ಜಿಲ್ಲಾ ಸುದ್ದಿಗಳು
ಮಸ್ಕಿ
ಯುವ ಸಬಲೀಕರಣ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಏಷಿಯಾ ವೇದಿಕ್ ರೀಸರ್ಚ್ ಯುನಿವರ್ಸಿಟಿ ಬೆಂಗಳೂರು ವತಿಯಿಂದ ಮಸ್ಕಿ ತಾಲೂಕಿನ ಒಂದು ಪುಟ್ಟ ಗ್ರಾಮದ ಹಡಗಲಿ ತಾಂಡ ನಿವಾಸಿ ಗುಂಡಪ್ಪ ಚವ್ಹಾಣ್ ರವರನ್ನು ಗುರುತಿಸಿ ಗೌರವ ಡಾಕ್ಟರೇಟ್ ಅನ್ನು ಪ್ರಧಾನ ಮಾಡಿ ಗೌರವ ಸಲ್ಲಿಸಿದೆ.ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಡಗಲಿ ತಾಂಡದ ಹನಮಪ್ಪ ತಂದೆ ಜಲಮ್ಮ ತಾಯಿ ಇವರ ಸಾಮಾನ್ಯ ಕೂಲಿ ಕಾರ್ಮಿಕರ ಮಗನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣ ವನ್ನು ಹುಟ್ಟಿದ ಊರಾದ ಹಡಗಲಿ ತಾಂಡ ದಲ್ಲಿಯೇ ಮುಗಿಸಿ,
ಪ್ರೌಡ ಶಿಕ್ಷಣ ಸರಕಾರಿ ಶಾಲೆ ನವನಗರ ಹುಬ್ಬಳ್ಳಿಯಲ್ಲಿ ಮುಗಿಸಿ,ಕರ್ನಾಟಕ ವಿಶ್ವವಿದ್ಯಾಲಯ ದಲ್ಲಿ ಬಿ.ಕಾಂ ಪದವಿ ಮುಗಿಸಿ, ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನ ಭಾರತಿ ಆವರಣದಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಮುಗಿಸಿ, ಪ್ರಸ್ತುತ ಏಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಾ ಇದ್ದಾರೆ. ಸ್ನಾತಕೋತ್ತರ ಪದವೀಧರ ಗುಂಡಪ್ಪ ಚವ್ಹಾಣ್ ರವರಿಗೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಯ ಹಾದಿಗೆ ನಿಲುಕದಷ್ಟು ಅವರು ಮಾಡಿದಂತಹ ಸಾಮಾಜಿಕ ಸೇವೆಯನ್ನು ಸಲ್ಲಿ ಸಿದ್ದಾರೆ.ಆದ್ದರಿಂದ ಇವರನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು, ಸಂತಸದ ಸಂಗತಿ ಯಾಗಿದೆ.ಇವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡು ಯಾರ ಸಲಹೆ ಮತ್ತು ಆರೈಕೆ ಯಲ್ಲಿ ಬೆಳೆಯದೆ, ತಾನೇ ಕಷ್ಟಪಟ್ಟು ದುಡಿದ ಹಣದಲ್ಲಿಯೇ ಶಿಕ್ಷಣವನ್ನು ಪಡೆದು. ಹುಟ್ಟು ಗ್ರಾಮವನ್ನು ಬಿಟ್ಟು ದೂರದ ನಗರ ಬೆಂಗಳೂರಿಗೆ ಹೋಗಿ ದುಡಿಯುವ ಜೊತೆಗೆ ಶಿಕ್ಷಣ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಗಾದೆ ಮಾತಿನಂತೆ “ಆಡು ಮುಟ್ಟದ ಸೊಪ್ಪಿಲ್ಲ ಗುಂಡಪ್ಪ ಚವ್ಹಾಣ್ ಮಾಡದ ಕೆಲಸಗಳೇ ಇಲ್ಲಾ” ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ನಿರಂತರ ಸೇವೆಯೇ ಈ ಗೌರವಕ್ಕೆ ಸಂಧ ಪ್ರತಿಫಲವಾಗಿದೆ.
ಗೌರವಕ್ಕೆ ಭಾಜನರಾಗಲು ಸಹಕರಿಸಿದ ನನ್ನ ಪ್ರೀತಿಯ ಫ್ರೌಡ ಶಾಲೆ ಗುರುಗಳಾದ ಸುಮಂಗಲಾ ,ಪರಿಮಳ,ಪದ್ಮಿನಿ ಹಾಗೂ ಪ್ರಾಥಮಿಕ ಶಾಲೆ ಗುರುಗಳು ಮಲ್ಲು ವಾಗ್ಗರ್ , ಹಾಗೂ ನನ್ನ ಆತ್ಮೀಯ ಸ್ನೇಹಿತ ಮೌನೇಶ್ ರಾಥೋಡ್ ಪಿಎಸ್ಐ, ಎಲ್ಲಾ ಪ್ರೀತಿಯ ಗುರು ಹಿರಿಯರಿಗೆ, ಶಿಕ್ಷಕ ವೃಂದಕ್ಕೆ, ಎಲ್ಲಾ ನನ್ನ ಹಿತೈಷಿಗಳಿಗೆ , ಪ್ರೀತಿಯ ಗೆಳೆಯ ಗೆಳತಿಯರಿಗೆ, ಆತ್ಮೀಯರಾದ ನವೀನ್ ರವರಿಗೆ ಸೇರಿದಂತೆ ಡಾ. ಗುಂಡಪ್ಪ ಚವ್ಹಾಣ್ ರವರು ತಮ್ಮ ಈ ಗೌರವಕ್ಕೆ ಬೆನ್ನೆಲುಬಾಗಿ ನಿಂತ ಸರ್ವರಿಗೂ ಹಾಗೂ ತಮಗೆ ಜನ್ಮನೀಡಿದ ತಂದೆ-ತಾಯಿ ಗಳಿಗೆ ವಿಶೇಷವಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
Be the first to comment