ರಾಜ್ಯ ಸುದ್ದಿಗಳು
ಸುಳ್ಯ:
ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯೊಬ್ಬಳನ್ನು ಲವ್ ಜಿಹಾದ್‌ನಲ್ಲಿ ಸಿಲುಕಿಸಿ, ಮದುವೆಯಾದ ಮೇಲೆ ಮತಾಂತರಗೊಳಿಸಿ ಲಕ್ಷಾಂತರ ರೂಪಾಯಿ ದೋಚಿದ ನಂತರ ಆತ ನಾಪತ್ತೆಯಾಗಿದ್ದು, ಮೋಸಕ್ಕೊಳಗಾದ ಯುವತಿ, ಆತನ ಅಂಗಡಿಯಲ್ಲೇ ನ್ಯಾಯಕ್ಕಾಗಿ ಶಾಂತಿಯ ಪ್ರತಿಭಟನೆ ನಡೆಸುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಹಿಂದೂ ಮಹಾಸಭಾ ಕರ್ನಾಟಕ ಸಂತ್ರಸ್ತ ಮಹಿಳೆಯ ಬೆನ್ನಿಗೆ ನಿಂತಿದೆ.
ಪ್ರಕರಣದ ವಿವರ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್ ಮತ್ತು ಝೊಹರಾ ಕಟ್ಟೆಕ್ಕಾರ್ ಎಂಬ ಮತಾಂಧ ದಂಪತಿಗಳ ಮಗನಾದ ಇಬ್ರಾಹಿಂ ಕಟ್ಟೆಕ್ಕಾರ್ ಎಂಬಾತ ಕೇರಳದ ಪ್ರತಿಷ್ಠಿತ ಹಿಂದು ಕುಟುಂಬದ ಶಾಂತಿ ಜೂಬಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ. ನಂತರ ಆಕೆಯನ್ನು ಪುಸಲಾಯಿಸಿ ನಕಲಿ ಪ್ರೇಮ, ಪ್ರೀತಿಯ ಬಲೆಗೆ ಬೀಳಿಸಿದ್ದ ವಿಚಾರ ಬಹಳ ಸಮಯದ ಹಿಂದೆಯೇ ಬೆಳಕಿಗೆ ಬಂದಿತ್ತು. ಲವ್ ಜಿಹಾದ್ ನಲ್ಲಿ ಯಶಸ್ವಿಯಾದ ನಂತರ ಮತಾಂತರದ ಉದ್ದೇಶದಿಂದ ಆರೋಪಿ ಇಬ್ರಾಹಿಂ ಕಟ್ಟೆಕ್ಕಾರ್ ಎಂಬಾತ ಶಾಂತಿ ಜೂಬಿಯನ್ನು ಸಿಂಧೂರ ಕಳಚಿ, ಬುರ್ಖಾ ತೊಡಿಸಿ ಹೆತ್ತು ಹೊತ್ತು ಸಾಕಿದ ತಂದೆ ತಾಯಿ ಮತ್ತು ಸಮಾಜದಿಂದಲೂ ದೂರಮಾಡಿದ್ದ. ತದನಂತರ ತನ್ನ ನೀಚ ಬುದ್ಧಿ ತೋರಿದ್ದ ಇಬ್ರಾಹಿಂ ಆಕೆಗೆ ಕಿರುಕುಳ ನೀಡಿ ಆಕೆಯ ಲಕ್ಷಾಂತರ ರೂಪಾಯಿ ದೋಚಿ ಕಳೆದ ಜನವರಿ 2020 ರಿಂದ ಸುಳ್ಯದಿಂದ ಪರಾರಿಯಾಗಿದ್ದ. ಇದರಿಂದ ಗೊಂದಲಕ್ಕೊಳಗಾದ ಸಂತ್ರಸ್ತ ಮಹಿಳೆಯು ಮೊಹಿದ್ದೀನ್ ಜಾಮಾ ಮಸೀದಿ ಸುಳ್ಯ, ಕಾಂಗ್ರೆಸ್ ಮುಖಂಡರು, ಎಸ್ಡಿಪಿಐ ಮುಖಂಡರು, ಜಮಾತ್, ಮೌಲಾನಗಳು, ಮುಸ್ಲಿಂ ಒಕ್ಕೂಟ ಹಾಗೂ ಇತರ ಮುಸ್ಲಿಂ ಸಂಘಟನೆಗಳ ನೆರವು ಪಡೆಯಲು ಹಲವು ತಿಂಗಳುಗಳಿಂದ ಹರ ಸಾಹಸ ಪಟ್ಟು ಸೋತಿದ್ದರು. ನಂತರ ಕಳೆದ ಡಿಸೆಂಬರ್ ತಿಂಗಳಲ್ಲಿ ಹನಿ ಹಿಂದುಸ್ತಾನಿ ಮುಂಬೈರವರ ಮುಂದಾಳತ್ವದಲ್ಲಿ ಮಹಿಳೆಯನ್ನು ಇಬ್ರಾಹಿಂ ಕಟ್ಟೆಕ್ಕಾರ್ ಅವರ ಮನೆಗೆ ಸೇರಿಸಿದ್ದು, ಕೆಲವು ದಿನಗಳ ನಂತರ ಇಬ್ರಾಹಿಂ ಅನುಪಸ್ಥಿತಿಯಲ್ಲಿ ಕಟ್ಟೆಕ್ಕಾರ್ ಕುಟುಂಬ ಸೊಸೆಯ ಬಗ್ಗೆ ಒಂದು ನಿರ್ಣಯಕ್ಕೆ ಬಂದು ಓಡಿ ಹೋದ ಮತಾಂಧ ಇಬ್ರಾಹಿಂ ಕಟ್ಟೆಕ್ಕಾರ್‌ನನ್ನು ತಿಂಗಳೊಳಗೆ ಕರೆ ತರುವ ಭರವಸೆಯೊಂದಿಗೆ ಅಷ್ಟರವರೆಗೆ ಸೊಸೆಯನ್ನು ಬೇರೆ ಬಾಡಿಗೆ ಮನೆಯಲ್ಲಿ ಇರುವಂತೆ ಮಾಡಿದ್ದರು.
ಇದೀಗ ಏಳೆಂಟು ತಿಂಗಳಾದರೂ ಪತಿ ಇಬ್ರಾಹಿಂ ಕಟ್ಟೆಕ್ಕಾರ್ ಅಥವಾ ಕುಟುಂಬದವರ ಯಾವುದೇ ಉತ್ತರವಿಲ್ಲದಿರುವುದರಿಂದ ಇಂದು ಮತ್ತೊಮ್ಮೆ ಆಸಿಯಾ (ಶಾಂತಿ ಜೂಬಿ) ಕಟ್ಟೆಕಾರ್‌ರವರ ಸುಳ್ಯದ ಚಪ್ಪಲ್ ಅಂಗಡಿಯೊಳಗೆ ಶಾಂತಿಯುತ ಆಂದೋಲನ ಆರಂಭಿಸಿದ್ದಾರೆ.
ವಾರದೊಳಗೆ ಮತಾಂಧ ಇಬ್ರಾಹಿಂ ಕಟ್ಟೆಕ್ಕಾರ್ ತಲಾಖ್ ಮತ್ತು ಪರಿಹಾರ ಮೊತ್ತ 50,00,000/- (ಐವತ್ತು ಲಕ್ಷ ರೂಪಾಯಿ) ಕಟ್ಟೆಕ್ಕಾರ್ ಕುಟುಂಬಸ್ಥರು ನೀಡದಿದ್ದರೆ ಆ ಕುಟುಂಬದ ವಿರುದ್ಧ ಉಗ್ರ ಹೋರಾಟ ನಡೆಸಲು ಅಖಿಲ ಭಾರತ ಹಿಂದೂ ಮಹಾಸಭಾ ಯೋಚಿಸಿದ್ದು ಮುಂದಿನ ದಿನಗಳಲ್ಲಿ ಸುಳ್ಯದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ನೇರ ಹೊಣೆ ಜಿಲ್ಲಾಡಳಿತ ಮತ್ತು ಕಟ್ಟೆಕ್ಕಾರ್ ಕುಟುಂಬ ಎಂದು ಅಖಿಲ ಭಾರತ ಹಿಂದೂ ಮಹಾಸಭಾ, ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಲೋಹಿತ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.
Be the first to comment