ಜಿಲ್ಲಾ ಸುದ್ದಿಗಳು
ಲಿಂಗಸುಗೂರು
ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಸ್ವತ್ತು ಕಳವು, ಅಪರಿಚಿತ ರಸ್ತೆ ಅಪಘಾತ ಮತ್ತು ಅಕ್ರಮ ಅಕ್ಕಿ, ಸಾಗಾಟ : ಬಗ್ಗೆ ಮಾಹಿತಿ ಸಂಗ್ರಹಿಸಿ: ದಾಳಿ ಮಾಡುವಲ್ಲಿ ಮತ್ತು ಆರೋಪಿತರ ಪತ್ತೆ ಮಾಡಿ ಸ್ವತ್ತುಗಳನ್ನು ಜಪ್ತಪಡಿಸಿಕೊಳ್ಳುವಲ್ಲಿ ನೀವು ಅತ್ಯುತ್ತಮವಾಗಿ ಕರ್ತವ್ಯ ಪ್ರಜ್ಞೆ ಮೆರೆದಿದ್ದು.ಮೆಚ್ಚುವಂತದ್ದಾಗಿರುತ್ತದೆ. ಪ್ರಕರಣಗಳಲ್ಲಿಯ ನಿಮ್ಮ ಕಾರ್ಯನಿರ್ವಹಣೆಯು ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಭಾವನ ಹೆಚ್ಚಿಸುಲ್ಲಿ ಮಹತ್ತರ ಪಾತ್ರ ವಹಿಸಿರುತ್ತದೆ.ಲಿಂಗಸುಗೂರು ಪೊಲೀಸ್ ಠಾಣೆ ಮೊ.ನಂ. 202/2021 ಕಲಂ 379 ಐಪಿಸಿ ಪ್ರಕರಣದಲ್ಲಿ ಕಳುವಾದ ಮೋಟಾರ್ ಸೈಕಲ್ ಪತ್ರ ಕುರಿತು ವಿಶೇಷ ಆಸಕ್ತಿ ವಹಿಸಿ ಬಾಹ್ಯ ಮೇರೆಗೆ ಆರೋಪಿತನನ್ನು ಪತ್ತೆ ಮಾಡಿ ಈ ಪ್ರಕರಣದಲ್ಲಿ ಕಳುವಾಗಿದ್ದ ಮೋಟಾರ್ ಸೈಕಲ್ ಸೇರಿದಂತೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿದ್ದ 6 ಮೋಟಾರ್ ಸೈಕಲ್ ಸೇರಿ ಒಟ್ಟು ಮೊತ್ತ ರೂ. 2,50,000/- ಬೆಲೆಬಾಳುವ 07 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
ಲಿಂಗಸುಗೂರು ಪೊಲೀಸ್ ಠಾಣೆ ಮೊ.ನಂ. 205/2021 ಕಲಂ 3 ಮತ್ತು 7 ಅವಶ್ಯಕ ವಸ್ತು ಕಾಯ್ದೆ ಪ್ರಕರಣದಲ್ಲಿ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಸಂಗ್ರಹಿಸಿ ರೂ 1,00,000/- ಮೌಲ್ಯದ 24 ಕ್ವಿಂಟಾಲ್ ಪಡಿತರ ಅಕ್ಕಿ ಸೇರಿ ರೂ4,00,000/- ಬೆಲೆಬಾಳುವ ಟ್ರ್ಯಾಕ್ಟರ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಇರುತ್ತದೆ. ಲಿಂಗಸುಗೂರು ಪೊಲೀಸ್ ಠಾಣೆ ಮೊ.ನಂ. 209/2021 ಕಲಂ 420 ಐಪಿಸಿ ಪ್ರಕರಣದಲ್ಲಿ 4 ಜನ.ಆರೋಪಿತರನ್ನು ಪತ್ತೆ ಮಾಡಿ ಅವರಿಂದ ಆನೆದಂತ, ಏಕಮುಖಿ ರುದ್ರಾಕ್ಷಿ, ಕೆಂಪ ಪಾದರಸ ಸೇರಿದಂತೆ ಇನ್ನಿತರ ಕೆಲವು.ಪರಿಕರಗಳ ಜೊತೆಯಲ್ಲಿ 01 ಮೋಟಾರ್ ಸೈಕಲ್ ಮತ್ತು 01 ಕಾರು ಒಳಗೊಂಡು ರೂ. 1,29,01,500/- ಮೌಲ್ಯದಸ್ವತ್ತುಗಳನ್ನು ವಶಪಡಿಸಿಕೊಂಡು ಉತ್ತಮ ಕಾರ್ಯನಿರ್ವಹಿಸಿದ್ದು ಇರುತ್ತದೆ.
ಲಿಂಗಸುಗೂರು ಪೊಲೀಸ್ ಠಾಣೆ ಮೊ.ನಂ. 214/2021 ಕಲಂ 279, 304(ಎ) ಐಪಿಸಿ ಮತ್ತು ಕಲಂ 187 ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಸ್ಥಳದಲ್ಲಿ ದೊರೆತ ಬಸ್ಸಿನ ತುಣುಕುಗಳ ಆಧಾರದ ಮೇಲಿಂದ 25 ಬಸ್ ಘಟಕಗಳಿಗೆ ಭೇಟಿ ನೀಡಿ ಸುಮಾರು 750 ಬಸ್‌ಗಳ ಪರಿಶೀಲನೆ ಮಾಡಿ ಅಪಘಾತಪಡಿಸಿದ್ದ ಕಲಬುರಗಿ ಜಿಲ್ಲೆಯ ಕಾಳಗಿ ಬಸ್ ಘಟಕ ಅಪರಿಚಿತ ಬಸ್ ಸಂಖ್ಯೆ ಕೆಎ 32 ಎಫ್ 2330 ಇದನ್ನು ಪತ್ತೆ ಮಾಡಿ ಪ್ರಕರಣ ಇತ್ಯರ್ಥಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ. ಶ್ರಮಿಸಿದ್ದು ಇರುತ್ತದೆ.
ಲಿಂಗಸುಗೂರು ಪೊಲೀಸ್ ಠಾಣೆ ಮೊ.ನಂ. 16/2022 ಕಲಂ 457, 380 ಐಪಿಸಿ ಪ್ರಕರಣದಲ್ಲಿ ಕಳ್ಳತನವಾಗಿದ್ದ ಒಟ್ಟು 18 ಚೀಲ ತೊಗರಿ ಮತ್ತು 03 ಆರೋಪಿತರನ್ನು ಪತ್ತೆ ಅವರಿಂದ ಕಳವು ಮಾಡಿದ್ದ ತೊಗರಿ ಮತ್ತು ಕಳ್ಳತನ ಮಾಡಲು ಬಳಕೆ ಮಾಡಿದ ಬುಲೆರೋ ಪಿಕಪ್ ವಾಹನ ಸೇರಿ ಒಟ್ಟು ರೂ. 4,00,000/- ಬೆಲೆಬಾಳುವುದನ್ನು ವಶಪಡಿಸಿಕೊಳ್ಳುವಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ್ದು ಇರುತ್ತದೆ.
ನಿಮ್ಮ ಈ ಕರ್ತವ್ಯ ನಿರ್ವಹಣಾ ಪಟ್ಟೆಯು ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರಿಯಲಿ ಮತ್ತು ಇಲಾಖೆಯ ಘನತೆ, ಗೌರವ ಹೆಚ್ಚಿಸುವಲ್ಲಿ ಸದಾ ಜಾಗೃತವಾಗಿರಲಿ ಅಂತಾ ಹಾರೈಸುತ್ತ ಈ ಪ್ರಶಂಸನೀಯ ಪತ್ರ ನೀಡಲಾಗಿದೆ. ನಿಮ್ಮ ಈ ಕಾರ್ಯದಲ್ಲಿ ನಿಮಗೆ ಮಾರ್ಗದರ್ಶನ ಮತ್ತು ಸಹಕಾರ ನೀಡಿದ ಎಲ್ಲರಿಗೂ ನನ್ನ ವತಿಯಿಂದ ಅಭಿನಂದನೆಗಳನ್ನು ಮರೆಯದೇ ತಿಳಿಸುವುದು ಲಿಂಗಸುಗೂರ ಸಿ.ಪಿ.ಐ.ಮಹಾಂತೇಶ್ ಸಜ್ಜನ ರ ಸರಳ ಹಾಗೂ ಕರ್ತವ್ಯ ನಿಷ್ಠೆ ಗೆ ದೊರೆತ ಬಹುಮಾನ ವಾಗಿದೆ
Be the first to comment