ಜಿಲ್ಲಾ ಸುದ್ದಿಗಳು
ಕಾರವಾರ
ಉತ್ತರ ಕನ್ನಡ ಜಿಲ್ಲೆ ಮಂಕಿ, ಬೈಲೂರು, ಭಟ್ಕಳ, ಹೊನ್ನಾವರ, ಹೊಸಪಟ್ಟಣ, ಕುಮಟಾ, ಕುದ್ರಿಗಿ, ಹೊದ್ಕೆ, ಹಳದೀಪುರ, ಕಾರವಾರ, ಶಿರಸಿ, ಚಂದಾವರ ಹಾಗೂ ಇತರ ತಾಲೂಕುಗಳಲ್ಲಿ, ಹಾಗೂ ಜಿಲ್ಲೆಯಲ್ಲಿ ರಾಮಕ್ಷತ್ರಿಯ ಸಮಾಜದವರು ಬಹುಸಂಖ್ಯಾತರಿದ್ದು ತಮ್ಮ ದಾಖಲೆಗಳಲ್ಲಿ ಹಾಗೂ ಇತರೆ ಚಾಲ್ತಿಯಿರುವ ಕಾಗದ ಪತ್ರಗಳಲ್ಲಿ ಹಿಂದೂ ಕ್ಷತ್ರಿಯ ಎಂದು ನಮೂದಾಗಿದ್ದು, ಕೇಂದ್ರ ಸರ್ಕಾರದ ವತಿಯಿಂದ ಜಾರಿಯಾಗಿರುವ ಓಬಿಸಿ ಪಟ್ಟಿಯಲ್ಲಿ ಸೇರಿಸದಿರುವುದರಿಂದ ಉನ್ನತ ಶಿಕ್ಷಣ ಮತ್ತು ಕೇಂದ್ರ ಸರ್ಕಾರಿ ನೌಕರರ ಹುದ್ದೆಗೆ ಅರ್ಜಿ ಹಾಕಲು ತೊಂದರೆಯಾಗಿರುತ್ತದೆ. ಕರ್ನಾಟಕ ಸರ್ಕಾರದ
ಪ್ರಚಲಿತದಲ್ಲಿರುವ ಪ್ರವರ್ಗ ವಾದ ಜಾತಿ ವಿವರಗಳ ಪಟ್ಟಿಯಲ್ಲಿ ಅನುಕ್ರಮ ನಂ. ೯೪ (ಎ)ರಲ್ಲಿ ಕ್ಷತ್ರಿಯ/ಕ್ಷತ್ರಿ ಎಂದು ನಮೂದಾಗಿದ್ದು ಇದರಿಂದ ೨ಎ ಪ್ರಮಾಣ ಪತ್ರ ದೊರಕುತ್ತಿದೆ. ಆದರೆ ಓಬಿಸಿ ಕೇಂದ್ರ ಸರ್ಕಾರದ ಪಟ್ಟಿಯಲ್ಲಿಕ್ಷತ್ರಿಯಕ್ಷತ್ರಿಜಾತಿಯನಮೂದಾಗಿರುವುದಿಲ್ಲ
. ಆದ್ದರಿಂದ ರಾಮಕ್ಷತ್ರಿಯ ಜಾತಿಯವರಾದ ನಾವು ಹಿಂದೂ ಕ್ಷತ್ರಿಯ ಎಂಬುದನ್ನು ನಮೂದಿಸಿದ್ದರೂ ಓಬಿಸಿ ಪ್ರಮಾಣ ಪತ್ರ ಪಡೆಯಲು ತೊಂದರೆಯಾಗಿರುತ್ತದೆ.ಈ ಕುರಿತು ನಮ್ಮ ಸಮಾಜದ ವತಿಯಿಂದ ಈ ಹಿಂದೆಯೇ ಅನೇಕ ಅರ್ಜಿಗಳನ್ನು ಸಲ್ಲಿಸಿದ್ದು ಹಾಗೂ ಮಂಕಿ ರಾಮಕ್ಷತ್ರಿಯ ಬೃಹತ್ ಸಮಾವೇಶದ ಸಂದರ್ಭದಲ್ಲಿ ಮಾನ್ಯ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೂ ಮನವಿ ಸಲ್ಲಿಸಿದ್ದು ಇರುತ್ತದೆ.
ಈ ತನ್ನಮದ್ಯೆ ಕೇಂದ್ರ ಸರ್ಕಾರವು ಓಬಿಸಿ ಪಟ್ಟಿಯನ್ನು ರಚಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಿರುತ್ತದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಓಬಿಸಿ ಪಟ್ಟಿಯಲ್ಲಿ ಸೇರುವ ಜಾತಿಗಳಿದ್ದರೆ ಅವರು ಸಪ್ಟೆಂಬರ್ ೦೯, ೨೦೨೧ರ ಒಳಗೆ ಅರ್ಜಿ ಸಲ್ಲಿಸಲು ತಮ್ಮ ಇಲಾಖಾ ಪ್ರಕಟಣೆಯಲ್ಲಿ ತಿಳಿಸಿರುವುದರಿಂದ ನಮ್ಮಲ್ಲಿಯ ಹಿಂದೂ ಕ್ಷತ್ರಿಯ ಸಮಾಜವನ್ನು ಓಬಿಸಿ ಪಟ್ಟಿ ಸೇರಿಸುವ ಕುರಿತು ಮನವಿ ಸಲ್ಲಿಸಿರುತ್ತಿದ್ದೇವೆ ಎಂದು ರಾಮ ಕ್ಷತ್ರಿಯ ಸಮಾಜ ಮಂಕಿ ಇವರು ಬೇಡಿಕೆ ಇಟ್ಟಿದ್ದಾರೆ,
Be the first to comment