ಜಿಲ್ಲಾ ಸುದ್ದಿಗಳು
ಕೋಟ
ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಮೊಮ್ಮಗ ಶ್ರೀ ಸಾತ್ಯಕಿ ಸಾವರ್ಕರ್ ಭೇಟಿ ನೀಡಿದರು. ಅವರು ಕೆರೆಯ ಮಧ್ಯದಲ್ಲಿರುವ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಂಗ ಮಂದಿರ, ಆರ್ಟ್ ಗ್ಯಾಲರಿ, ಅಂಗನವಾಡಿ, ಗ್ರಂಥಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಭಾಷೆಗಳನ್ನು ಶ್ರೀಮಂತ ಗೊಳಿಸುವಲ್ಲಿ ಕವಿಗಳ ಪಾತ್ರ ಅಮೋಘವಾದದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ನೆನಪಿನಲ್ಲಿ ಈ ಥೀಮ್ ಪಾರ್ಕ್ ನಿರ್ಮಾಣ ಶ್ಲಾಘನೀಯ, ಕಾರಂತರ ಸಾಧನೆಗಳು ಮುಂದಿನ ಜನಾಂಗಕ್ಕೆ ತಲುಪುವಂತಾಗಲಿ ಎಂದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀಕೋಟ ಶ್ರೀನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಟ್ರಸ್ಟಿ ಶ್ರೀ ಸುಬ್ರಾಯ್ ಆಚಾರ್ಯ, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ಶ್ರೀ ಪ್ರಕಾಶ್ ಹಂದಟ್ಟು, ಶ್ರೀ ಪ್ರಕಾಶ್ ಮಲ್ಪೆ ಉಪಸ್ಥಿತರಿದ್ದರು.
Be the first to comment