ಜಿಲ್ಲಾ ಸುದ್ದಿಗಳು
ಕುಮಟಾ
ತಾಲೂಕಿನ ಅಘನಾಶಿನಿ ಹಾಗೂ ಚಂಡಿಕಾ ನದಿ ಸಂಗಮ ಪ್ರದೇಶಲ್ಲಿ ಉದ್ದೇಶಿತ ಕಿಂಡಿ ಆಣೆಕಟ್ಟನ್ನ ಸ್ಥಳಾಂತ ಮಾಡುವಂತೆ ಆಗ್ರಹಿಸಿ ಉಪ್ಪಿನಪಟ್ಟಣ, ಶಿರಗುಂಜಿ,ಚಂಡಿಹಿತ್ತಲ,ಮಲವಳ್ಳಿ ಗ್ರಾಮಸ್ಥರರು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರಿಗೆ ಮನವಿ ಸಲ್ಲಿಸಿದರು.
ಕುಮಟಾ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಅಘನಾಶಿನಿ ಹಾಗೂ ಚಂಡಿಕಾ ನದಿ ಸಂಗಮ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಸರ್ವೆ ಕಾರ್ಯ ಸಹ ನಡೆಸಲಾಗುತ್ತಾ ಇದೆ. ಈ ಯೋಜನೆಯಿಂದ ನದಿ ತೀರ ಪ್ರದೇಶ ಮೂರೂರು ಕಲ್ಲಟ್ಟೆ – ದೀವಗಿ ಪಂಚಾಯತ ವ್ಯಾಪ್ತಿಗೆ ಸೇರಿದ್ದು,ಈ ಭಾಗದಲ್ಲಿ ಏನಾದ್ರೂ ಆಣೆಕಟ್ಟು ನಿರ್ಮಾಣವಾದ್ರೆ. ಅಳಕೋಡ ಗ್ರಾಮ ಪಂಚಾಯತ ಸುತ್ತಮುತ್ತಲಿನ ಗ್ರಾಮಗಳು ಮುಳುಗಡೆ ಆಗಲಿದೆ. ಈಗಾಗಲೆ 1982 ರಿಂದ ಇದುವರೆಗೆ ಉಂಟಾಗಿರುವ ಪ್ರತಿ ಪ್ರವಾಹದಲ್ಲಿಯು ಈ ಎಲ್ಲಾ ಗ್ರಾಮಗಳು ಮುಳುಗಡೆಯಾಗಿದೆ. ಒಂದು ವೇಳೆ ಈ ಭಾಗದಲ್ಲಿ ಏನಾದ್ರೂ ಕಿಂಡಿ ಆಣೆಕಟ್ಟು ನಿರ್ಮಾಣವಾದ್ರೆ ಕೃಷಿ ಭೂಮಿ ಸೇರಿದಂತೆ ಗ್ರಾಮಕ್ಕೆ ಗ್ರಾಮವೆ ಮುಳುಗಡೆ ಆಗಲಿದೆ. ಡ್ಯಾಂ ನಿರ್ಮಾಣದ ಬಗ್ಗೆ ನಾವು ವಿರೋಧ ಮಾಡತ್ತಾ ಇಲ್ಲ.ಈ ಭಾಗದಲ್ಲಿ ಕಿಂಡಿ ಆಣೆಕಟ್ಟು ಆದ್ರೆ ಜನರಿಗೆ ಆಗುವ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಯೋಜನೆಯ ಸಾಧಕ ಬಾಧಕಗಳ ಬಗ್ಗೆ ವಿಸ್ತ್ರತ ಚರ್ಚಿಸಿಬೇಕು. ಯೋಜನೆಯಿಂದ ಮುಂದೆ ಪರಿಸರದ ಮೇಲೆ ಹಾಗೂ ಜನವಸತಿ ಮತ್ತು ಕೃಷಿ ಭೂಮಿಯ ಯಾ ಮೀನುಗಾರಿಕೆ ಮೇಲುಂಟಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗು ತಿಳಿಸಲಾಗಿದೆ. ಯಾವುದೇ ಯೋಜನೆ ಕೈಗೊಳ್ಳುವಾಗ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಿ ಮುಂದುವರೆಯಬೇಕೆಂದು ಸರಕಾರದ ನಿರ್ದೇಶನವಿದ್ದರೂ ಯಾರಿಗೂ ತಿಳಿಸದೇ ಯೋಜನೆಯ ಬಗ್ಗೆ ಪೂರ್ವ ತಯಾರಿ ನಡೆಸಿದ್ದು ಬೇಸರ ತಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Be the first to comment