ಜಿಲ್ಲಾ ಸುದ್ದಿಗಳು
CHETAN KENDULIಅಂಜುಮನ್ ಏ ಇಸ್ಲಾಂ ಸಂಸ್ಥೆಯ ವತಿಯಿಂದ 24×7 ಉಚಿತ ಅಂಬ್ಯುಲೆನ್ಸ ಹಾಗೂ ಆಕಗಸಿಜನ್ ಸೇವೆ ಒದಗಿಸುತ್ತಿದ್ದು ಇಂದು ಅಧಿಕೃತವಾಗಿ ಚಾಲನೆ ನೀಡಿ ನಿಮ್ಮೆಲ್ಲರ ಸೇವೆಗೆ ಸಮರ್ಪಣೆ ಮಾಡಲಾಗಿದೆ.
ಬಾಗಲಕೋಟೆ(ಇಲಕಲ್ಲ):
ಇಂದು ದೇಶದಾದ್ಯಂತ ಕರೋನಾ ಮಹಾಮಾರಿಯ ಅರ್ಭಟಕ್ಕೆ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಅದರಂತೆ ಜಿಲ್ಲೆಯಲ್ಲಿಯೂ ದಿನೇದಿನೆ ಕೋವಿಡ್-19 ಎರಡನೇ ಅಲೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ ಭಯಭೀತರಾಗಿದ್ದು, ಅಂಜುಮನ್ ಏ ಇಸ್ಲಾಂ ಸಂಸ್ಥೆಯ ವತಿಯಿಂದ 24×7 ಉಚಿತ ಅಂಬ್ಯುಲೆನ್ಸ ಸೇವೆ ಹಾಗೂ ಆಕ್ಸಿಜನ್ ಸೇವೆಗೆ ಅಧ್ಯಕ್ಷರಾದ ಶ್ರೀ ಉಸ್ಮಾನಗನಿ ಹುಮನಾಬಾದ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದರು.
ಇಲಕಲ್ಲ ನಗರದ ಖ್ಯಾತ ಸಂಸ್ಥೆಗಳಲ್ಲಿ ಒಂದಾದ ಅಂಜುಮನ್ ಇ ಇಸ್ಲಾಂ ಸಂಸ್ಥೆಯು ಒಂದು.ದಿನಾಂಕ:25-03-1965 ರಂದು ಹಲವು ಉದ್ದೇಶಗಳನ್ನಿಟ್ಟುಕೊಂಡು ಪಾರಂಭವಾದ ಈ ಸಂಸ್ಥೆ ಇಂದು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಯನ್ನೆ ಸೃಷ್ಠಿಸಿದೆ.ಇಂದು ಇಲಕಲ್ಲ ನಗರ ಹಾಗೂ ನಗರದ ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಜನರು ಯಾವುದೇ ಜಾತಿ ಮತ ಎನ್ನದೆ ಸರ್ವಜನಾಂಗದವರ ಸದುಪಯೋಗಕ್ಕಾಗಿ ಇಂದು ಅಂಬುಲೆನ್ಸ ಹಾಗೂ ಆಕ್ಸಿಜನ್ ಸೇವೆ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷರಾದ ಉಸ್ಮಾನಗನಿ ಹುಮನಾಬಾದ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ,ಸಂಸ್ಥೆಯ ಸದಸ್ಯರು,ಹುನಗುಂದ ತಾಲೂಕಾ ವೈಧ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ,ಇಲಕಲ್ಲ ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ ಹಾಗೂ ಇತರರು ಉಪಸ್ಥಿತರಿದ್ದರು.
Be the first to comment