮುದಾಯ ಭವನದಿಂದ ಮೆರವಣಿಗೆ ಮೂಲಕ ಲಿಂಗಸಗೂರು ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆಮನವಿ ಪತ್ರ ಸಲ್ಲಿಸಿ ಮಾತನಾಡಿದ ವಕೀಲ ವೀರಭದ್ರಪ್ಪ ನಿಲೋಗಲ್ ರವರುಸರಕಾರ ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಠ ಜಾತಿಗೆ ಸೇರ್ಪಡೆ ಮಾಡಲು ಕುಲ ಶ್ರಾಸ್ತ್ರಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೋ ಡಾ.ಅನ್ನಪೂರ್ಣ ಇವರಿಗೆ ನೇಮಕ ಮಾಡಲಾಗಿತ್ತು. ಅವರು ತಮ್ಮ ವರದಿಯನ್ನು 2010 ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ “ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂಬುದಾಗಿ ಶಿಫಾರಸ್ಸು ಮಾಡಲಾಗಿದ್ದು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಇರುವ ಎಲ್ಲ ಅರ್ಹತೆಗಳು ಮಡಿವಾಳ ಜನಾಂಗಕ್ಕೆ ಇದ್ದರು ಕೂಡ ಸರಕಾರ ಈ ಬಗ್ಗೆ ನಿರ್ಲಕ್ಷ ವಹಿಸುವುದು ಖಂಡನಿಯ ಕೂಡಲೇ ರಾಜ್ಯ ಸರಕಾರ ಮಡಿವಾಳರನ್ನ ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದರುಈ ಸಂದರ್ಭದಲ್ಲಿ ಅಧ್ಯಕ್ಷ ಶರಣಪ್ಪ ಮಡಿವಾಳ ಪ್ರಧಾನ ಕಾರ್ಯದರ್ಶಿ ಸುರೇಶ ಕಡರಕಲ್, ಜಂಟಿ ಕಾರ್ಯದರ್ಶಿ ನಾಗರಾಜ್ ಎಸ್ ಮಡಿವಾಳರ್, ಡಾ.ಚಂದ್ರಶೇಖರತಿರುಪತಿ, ಈರಣ್ಣ ಎಂ ಮಡಿವಾಳರ, ತಿಪ್ಪಣ್ಣ ಕರಡಕಲ್, ಶೇಖರ್ ಬಿ, ಅಮರೇಶ್ ಮಡಿವಾಳ,ಮೌನೇಶ ಮಡಿವಾಳರ್, ವಿಕುಮಾರ್, ವೆಂಕಟೇಶ್, ಅಮರೇಶ್ ಬಾಲಾಜಿ, ನಾಗರಾಜ್ ಆನೆಹೊಸೂರು, ಅಮರೇಶ್, ಸದಾನಂದ,ಅಮರೇಶ್ ಬಿ, ವೀರೇಶ್ ಇದ್ದರು

Be the first to comment

Leave a Reply

Your email address will not be published.


*