ಕೃಷಿ ಮಾಹಿತಿ ಕೇಂದ್ರ ಸ್ಥಾಪಿಸುವಲ್ಲಿ ನವ ದೆಹಲಿಯ ಆಯ್.ಸಿ.ಎ.ಆರ್ ಮಾರ್ಗ ಸೂಚನೆಯನ್ನು ಗಾಳಿಗೆ ತೂರಿದ್ದಾರೆ…!!! ಕೃಷಿ ವಿಸ್ತರಣಾ ಕೇಂದ್ರವನ್ನು ಮುದ್ದೇಬಿಹಾಳಕ್ಕೆ ಸ್ಥಳಾಂತರಿಸಲು ಬಿಜೆಪಿ ಮಹಿಳಾ ಮೋರ್ಚಾದಿಂದ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ನವ ದೆಹಲಿಯ  ಕೃಷಿ ವಿಶ್ವ ವಿದ್ಯಾಲಯದ ಮೂಲಕ ಸ್ಥಾಪನೆಯಾಗುವ ರೈತರಿಗೆ ತರಬೇತಿ ಹಾಗೂ ತಂತ್ರಜ್ಞಾನದ ಮಾಹಿತಿ ಒದಗಿಸುವ ಕೇಂದ್ರಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪನೆ ಮಾಡಬಾರದು ಎಂಬ ಮಾರ್ಗ ಸೂಚನೆ ಇದ್ದರೂ ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಫಾರ್ಮನಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಸ್ಥಾಪನೆ ಮಾಡಿದ್ದು ಕೂಡಲೇ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವನ್ನು ಮುದ್ದೇಬಿಹಾಳ ತಾಲೂಕಿಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಸೋಮವಾರ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ದಾರವಾಡ ಕೃಷಿ ವಿವಿ ಕುಲಪತಿಗಳಿಗೆ ತಹಸೀಲ್ದಾರ ಅವರ ಮೂಲಕ ಮನವಿ ಸಲ್ಲಿಸಿದ್ದಾರೆ.



ಮುದ್ದೇಬಿಹಾಳ ತಾಲೂಕು ನಿಡಗುಂದಿ ಹಾಗೂ ತಾಳಿಕೋಟಿ ತಾಲೂಕಿಗೆ ಮಧ್ಯವಾಗಿದ್ದು ಇಲ್ಲಿನ ರೈತರು ಸುಧಾರಿತ ಬೇಸಾಯ ಕ್ರಮಗಳ ಮತ್ತು ಕೃಷಿ ಹಾಗೂ ಸಂಬಂಧಿತ ಸುಧಾರಿತ ತಂತ್ರಜ್ಞಾನಗಳ ಕುರಿತು ಸರಿಯಾದ ತರಬೇತಿ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಇದಕ್ಕಾಗಿ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಕೃಷಿ ವಿಶ್ವ ವಿದ್ಯಾಲಯವು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವನ್ನು ಮುದ್ದೇಬಿಹಾಳ ತಾಲೂಕಿಗೆ ಸ್ಥಳಾಂತರಿಸಲು ಆದೇಶ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೂ ಕೇಂದ್ರವು ಸ್ಥಳಾಂತರಗೊಂಡಿಲ್ಲ. ಇದರಿಂದ ಮೂರು ತಾಲೂಕಿನ ರೈತರಿಗೆ ತೊಂದರೆಯಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.


ನವದೆಹಲಿಯ ಮಾರ್ಗಸೂಚನೆಗೆ ವಿರುದ್ಧವಾಗಿ ಕೇಂದ್ರಗಳ ಸ್ಥಾಪನೆ:
ಹಿಟ್ಟಿನಹಳ್ಳಿ ಫಾರ್ಮನಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಜೊತೆಗೆ ಕೃಷಿ ವಿಜ್ಞಾನ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಇದರಿಂದ ಕೇಂದ್ರಗಳ ಮಾಹಿತಿ ಪಡೆಯಲು ಮೂರು ತಾಲೂಕಿನ ರೈತರು ಸುಮಾರು 85 ರಿಂದ 100 ಕಿ.ಮೀ ದೂರಕ್ಕೆ ಪ್ರಯಾಣ ಬೆಳೆಸಿ ಮಾಹಿತಿ ಪಡೆಯುವ ದುಸ್ಥಿತಿ ಎದುರಾಗಿದೆ. ಎರಡೂ ಕೇಂದ್ರಗಳೂ ಒಂದೇ ಸ್ಥಳದಲ್ಲಿದ್ದು ನವದೆಹಲಿಯ ಆಯ್.ಸಿ.ಎ.ಆರ್. ಮಾಹಿತಿ ಪ್ರಕಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಒಂದೇ ಸ್ಥಳದಲ್ಲಿ ಮಾಡುವಂತಿಲ್ಲ. ಆದರೂ ವಿಜಯಪುರ ಜಿಲ್ಲೆಯಲ್ಲಿ ಕೆಲ ಪಟ್ಟಭದ್ರ ಹಿತಾಶಕ್ತಿಗಳ ಕೈವಾಡದಿಂದ ಒಂದೇ ಫಾರ್ಮನಲ್ಲಿ ಎರಡೂ ಕೇಂದ್ರಗಳನ್ನು ಸ್ಥಾಪನೆಮಾಡಲಾಗಿದೆ.

 

 

Be the first to comment

Leave a Reply

Your email address will not be published.


*