ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಕೊರೊನಾ ಆತಂಕದ ನಡುವೆಯೂ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದೇ ಜುಲೈ 19 ಹಾಗೂ 22 ರಂದು ಪರೀಕ್ಷೆಗಳು ನಡೆಯಲಿದ್ದು ರಾಜ್ಯದ KSRTC ಹಾಗೂ ಬಿಎಂಟಿಸಿ ನಿಗಮಗಳು
ವಿದ್ಯಾರ್ಥಿಗಳಿಗೆ ಪ್ರತಿವರ್ಷದಂತೆ ಈ ಬಾರಿಯೂ ತಮ್ಮ ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಸಂಚರಿಸಲು ಅನುವು ಮಾಡಿಕೊಟ್ಟಿದೆ . ಈ ನಿರ್ಧಾರ ಸ್ವಾಗತಾರ್ಹವಾದದ್ದು ಹಾಗೂ ಉತ್ತಮ ನಿರ್ಧಾರ ಎಂದು ಎನ್.ಎಸ್.ಯು.ಐ. ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ ತಿಳಿಸಿದ್ದಾರೆ.
Be the first to comment