ನಾನು ಯಾವುದೇ ರಾಜಕೀಯ ಟೀಕೆ ಮಾಡಿಲ್ಲ ಬಿಜೆಪಿಯವರು ಸಂಪೂರ್ಣ ಮಾಹಿತಿ ಪಡೆದು ಉತ್ತರ ನೀಡುವಂತವರಾಗಲಿ : ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಬಿಜೆಪಿ ಸರ್ಕಾರ ಜನಸಾಮಾನ್ಯರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಚುನಾವಣೆ ಮಾಡಿ ಕರೋನಾ ಹೆಚ್ಚು ಮಾಡಿ ಜನರನ್ನು ದುಸ್ಥಿತಿಗೆ ಒಳಪಡಿಸಿದೆ. ಇದನ್ನು ಪ್ರಶ್ನೆ ಮಾಡಿರುವುದು ತಪ್ಪಾ….? ನಾನು ಯಾವುದೇ ರಾಜಕೀಯವಾಗಿ ಸಂಸದರಿಗೆ ಟೀಕೆ ಮಾಡಿಲ್ಲ. ಒಬ್ಬ ಕ್ಷೇತ್ರದ ಪ್ರಜೆಯಾಗಿ ಪ್ರಶ್ನೆ ಮಾಡಿದ್ದೇನೆ.

-ಸದ್ದಾಂ ಕುಂಟೋಜಿ, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷರು, ವಿಜಯಪುರ.

ವಿಜಯಪುರ ಸಂಸದರು ಜನಸಾಮಾನ್ಯರಿಗೆ ಸಿಕ್ಕು ಅವರ ಸಮಸ್ಯೆಯನ್ನು ಆಲಿಸುವಂತಾಗಲಿ ಎಂಬ ಒಂದೇ ಉದ್ದೇಶದಿಂದ ಸಂಸದರು ಕಾಣೆಯಾಗಿದ್ದು ಹುಡುಕಿಕೊಡಿ ಎಂದು ಪ್ರಕಟಣೆ ಮೂಲಕ ತಿಳಿಸಿದ್ದೆ. ನಾನು ಯಾವುದೇ ರಾಜಕೀಯ ಮಾಡಿಲ್ಲ ಎಂದು ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ  ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿಗೆ ವಿಜಯಪುರ ಜಿಲ್ಲಾ ಸಂಸದ ರಮೇಶ ಜಿಗಜಿಣಗಿ ಅವರು ಕ್ಷೇತ್ರದಲ್ಲಿ ಕಾಣೆಯಾಗಿದ್ದು ಹುಡುಕಿಕೊಟ್ಟರೆ ಬಹುಮಾನ ನೀಡುವುದಾಗಿ ಪತ್ರಿಕೆ ಮೂಲಕ ತಿಳಿಸಿದ ಹಿನ್ನೆಲೆಯಲ್ಲಿ ಕೆಲ ಬಿಜೆಪಿ ಮುಖಂಡರು ನೀಡಿದ ಪ್ರತಿಕ್ರಿಯೇಗೆ ಅವರು ಸೋಮವಾರ ಉತ್ತರಿಸಿ ಸ್ಪಷ್ಟತೆಯನ್ನು ನೀಡಿದ್ದಾರೆ.



ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಾಂಗ್ರೆಸ್ ಪಕ್ಷ ಕರೋನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ಬೆಂಬಲ ನೀಡಿದೆ. ಆದರೆ ಬಿಜೆಪಿ ಸರ್ಕಾರ ಜನಸಾಮಾನ್ಯರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಚುನಾವಣೆ ಮಾಡಿ ಕರೋನಾ ಹೆಚ್ಚು ಮಾಡಿ ಜನರನ್ನು ದುಸ್ಥಿತಿಗೆ ಒಳಪಡಿಸಿದೆ. ಇದನ್ನು ಪ್ರಶ್ನೆ ಮಾಡುವುದು ತಪ್ಪಾ….? ನಾನು ಯಾವುದೇ ರಾಜಕೀಯವಾಗಿ ಸಂಸದರಿಗೆ ಟೀಕೆ ಮಾಡಿಲ್ಲ. ಒಬ್ಬ ಕ್ಷೇತ್ರದ ಪ್ರಜೆಯಾಗಿ ಪ್ರಶ್ನೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಅಲ್ಲದೇ ಈಗಿರುವ ಸಂಸದರು ನಮಗೆ ನಾಯಕರಿದ್ದಂತೆ. ಅವರ ನಾಯಕತ್ವದಲ್ಲೇ ಜಿಲ್ಲೆಯ ಜನರು ಇರಬೇಕಾಗುತ್ತೆ. ಅವರು ಹಿಂದೆ ಮಾಡಿದ ಕೆಲಸದ ಬಗ್ಗೆ ಮಾತನಾಡುವ ಅಗತ್ಯ ನನಗಿಲ್ಲ. ಸದ್ಯಕ್ಕೆ ಕರೋನಾ 2ನೇ ಅಲೆ ಇದ್ದು ಈ ಸಂದರ್ಭದಲ್ಲಿ ಸಂಸದರು ಕಾಣಲಿಲ್ಲಾ ಎಂದರೆ ಹೇಗೆ….? ಇಂತಹ ವೇಳೆಯಲ್ಲಿ ಜಿಲ್ಲೆಯ ಜನತೆಗೆ ಧರ್ಯ ತುಂಬಿ ಅವರ ಸಮಸ್ಯೆಗಳನ್ನು ಆಲಿಸಬೇಕು ಎನ್ನುವುದನ್ನು ನಾನು ತಿಳಿಸಿಕೊಟ್ಟಿದ್ದೇನೆ ಅಷ್ಟೇ ಎಂದು ಅವರು ಹೇಳಿದ್ದಾರೆ.

ಎರಡು ವರ್ಷದ ನಂತರ ಮರಳಿ ಬಂದಿದ್ದೆ ಒಳ್ಳೆಯದು:

ಕೇಂದ್ರ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಮ್ಮ ಸಂಸದರು ಕ್ಷೇತ್ರಕ್ಕೆ ಬಂದಿದ್ದಾರೆ. ಇನ್ನೂ ಮುಂದೆಯಾದರೂ ಅವರು ಜಿಲ್ಲೆಯ ಜನತೆಗೆ ಸದಾ ಸಿಗುವಂತಾಗಲಿ. ಇನ್ನೂ ಸಂಸದರನ್ನು ಹುಡುಕಿಕೊಟ್ಟವರಿಗೆ ನಾನು ಘೋಷಣೆ ಮಾಡಿದ ಬಹುಮಾನದ ಬಗ್ಗೆ ಬಿಜೆಪಿ ಕಾರ್ಯಕರ್ತರು ಕೇಳಿದಕ್ಕೆ ಸ್ವಾಗತರ್ಹ. ಆದರೆ ಬಿಜೆಪಿ ಕಾರ್ಯಕರ್ತರು ಒಮ್ಮೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಮಾತನಾಡಬೇಕಿದೆ. ಯಾಕೆ ಎಂದರೆ ನಮಗೂ ಕೂಡ 15 ಲಕ್ಷ ಅವಶ್ಯಕತೆ ತುಂಬಾ ಇದೆ ಎಂದು ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ವ್ಯಂಗ್ಯಮಾಡಿದರು.

 

Be the first to comment

Leave a Reply

Your email address will not be published.


*