ಜಿಲ್ಲಾ ಸುದ್ದಿಗಳು
ದೇವನಹಳ್ಳಿ
ಸಮಾಜದಲ್ಲಿ ಉತ್ತಮ ಬದುಕು ನಡೆಸಲು ವಿಕಲಾಂಗದವರಿಗೆ ಸಂಘದಿಂದ ವೀಲ್‌ಚೇರ್ ನೀಡಲಾಗುವುದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವವರ ಮನೆಗೆ ಭೇಟಿ ನೀಡಿ ಅವರು ಮಾತನಾಡಿದರು. ಕೃಷ್ಣಪ್ಪ ಅವರು ಬುದ್ಧಿಮಾಂದ್ಯದವರಾಗಿದ್ದು, ೬೦ ವರ್ಷ ವಯಸ್ಸಿನ ಇವರು ನಡೆದಾಡಲು ಸಹ ಕಷ್ಟವಾಗುತ್ತಿದೆ. ಅವರಿಗೆ ನಮ್ಮ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ-ಧರ್ಮಸ್ಥಳ ವತಿಯಿಂದ ಇವರಿಗೆ ವೀಲ್ ಚೇರ್ ವಿತರಿಸುವ ಕಾರ್ಯಕ್ಕೆ ಮುಂದಾಗಲಾಗಿದೆ ಎಂದು ಭರವಸೆ ನೀಡಿದರು.
ಈ ವೇಳೆಯಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ಸತೀಶ್ ನಾಯಕ್, ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ, ವಿಪತ್ತು ನಿರ್ವಹಣ ಘಟಕದ ಜಿಲ್ಲಾ ಸಂಯೋಜಕ ನರಸಿಂಹರಾಜು, ಕೃಷಿ ಅಧಿಕಾರಿ ಮನೋಹರ್, ವಲಯ ಮೇಲ್ವೀಚಾರಕ ಧನಂಜಯ್, ಸೇವಾ ಪ್ರತಿನಿಧಿ ವೇದಾವತಿ ಇದ್ದರು.
Be the first to comment