ಡಾಕ್ಟರ್ ಎಚ್. ನರಸಿಂಹಯ್ಯನವರ ಪುಣ್ಯ ಸ್ಮರಣೆ   

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

                                                                                                ಮಸ್ಕಿ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ತಾಲೂಕು ಘಟಕವೂ ಮಸ್ಕಿ ಪಟ್ಟಣದ ಕೇಂದ್ರ ಶಾಲೆಯಲ್ಲಿ ವೈಜ್ಞಾನಿಕ ಚಿಂತಕ ,ವಿಚಾರವಾದಿ ,ಲೇಖಕ ,ಪವಾಡ ಬಯಲು ತಜ್ಞ ಎಚ್ ನರಸಿಂಹಯ್ಯನವರ 17ನೇ ಪುಣ್ಯಸ್ಮರಣೆಯನ್ನು ಆಯೋಜಿಸಲಾಗಿತ್ತು . ಈ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ತಾಲೂಕು ಘಟಕದ ನಿರ್ದೇಶಕಿಯಾದ ಶ್ರೀಮತಿ ಅಶ್ವಿನಿ ರವರು ವೈಜ್ಞಾನಿಕ ಚಿಂತಕ ,ವಿಚಾರವಾದಿ ನರಸಿಂಹಯ್ಯನವರ ಬಾಲ್ಯ,ಶಿಕ್ಷಣ ಮತ್ತುಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಇತ್ಯಾದಿಗಳ ಬಗ್ಗೆ ತಿಳಿಸಿದರು. ನಂತರ ಮಸ್ಕಿ ಘಟಕದ ಅಧ್ಯಕ್ಷರಾದ ಶ್ರೀಮತಿ ಶಬಾನಾ ಮೇಡಂ ರವರು ಪರಿಷತ್ತಿನ ಸದಸ್ಯತ್ವ ಅಭಿಯಾನದ ಕುರಿತು ಮಾಹಿತಿ ಹಂಚಿಕೊಂಡರು. ಘಟಕದ ಖಜಾಂಚಿ ಯಾದ ಶ್ರೀ ಜಗದೀಶ್ ರವರು ನಿರೂಪಿಸಿದರು.

CHETAN KENDULI

ಈ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ನಿರ್ದೇಶಕರಾದ ಶ್ರೀಮತಿ ಚೆನ್ನಮ್ಮ, ಶಿಕ್ಷಕಿಯರಾದ ಶ್ರೀಮತಿ ಸಾವಿತ್ರಿ ,ಶ್ರೀಮತಿ ನಿರ್ಮಲ ,ವೀಣಾ ,ಮಂಜುಳಾ ,ಬನಶ್ರೀ ,ಶೈಲಜಾ ಮತ್ತು ಹಿರಿಯ ಶಿಕ್ಷಕರಾದ ಭೀಮಪ್ಪ ಎನ್ ಬೆಲ್ಲದ, ಮಾಂತೇಶ್, ಯಮನೂರಪ್ಪ ಗಾಲ್ಗಿನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*