ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಮಸ್ಕಿ ಅಶೋಕ ಸರ್ಕಲ್ ನಿಂದ ತಹಶೀಲ್ದಾರ ಕಚೇರಿಗೆ ಬೃಹತ್ ಪ್ರತಿಭಟನಾ ಜಾಥಾ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಮಸ್ಕಿ

CHETAN KENDULI

ಕಾಂಗ್ರೇಸ್ ಪಕ್ಷ,ಕರ್ನಾಟಕ ರೈತ ಸಂಘ, ಎನ್.ಆರ್.ಬಿ.ಸಿ 5ಎ ಕಾಲುವೆಹೋರಾಟ ಸಮಿತಿ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ 7 ಸಂಘಟನೆಗಳು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಸ್ಕಿ ಪಟ್ಟಣದ ಅಶೋಕ ಸರ್ಕಲ್ ನಿಂದ ತಹಶೀಲ್ದಾರ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ನಿರತ ಕಾಲ್ನಡಿಗೆ ಜಾಥಾ ಹೊರಟರು.

ಕನಕದಾಸ ವೃತ್ತದ ಬಳಿ ಕಳೆದ‌ 10 ತಿಂಗಳಿಂದ‌ ಮೂರು ಕೃಷಿ‌ ಕಾನೂನುಗಳ ವಿರುದ್ದ ರೈತರು ದೆಹಲಿ ಸುತ್ತಮುತ್ತ ಹೋರಾಟ ನಿರತರಾಗಿದ್ದಾರೆ. ‌ಆದರೆ ನರೇಂದ್ರ‌ ಮೋದಿ‌ ನೇತೃತ್ವದ ಬಿಜೆಪಿ ಸರ್ಕಾರ ರೈತರ ಜೊತೆ ಮಾತುಕತೆ ನಡೆಸದೆ ಹೋರಾಟವನ್ನು ಹತ್ತಿಕ್ಕಲು ಹಲವು ಯತ್ನಗಳನ್ನು ನಡೆಸಿರುವುದು ಖಂಡನಾರ್ಹ. ರೈತ ವಿರೋಧಿ ತಿದ್ದುಪಡಿ ಕಾಯ್ದೆ ಹಿಪಡೆಯುವಂತೆ ಕೇಂದ್ರ ಆಡಳಿತ ಸರಕಾರದ ವಿರುದ್ಧ ಎಚ್. ಬಿ ಮುರಾರಿ ಕೆಪಿಸಿಸಿ ಮಾಜಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. 

ಈ ನೂತನ ಕೃಷಿ‌ ಕಾನೂನುಗಳು ಕೃಷಿ‌ ಕ್ಷೇತ್ರದ ಕಂಪನೀಕರಣಕ್ಕೆ ಅವಕಾಶ ನೀಡಲಿವೆ ಇದರಿಂದ ಫಲವತ್ತಾದ ಕೃಷಿ‌ಭೂಮಿ ಕಾರ್ಪೊರೇಟ್ ಕೈ ವಶವಾಗಲಿದೆ. ಇದರಿಂದ ಭವಿಷ್ಯದಲ್ಲಿ ದೇಶದಲ್ಲಿ ಆಹಾರ ಸಮಸ್ಯೆ ಎದುರಿಸಲಿದೆ. ಕೋಟ್ಯಂತರ ಜನರು ಬೆಲೆ ಏರಿಕೆ ಹಾಗೂ ಹಸಿವಿನಿಂದ ತತ್ತರಿಸಿದರೆ ಮತ್ತೊಂದು ಕಡೆ ದೇಶದಲ್ಲಿ ಜಾರಿಯಲ್ಲಿದ್ದ 29 ಕಾರ್ಮಿಕ‌ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ರೂಪಿಸಿದೆ. ಇದರಿಂದ ಸ್ವಾತಂತ್ರ್ಯ ಪೂರ್ವದಿಂದಲೂ ಜಾರಿಯಲ್ಲಿದ್ದ ಹಲವು ಹಕ್ಕುಗಳು ಮತ್ತು ಸಾಮಾಜಿಕ ಸುರಕ್ಷತೆಗಳಿಂದ ಕಾರ್ಮಿಕರು ವಂಚಿತರಾಗಲಿದ್ದಾರೆ. ಆದ ಕಾರಣ ರೈತ ವಿರೋಧಿ ಕಾಯ್ದೆಗಳನ್ನು ಹಿಪಡೆಯಬೇಕೆಂದು ಒತ್ತಾಯಿಸಿ 150ಎ ರಾಷ್ಟೀಯ ಹೆದ್ದಾರಿಯನ್ನು ಸ್ವಲ್ಪ ಸಮಯ ಕಾಲ ಬಂದ್ ಮಾಡಲಾಯಿತು. ನಂತರ ವಿವಿಧ ಸಂಘಟನೆಗಳು ದಂಡಾಧಿಕಾರಿ ಬದಲಿಗೆ ಶಿರಸ್ತೇದಾರ್ ಅಕ್ತರ್ ಅಲಿ ಇವರಿಗೆ ಮನವಿ ಮಾಡಿದರು.ಈ ವೇಳೆಯಲ್ಲಿ ಹಲವು ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಸದಸ್ಯರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*