ಜಿಲ್ಲಾ ಸುದ್ದಿಗಳು
ಭಟ್ಕಳ
ರಾಜ್ಯ ಹೈಕೋರ್ಟ್ ನ ಧಾರವಾಡ ವಿಭಾಗೀಯ ಪೀಠದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಭಟ್ಕಳ ಕರಿಕಲ್ ನ ಮೀನುಗಾರರ ಸಮಾಜದ ವೆಂಕಟೇಶ ಎಂ ಖಾರ್ವಿ ಆಯ್ಕೆಯಾಗಿದ್ದಾರೆ.
ಕೇಂದ್ರ ಕಾನೂನು ಸಚಿವಾಲಯವು ನೇಮಕಾತಿ ಮಾಡಿ ಆದೇಶ ಹೊರಡಿಸಿದೆಕಳೆದ ೨೦ ವರ್ಷಗಳಿಂದ, ಧಾರವಾಡ ಹೈಕೋರ್ಟಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಧಾರವಾಡ ಇದರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ರಾ.ಸ್ವ.ಸಂಘದ ಧಾರವಾಡ ವಿಭಾಗ ಶಾರೀರಿಕ ಶಿಕ್ಷಣ ಪ್ರಮುಖರಾಗಿ ಮತ್ತು ಅ.ಭಾ.ಶಾರೀರಿಕ ಟೋಳಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
Be the first to comment