ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಟಾಸ್ಕ್ಫೋರ್ಸ್ ಸಮಿತಿಯಿಂದ ಕೋವಿಡ್ ಜಾಗೃತಿ ಜಾಥಾ ನಡೆಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಂದಾಯ ನಿರೀಕ್ಷಕರಾದ ಧರ್ಮಣ್ಣ ಯತ್ನಟ್ಟಿ, ಗ್ರಾಪಂ ಕಾರ್ಯದರ್ಶಿ ಎಸ್.ಜಿ.ಹಿರೇಮಠ ಹಾಗೂ ಸಿಬ್ಬಂದಿ ಜಾಥಾ ನಡೆಸಿ ಕೋವಿಡ್‌ನ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿದರು.
ಮಾಸ್ಕ್ ಧಾರಣೆ ಮಹತ್ವ, ಅಗತ್ಯ ಸಂದರ್ಭದಲ್ಲಿ ಮಾತ್ರ ಹೊರಗೆ ಬರಬೇಕು, ಗುಂಪುಗೂಡಬಾರದು, ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಂಡರೆನಿರ್ಲಕ್ಷಿಸದೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ವಾರಂತ್ಯ ಕಪ್ರ್ಯೂ ಜಾರಿ ಇದ್ದು ಈ ವೇಳೆ ಯಾರು ಅನಗತ್ಯವಾಗಿ ಓಡಾಡಕೂಡದು ಎಂದು ಸಾರ್ವಜನಿಕರಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಇದೆ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಗ್ರಾ.ಪಂ ಸಿಬ್ಬಂದಿಯವರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯವರೆಲ್ಲ ಸೇರಿ ಕೊರಾನಾ ಸೊಂಕಿತರ ಮನೆ ಮನೆಗೆ ಬೇಟಿ ನೀಡಿ ಮನೆಯಲ್ಲೆ ಪ್ರತ್ಯೇಕ ಕ್ವಾರಂಟೈನ್ ಮಾಡಿಕೊಳ್ಳಲು ಸೂಚಿಸಲಾಯಿತು.
Be the first to comment